ಆಳ ಸಮುದ್ರದಲ್ಲಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಮೀನುಗಾರರು
ಮಂಗಳೂರು ಡಿಸೆಂಬರ್ 11 : ಮಂಗಳೂರಿನಿಂದ ಆಳ ಸಮುದ್ರಕ್ಕೆ ಹೋದ ಮೀನುಗಾರಿಕಾ ಬೋಟ್ ಮುಳುಗಡೆಯಾದ ಘಟನೆ ಬೆಳಕಿಗೆ ಬಂದಿದೆ. ಮಂಗಳೂರಿನಿಂದ ಮಂದರ್ ಇಂಡಿಯಾ ಹೆಸರಿನ ಮೀನುಗಾರಿಕಾ ದೋಣಿ 4 ದಿನಗಳ ಹಿಂದೆ ಆಳ ಸಮುದ್ರ ಮೀನುಗಾರಿಕೆಗೆ ಹೋಗಿತ್ತು. ಕಿನಾರೆಯಿಂದ 32 ನಾಟಿಕಲ್ ಮೈಲ್ಸ್ ದೂರದಲ್ಲಿ ಈ ದೋಣಿ ಮುಳುಗಡೆಯಾಗಿದೆ.
ಮೀನುಗಾರಿಕೆ ಮುಗಿಸಿ ಮಂಗಳೂರು ಮೀನುಗಾರಿಕಾ ಬಂದರ್ ಗೆ ಹಿಂದಿರುಗುತ್ತಿದ್ದ ವೇಳೆ ತಾಂತ್ರಿಕ ದೋಷಕ್ಕೆ ಬೋಟ್ ಸಿಲುಕಿತ್ತು. ಈ ಸಂದರ್ಭದಲ್ಲಿ 8 ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು.

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಮುಳುಗಿದ ಬೋಟ್ ಹಾಗೂ ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ಮೀನುಗಾರಿಕೆಗೆ ತೆರಳಿದ್ದ ಮತ್ತೊಂದು ಬೋಟ್ ನ ಮೀನುಗಾರರು ರಕ್ಷಿಸಿದ್ದಾರೆ. ರಕ್ಷಣೆಗೆ ಒಳಗಾದ ಎಲ್ಲಾ ಮೀನುಗಾರರು ಸುರಕ್ಷಿತವಾಗಿ ದಡ ತಲುಪಿದ್ದಾರೆ.












Click it and Unblock the Notifications