Kannada Sahitya Sammelana: ಮಂಡ್ಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಬೆಂಗಳೂರು, ಡಿಸೆಂಬರ್ 18: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಡ್ಯದಲ್ಲಿ ಆಯೋಜನೆಗೊಂಡಿರುವ ನುಡಿಜಾತ್ರೆಗೆ ದಿನಗಣನೆ ಆರಂಭವಾಗಿದೆ. ಇದೇ ಡಿಸೆಂಬರ್ 20ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ ನಡೆಯಲಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಜಿಲ್ಲೆಯ ಶಾಲೆ ಮತ್ತು ಕಾಲೇಜುಗಳು ರಜೆ ಘೋಷಿಸಿದ್ದ ಬುಧವಾರ ಆದೇಶಿಸಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನವು ಪ್ರತಿ ವರ್ಷದಂತೆ ಈ ವರ್ಷವು ನಡೆಯುತ್ತಿದೆ. ಅದ್ಧೂರಿ ಆಚರಣೆಗೆ ಸಖಲ ಸಿದ್ಧತೆಯು ನಡೆದಿದೆ. ಸಮ್ಮೇಳನಾಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಈ ನುಡಿಜಾತ್ರೆಗೆ ಎಲ್ಲ ನಾಗರಿಕರು, ಮಹಿಳೆಯರು ಮಕ್ಕಳು ಆಗಮಿಸಬೇಕು, ಭಾಗವಹಿಸಬೇಕು ಎಂಬ ಉದ್ದೇಶವಿದೆ. ಈ ಕಾರಣದಿಂದಲೇ ಮಂಡ್ಯದ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ.

ಕನ್ನಡ ಕಂಪು ಪಸರಿಸುವ ಈ ಕನ್ನಡ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಜನರ ದಂಡೇ ಆಗಮಿಸಲಿದೆ. ವಿದ್ಯಾರ್ಥಿಗಳಿಗೂ ಕನ್ನಡ ಹಿರಿಮೆ, ವೈಭವ ತಿಳಿಯಲು ಇದೊಂದು ಉತ್ತಮ ವೇದಿಕೆ ಆಗಿರುವ ಕಾರಣ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಡಿಸೆಂಬರ್ 20 ಮತ್ತು 21ರಂದು ಎರಡು ದಿನಗಳ ಕಲಾ ಸಾರ್ವಜನಿಕ ರಜೆ ನೀಡಿ ಆದೇಶಿಸಿದ್ದಾರೆ.
ಡಿಸೆಂಬರ್ 20ರಿಂದ ಮೂರು ದಿನ ಅಂದರೆ ಡಿಸೆಂಬರ್ 22ರವರೆಗೂ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅರ್ಥಪೂರ್ಣ ಕನ್ನಡ ಹಬ್ಬದಾಚರಣೆಗೆ ಸಕ್ಕರೆ ನಾಡು ಮಂಡ್ಯ ಸಾಕ್ಷಿಯಾಗಲಿದೆ. ಹಿರಿಯ, ಕಿರಿಯ ಸಾಹಿತ್ಯಗಳು, ರಾಜಕೀಯ ಗಣ್ಯರು, ಸಿನಿಮಾ ತಾರೆಯರು, ಪುಸ್ತಕ ಪ್ರೇಮಿಗಳು, ಕನ್ನಡಪರ ಚಿಂತಕರು, ವಿಮರ್ಶಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಅದ್ಧೂರಿ ಮತ್ತು ಸಂಭ್ರಮದ ಕನ್ನಡದ ಪ್ರಮುಖ ಆಚರಣೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಈ ಕಾರಣದಿಂದಲೇ ಪ್ರಾಥಮಿಕ, ಪ್ರೌಢ ಮತ್ತು ದ್ವಿತೀಯ ಪಿಯುಸಿ ವರೆಗೆ (ಪದವಿ ಪೂರ್ವ ಕಾಲೇಜು) ರಜೆ ಘೋಷಿಸಲಾಗಿದೆ.
ಕಳೆದ ಭಾರಿ ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನವು ವಿಜೃಂಭಣೆಯಿಂದ ನಡೆದಿತ್ತು. ಈ ಬಾರಿ ಮಂಡ್ಯದಲ್ಲಿ ಆಯೋಜನೆ ಮಾಡಲಾಗಿದೆ. ಈ ಸಲದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಕನ್ನಡ ಸಮ್ಮೇಳನ ಸಲುವಾಗಿ ಜಿಲ್ಲೆಯಾದ್ಯಂತ ಪ್ರತಿ ಮನೆ ಮನೆಗಳ ಮೇಲೂ ಕನ್ನಡ ಭಾವುಟ ಹಾರಿಸುವಂತೆ ಕರೆ ನೀಡಲಾಗಿದೆ. ಮಂಡ್ಯ ಕಬ್ಬು, ಭತ್ತ ಬೆಳೆ ಜೊತೆಗೆ ನಾಟಿ ಕೋಟಿ ಸಾರು, ಮುದ್ದೆಗೆ, ಬಾಡೂಟಕ್ಕೂ ಸಖತ್ ಫೇಮಸ್ಸು. ಹೀಗಾಗಿ ಸಮ್ಮೇಳನದಲ್ಲಿ ಬಾಡೂಟ ನೀಡುವಂತೆ ಬೇಡಿಕೆ ಕೇಳಿ ಬಂದಿತ್ತು. ಆದರೆ ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರ ಸೊಪ್ಪು ಹಾಕಿಲ್ಲ ಎನ್ನಲಾಗಿದೆ.












Click it and Unblock the Notifications