ಕೊಡಗಿನ ಈ ಜೋಡಿ, ಮೋಟರ್ ಕ್ರೀಡೆಯಲ್ಲಿ ಮೋಡಿ!

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ: ಹಾಕಿ ಜತೆಗೆ ಮೋಟರ್ Rallyಯಲ್ಲಿ ಕೊಡಗಿನ ಯುವಕರು ಈಗ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿ ಆಗಾಗ್ಗೆ ದ್ವಿಚಕ್ರ, ನಾಲ್ಕು ಚಕ್ರವಾಹನಗಳ rally ನಡೆಯುತ್ತಿರುತ್ತದೆ.

ಹಾಗೆ ನೋಡಿದರೆ ಕೊಡಗಿನಲ್ಲಿ ಕ್ರೀಡಾಪಟುಗಳಿಗೇನು ಕೊರತೆಯಿಲ್ಲ. ಇಲ್ಲಿನವರು ಹಾಕಿ, ಕ್ರಿಕೆಟ್ ನಿಂದ ಹಿಡಿದು ಎಲ್ಲ ರೀತಿಯ ಆಟಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಯುವಕರಲ್ಲಿ ಬೈಕ್, ಕಾರ್ ರೇಸ್ ಗಳ ಕ್ರೇಜ್ ಜಾಸ್ತಿಯಾಗುತ್ತಿದೆ.

ಕೊಡಗಿನಲ್ಲಿ rally ಪಟುಗಳಾದ ಕೊಂಗೇಟಿರ ಬೋಪಯ್ಯ ಮತ್ತು ಕೊಂಗಂಡ ಕುರುಂಬಯ್ಯ ಅವರಿಗೆ ಉತ್ತಮ ಹೆಸರಿದ್ದು, ಜಿಲ್ಲೆ ಮಾತ್ರವಲ್ಲದೆ ಹೊರಗೆ ನಡೆಯುವ ರಾಷ್ಟ್ರೀಯ ಮಟ್ಟದ ಕಾರು rallyಗಳಲ್ಲಿ ಭಾಗವಹಿಸಿ ಗಮನಸೆಳೆಯುತ್ತಿದ್ದಾರೆ.

ಇದಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿರುವ ಈ ಜೋಡಿ ಕೊಡಗಿನ ದುರ್ಗಮ ಹಾದಿ ಬೆಟ್ಟಗುಡ್ಡಗಳಲ್ಲಿ ತಮ್ಮ ಅಭ್ಯಾಸವನ್ನು ಮಾಡುತ್ತಾ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

ಕೊಯಂಬತ್ತೂರ್-2016ರ Rallyಯಲ್ಲಿ

ಕೊಯಂಬತ್ತೂರ್-2016ರ Rallyಯಲ್ಲಿ

ಇತ್ತೀಚೆಗೆ ಆಫ್ ಕೊಯಂಬತ್ತೂರ್-2016ರ ರ್ಯಾಲಿಯಲ್ಲಿ ಭಾಗವಹಿಸಿದ್ದ ಈ ಜೋಡಿ ಕ್ರಮವಾಗಿ ಎರಡನೇ ಮತ್ತು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.

ಹವ್ಯಾಸಿ ಹಾಗೂ ವೃತ್ತಿ ಚಾಲಕರಿದ್ದಾರೆ

ಹವ್ಯಾಸಿ ಹಾಗೂ ವೃತ್ತಿ ಚಾಲಕರಿದ್ದಾರೆ

ಕೊಡಗಿನ ಜಿಲ್ಲೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ದ್ವಿಚಕ್ರ, ನಾಲ್ಕುಚಕ್ರವಾಹನಗಳ rally ಜನಪ್ರಿಯವಾಗುತ್ತಿದ್ದು, ಇಲ್ಲಿನ ದುರ್ಗಮ ಹಾದಿ, ಬೆಟ್ಟಗುಡ್ಡಗಳಲ್ಲಿ ಜಿಲ್ಲಾ, ರಾಜ್ಯಮಟ್ಟದ rally ನಡೆಸಿ ಗಮನಸೆಳೆಯುತ್ತಿದ್ದಾರೆ. ಇಲ್ಲಿನ ಯುವಕರು ಯುವತಿಯರು ಕೂಡ ವಾಹನ rallyಯನ್ನು ಹವ್ಯಾಸವನ್ನಾಗಿ ತೆಗೆದುಕೊಂಡಿದ್ದು ಕೊಡಗಿನ ಹೊರಗೆ ನಡೆಯುವ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವಿನ ನಗೆ ಬೀರುತ್ತಾ ಬಂದಿದ್ದಾರೆ.

ಎರಡನೇ ಮತ್ತು ನಾಲ್ಕನೇ ಸ್ಥಾನ ಪಡೆದ ಕೊಡಗಿನ ಜೋಡಿ

ಎರಡನೇ ಮತ್ತು ನಾಲ್ಕನೇ ಸ್ಥಾನ ಪಡೆದ ಕೊಡಗಿನ ಜೋಡಿ

ಎರಡು ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ಫಸ್ಟ್ ರೌಂಡ್ ಆಫ್ ಇಂಡಿಯನ್ ನ್ಯಾಷನಲ್ rally ಚಾಂಪಿಯನ್ ಶಿಪ್ ನ ಓಸ್ವೇಗನ್ ಫೆಲೋ 2000 ಕಪ್ ಕ್ಲಾಸ್ ನಲ್ಲಿ ಕ್ರಮವಾಗಿ ಎರಡನೇ ಮತ್ತು ನಾಲ್ಕನೇ ಸ್ಥಾನ ಪಡೆದು ಮಿಂಚಿದ್ದಾರೆ. ರಾಷ್ಟ್ರದಾದ್ಯಂತ ಬಂದಿದ್ದ ಸುಮಾರು 39 rally ಪಟುಗಳ ಪೈಕಿ ಇವರು 2ನೇ ಮತ್ತು 4ನೇ ಸ್ಥಾನ ಪಡೆದಿರುವುದು ಸಾಧನೆಯೇ ಸರಿ.

ಕೊಡಗಿನ ಜೋಡಿ ಮೋಟಾರು ಕ್ರೀಡೆಯಲ್ಲಿ ಸಾಧನೆ

ಕೊಡಗಿನ ಜೋಡಿ ಮೋಟಾರು ಕ್ರೀಡೆಯಲ್ಲಿ ಸಾಧನೆ

rallyಯ ಸಂದರ್ಭ ಕೊಂಗೇಟಿರ ಬೋಪಯ್ಯ ಡ್ರೈವರ್ ಆಗಿಯೂ, ಕೊಂಗಂಡ ಕರುಂಬಯ್ಯ ನ್ಯಾವಿಗೇಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಜೋಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯ ನಿರೀಕ್ಷೆಯಲ್ಲಿದ್ದು ಅದಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
MRF FMSCI Indian National Rally Championship held at Coimbatore recently. Bopaiah K.M. (Karumbaiah G) secured second place in INRC 2000 VW category. Here is an article about the achievements of duo.
Please Wait while comments are loading...