ಅಲಿಗಢ್ ಧರ್ಮ ಸಂಸದ್: ಸಾಧ್ವಿ ಅನ್ನಪೂರ್ಣ ಭಾರತಿ ವಿವಾದಾತ್ಮಕ ಹೇಳಿಕೆ
ದೇಶದಲ್ಲಿ ಧಾರ್ಮಿಕ ಬಿಕ್ಕಟ್ಟು ಮುಂದುವರೆದಿದೆ. ಧಾರ್ಮಿಕ ಮುಖಂಡ ಯತಿ ನರಸಿಂಹಾನಂದ ಬಳಿಕ ಸದ್ಯ ಮತ್ತೊಬ್ಬರೂ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಉತ್ತರ ಪ್ರದೇಶದ ಅಲಿಘರ್‌ನಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ಹೊರಬಂದಿದೆ. ಸಾಧ್ವಿ ಅನ್ನಪೂರ್ಣ ಭಾರತಿ ಹಿಂದೂ ಮಹಿಳೆಯರಿಗೆ ಹೆಚ್ಚು ಮಕ್ಕಳಿಗೆ ಜನ್ಮ ನೀಡುವಂತೆ ಸೂಚಿಸಿದ್ದಾರೆ.
ಉತ್ತರಪ್ರದೇಶದ ಅಲಿಗಡ್‌ನಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮಾತನಾಡಿದ ಅವರು, ಹಿಂದೂಗಳಿಗೆ 'ಹಿಂದೂ ರಾಷ್ಟ್ರ'ವಾಗಿ ಮುಂದುವರೆಯಲು ಜನಸಂಖ್ಯೆಯನ್ನು ಹೆಚ್ಚಿಸುವುದು ಅಗತ್ಯ ಎಂದು ಹೇಳಿದರು. ಹಿಂದೂ ಜನರನ್ನು ಉಳಿಸಲು ಮತ್ತು ಅವರಿಗೆ ಹಿಂದೂ ರಾಷ್ಟ್ರವನ್ನು ನೀಡಲು, ಸಮರ್ಥರು ಸಾಧ್ಯವಾದಷ್ಟು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಭಾರತಿ ಸೂಚನೆ ನೀಡುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಜೊತೆಗೆ ಅವರಿಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದಾರೆ.
ಈ ಕಾರ್ಯಕ್ರಮವನ್ನು ಅಲಿಗಡ್‌ನಲ್ಲಿ ಭಾರತಿ ಆಯೋಜಿಸಿದ್ದರು. ಆದರೆ ವೇದಿಕೆಯಲ್ಲಿದ್ದ ಬ್ಯಾನರ್‌ನಲ್ಲಿ ಅಲಿಗಡ್ ಎಂಬುದಕ್ಕೆ ಸ್ಥಳವನ್ನು ನಮೂದಿಸಲಾಗಿಲ್ಲ ಬದಲಿಗೆ 'ಹರಿಗಡ್' ಎಂದು ಬರೆಯಲಾಗಿತ್ತು. ಜನರ ಒಂದು ವಿಭಾಗ, ಬಹುತೇಕ ಬಲಪಂಥೀಯ ಗುಂಪುಗಳು ಅಲಿಘರ್‌ನ ಹೆಸರನ್ನು 'ಹರಿಗಡ್' ಎಂದು ಬದಲಾಯಿಸಲು ಒತ್ತಾಯಿಸುತ್ತಿವೆ. ಇದೇ ಹೆಸರನ್ನು ಬ್ಯಾನರ್ ಮೇಲೆ ಬಳಕೆ ಮಾಡಲಾಗಿತ್ತು.

ಹರಿದ್ವಾರ ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಯತಿ ನರಸಿಂಹಾನಂದ ಸರಸ್ವತಿ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಕ್ಕಳಿಗೆ ಹೆಚ್ಚು ಜನ್ಮ ನೀಡಿ ಎಂಬ ಭಾರತಿಯ ಕರೆಯನ್ನು ಅವರು ಬೆಂಬಲಿಸಿದರು.
"ನಾವು ನಿಮಗೆ ಮಾರ್ಗದರ್ಶನ ನೀಡಬಹುದು, ನಿಮಗೆ ಅರ್ಥವಾಗುವಂತೆ ಹೇಳಬಹುದು. ಇದರ ಹೊರತಾಗಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಿ ಮತ್ತು ಅವರ ಕುಟುಂಬವನ್ನು ಕಾಪಾಡುವಲ್ಲಿ ಅವರನ್ನು ಸಮರ್ಥರನ್ನಾಗಿ ಮಾಡಿ" ಎಂದು ಗಾಜಿಯಾಬಾದ್‌ನಲ್ಲಿ ಪ್ರಬಲ ದಾಸನಾ ದೇವಿ ದೇವಸ್ಥಾನದ 58 ವರ್ಷದ ಮುಖ್ಯಸ್ಥ ಯತಿ ನರಸಿಂಹಾನಂದ್ ಹೇಳಿದ್ದಾರೆ.

ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಇಂತಹ ವಿವಾದಾತ್ಮಕ ಹೇಳಿಕೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಇಂತಹ ಸಭೆಯ ಸಮಯದಲ್ಲಿ ಮಾಡಿದ ದ್ವೇಷದ ಭಾಷಣಗಳ ವಿರುದ್ಧ ಸುಪ್ರೀಂ ಕೋರ್ಟ್ ರಾಜ್ಯ ಆಡಳಿತಕ್ಕೆ ಎಚ್ಚರಿಕೆ ನೀಡಿದೆ. ನಂತರ ಉತ್ತರಾಖಂಡ್ ಪೊಲೀಸರು ರೂರ್ಕಿಯಲ್ಲಿ 'ಧರ್ಮ ಸಂಸದ್' ನಡೆಸಲು ಅನುಮತಿ ನಿರಾಕರಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ದ್ವೇಷಪೂರಿತ ಭಾಷಣಗಳು ನಡೆದಿದ್ದು, ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿತ್ತು. ಇಂಥಹ ಹೇಳಿಕೆಯನ್ನು ನೀಡಿದ ಯತಿ ನರಸಿಂಹ ಅವರನ್ನು ಬಂಧಿಸಲಾಗಿತ್ತು ಬಳಿಕ ಅವರು ಜಾಮೀನನ ಮೇಲೆ ಹೊರಬಂದಿದ್ದಾರೆ. ಆದರೂ ಇಂಥಹ ಹೇಳಿಕೆಗಳು ಹೊರಬರುತ್ತಲೇ ಇವೆ.












Click it and Unblock the Notifications