ಕೊಪ್ಪಳದಿಂದ ಬಿಜೆಪಿ ಟಿಕೆಟ್ ಪಡೆದ ವೈದ್ಯ ಬಸವರಾಜ ಕ್ಯಾವಟರ್ ಯಾರು? ಇವರ ಹಿನ್ನೆಲೆ ಏನು?
ಕೊಪ್ಪಳ ಮಾರ್ಚ್ 14: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕೂಡ ಒಂದು. ಬಿಜೆಪಿ ಗಟ್ಟಿಯಾಗಿ ನೆಲೆನಿಂತಿದ್ದ ಈ ಕ್ಷೇತ್ರದಲ್ಲಿ ಚುನಾವಣೆ ಸಿದ್ಧತೆ ಭರದಿಂದ ಸಾಗಿದೆ. ಆದರೆ ಈ ಕ್ಷೇತ್ರದಲ್ಲಿ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕಿದ್ದು ಭಾರೀ ಕುತೂಹಲವನ್ನು ಮೂಡಿಸಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಬಿಜೆಪಿಯಿಂದ ಸಂಸರಾಗಿದ್ದ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಟಿಕೆಟ್ ಲಭಿಸಿಲ್ಲ. ಬದಲಿಗೆ ವೃತ್ತಿಯಲ್ಲಿ ವೈದ್ಯರಾಗಿರುವ ಬಸವರಾಜ ಕ್ಯಾವಟರ್ (Dr Basavaraj S Kyavator) ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ.

ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯರೂ ಆದ ಬಸವರಾಜ ಪಕ್ಷದ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದು ಕಡಿಮೆ. ಆದರೂ ಬಿಜೆಪಿ ಹೈಕಮಾಂಡ್ ಅವರಿಗೆ ಟಿಕೆಟ್ ನೀಡಿದ್ದು ಅಚ್ಚರಿ ತಂದಿದೆ. ಹಾಗಾದರೆ ಬಿಜೆಪಿ ಬಸವರಾಜ ಕ್ಯಾವಟರ್ ಅವರಿಗೆ ಕೊಪ್ಪಳ ಟಿಕೆಟ್ ನೀಡಲು ಕಾರಣ ಏನು? ಇವರಿಗೆ ಟಿಕೆಟ್ ಸಿಕ್ಕಿದ್ದು ಹೇಗೆ? ಬಸವರಾಜ ಕ್ಯಾವಟರ್ ಯಾರು ಅನ್ನೋ ಬಗ್ಗೆ ತಿಳಿಯೋಣ.
ಬಸವರಾಜ ಕ್ಯಾವಟರ್ ಯಾರು?
1994ರಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿದ್ದ ಕೆ. ಶರಣಪ್ಪ ಅವರ ಪುತ್ರ ಬಸವರಾಜ ಕ್ಯಾವಟರ್. ಶರಣಪ್ಪ ಒಂದು ಸಲ ಶಾಸಕರಾಗಿ ಬಳಿಕ ಮೂರು ಬಾರಿ ಸ್ಪರ್ಧಿಸಿ ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡಿದ್ದರು. ಹಿಂದಿನ ಲೋಕಸಭಾ ಚುನಾವಣೆ ವೇಳೆ ಶರಣಪ್ಪ ತೆನೆ ತೊರೆದು ಕಮಲದ ಕೈ ಹಿಡಿದಿದ್ದರು.

ಬಸವರಾಜ ಕ್ಯಾವಟರ್ ಅವರು ಕುಷ್ಟಗಿಯ ಮಾಜಿ ಶಾಸಕರು ಮತ್ತು ಎಚ್‌ಕೆಡಿಬಿ ಮಾಜಿ ಅಧ್ಯಕ್ಷ ಕೆ ಶರವಣ್ಣ ಮತ್ತು ಶಾಂತಮ್ಮ ದಂಪತಿಗಳ ಕಿರಿಯ ಮಗ. ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣವನ್ನು ಕುಷ್ಟಗಿಯಲ್ಲಿ ಪಡೆದ ಇವರು, ಪದವಿಪೂರ್ವ ಶಿಕ್ಷಣವನ್ನು ಗುಲ್ಬರ್ಗದಲ್ಲಿ ಪೂರ್ಣಗೊಳಿಸಿದರು. ನಂತರ ಎಂಬಿಬಿಎಸ್ ವೈದ್ಯಕೀಯ ಪದವಿಯನ್ನು ಬೆಳಗಾವಿಯ ಜವಹರಲಾಲ್ ವೈದ್ಯಕೀಯ ಕಾಲೇಜಿನಲ್ಲಿ ಪಡೆದರು.
ಮಾತ್ರವಲ್ಲದೆ ಬಸವರಾಜ ಕ್ಯಾವಟರ್ ಅವರು ವಿದೇಶದಲ್ಲೂ ಶಿಕ್ಷಣ ಪಡೆದಿದ್ದಾರೆ. ಎಂಸಿಎಚ್ ಪದವಿಯನ್ನು ಇಂಗ್ಲೆಂಡ್‌ನಲ್ಲಿ ಹಾಗೂ ಫೇಲೋಷಿಪ್ ಪದವಿಯನ್ನು ಅಮೇರಿಕಾದಲ್ಲಿ ಪಡೆದು 2006ರಲ್ಲಿ ಕೆಲವು ವರ್ಷಗಳ ಕಾಲ ಇಂಗ್ಲೆಂಡ್‌ನ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಸೇವೆ ಮಾಡಿದ್ದಾರೆ. ಸದ್ಯ ಇವರು ಕೊಪ್ಪಳ ನಗರದಲ್ಲಿರುವ ಕೆಎಸ್ ಆಸ್ಪತ್ರೆಯ ಸಂಸ್ಥಾಪಕರಾಗಿದ್ದಾರೆ.
2019ರಲ್ಲೇ ಎಂಪಿ ಟಿಕೆಟ್‌ಗೆ ಪ್ರಯತ್ನ
2019ರಲ್ಲೇ ಬಸವರಾಜ ಕ್ಯಾವಟರ್ ಅವರು ಎಂಪಿ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರು. ಆಗ ಕೈ ತಪ್ಪಿತ್ತು. ಈ ಬಾರಿ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಸವರಾಜ ಕ್ಯಾವಟರ್ ಅವರು ಹೊಸ ಮುಖವಾಗಿದ್ದರೂ ಸಹ ಅವರ ಕುಟುಂಬವು ರಾಜಕಾರಣದಲ್ಲಿದೆ. ಬಸವರಾಜ ಕ್ಯಾವಟರ್ ಅವರು ಸಹೋದರ ಕೆ.ಮಹೇಶ ಬಿಜೆಪಿಯಿಂದಲೇ ಕುಷ್ಟಗಿ ತಾಲ್ಲೂಕಿನ ಹೀರೇಮನ್ನಾಪುರ ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿದ್ದರು. ಹೀಗಾಗಿ ಇವರ ಕುಟುಂಬಕ್ಕೆ ಮೊದಲಿನಿಂದಲೂ ರಾಜಕೀಯ ನಂಟು ಇದೆ.
ತಂದೆಯ ರಾಜಕೀಯ ನೆರಳಿನಲ್ಲಿ ಸಾಗಿದ್ದ ಬಸವರಾಜ ನೇರವಾಗಿ ರಾಜಕೀಯದಲ್ಲಿ ಪಾಲ್ಗೊಂಡಿದ್ದು ಇತ್ತೀಚೆಗಿನ ವರ್ಷಗಳಲ್ಲಿ ಮಾತ್ರ. ಆದರೆ ಎಲ್ಲ ಪಕ್ಷಗಳ ಮುಖಂಡರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ತಂದೆಯ ಪ್ರಭಾವದಿಂದ ಮಗನ ವರ್ಚಸ್ಸು ಕೂಡ ಹಂತ ಹಂತವಾಗಿ ಬೆಳೆಯಿತು.
ಕರಡಿಗೆ ಕೈ ಕೊಟ್ಟ ಬಿಜೆಪಿ
ಬಿಜೆಪಿ ಟಿಕೆಟ್ ಘೋಷಣೆಗೂ ಮುನ್ನ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೊಡದಿರುವಂತೆ ಅನೇಕರು ದೆಹಲಿಗೆ ಹೋಗಿ ಮನವಿ ಮಾಡಿ ಬಂದಿದ್ದು ಕೈಹಿಡಿದಂತೆ ಕಾಣುತ್ತಿದೆ. ಈ ನಡುವೆ ಸಂಸದ ಸಂಗಣ್ಣ ಕರಡಿ ಅವರ ಜೊತೆಗೆ ಮುನಿಸಿಕೊಂಡಿದ್ದವರನ್ನು ಒಗ್ಗೂಡಿಸುವಲ್ಲಿ ಡಾ. ಬಸವರಾಜ ಯಶಸ್ವಿಯಾದರು.
ಕರಡಿ ಸಂಗಣ್ಣ ಬೇರೆ ಶಾಸಕರ ಚುನಾವಣೆ, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿಲ್ಲವೆನ್ನಲಾಗುತ್ತಿದೆ. ಹೀಗಾಗಿ ಅವರಿಗೆ ಟಿಕೆಟ್ ಕೊಡದಿರಲು ಹೈಕಮಾಂಡ್ ಮೇಲೆ ಒತ್ತಡ ಹೇರಲಾಗಿತ್ತು. ಜೊತೆಗೆ ಜಿಲ್ಲೆಯಲ್ಲಿ ಕರಡಿ ಅನೇಕರೊಂದಿಗೆ ವೈಮನಸ್ಸು ಹೊಂದಿದ್ದು ಅವರಿಗೆ ಟಿಕೆಟ್ ಕೈತಪ್ಪಲು ಪ್ರಮುಖ ಕಾರಣವಾಗಿದೆ.
ಬಸವರಾಜ ಅವರನ್ನು ಬಹಿರಂಗವಾಗಿಯೇ ಸಂಸದ ಸಂಗಣ್ಣ ಕರಡಿ ಅವರ ವಿರುದ್ಧ ದೆಹಲಿಯಯವರೆಗೂ ಕರೆದುಕೊಂಡು ಹೋಗಿ, ಹೈಕಮಾಂಡ್ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ವಿಯಾದರು. ಪರಿಣಾಮ ಇತ್ತೀಚೆಗೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಡಾ.ಕೆ. ಬಸವರಾಜ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಸವರಾಜ ಅವರಿಗೆ ಟಿಕೆಟ್ ಸಿಗುವ ಬಗ್ಗೆ ಮೊದಲೇ ತಿಳಿಸಿದಿದ್ದಂತೆ ಕಂಡು ಬಂದಿದ್ದು, ಅವರು ಕಳೆದ ಆರು ತಿಂಗಳುಗಳಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ಪಡೆಯುವ ಕಾರ್ಯದಲ್ಲಿ ತೊಡಗಿದ್ದಾರೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications