ಕೋಲಾರ: ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ

Posted By:
Subscribe to Oneindia Kannada

ಕೋಲಾರ, ಜನವರಿ 10: ತಾಲ್ಲೂಕಿನ ದೊಡ್ಡವಲ್ಲಬಿ ಗ್ರಾಮದಲ್ಲಿ ಯುವತಿಯನ್ನು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯಲಹಂಕ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಕೋಲಾರದ ವೇಮಗಲ್ಲಿಗೆ ಸ್ಥಳಾಂತರಿಸಲಾಗಿದೆ.

ವೇಮಗಲ್ ಠಾಣಾ ವ್ಯಾಪ್ತಿಯ ದೊಡ್ಡವಲ್ಲಬಿಯಲ್ಲಿ ಇಪ್ಪತ್ನಾಲ್ಕು ವರ್ಷ ಹರೆಯದ ಯುವತಿಯನ್ನು ಮೂವರು ದುಷ್ಕರ್ಮಿಗಳು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಯಲಹಂಕ ಠಾಣೆಯಲ್ಲಿ ಜನವರಿ 8ರಂದು ದೂರು ದಾಖಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ವ್ಯಾಪ್ತಿ ಕೋಲಾರವಾದ್ದರಿಂದ ದೂರನ್ನು ಕೋಲಾರದ ವೇಮಗಲ್ಲು ಠಾಣೆಗೆ ವರ್ಗಾಯಿಸಲಾಗಿದೆ.[ಚಿಕ್ಕಬಳ್ಳಾಪುರ : ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ]

woman gang raped by three people in doddavallbi village in kolar

ಇನ್ನು ಈ ಘಟನೆ ಕುರಿತು ಸ್ಥಳೀಯ ಅಮರ್ ಮತ್ತು ಆತನ ಸಹಚರರು ಈ ದುಷ್ಕೃತ್ಯವೆಸಗಿರುವುದಾಗಿ ತಿಳಿದು ಬಂದಿದೆ. ಸಂತ್ರಸ್ತ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನಲಾಗಿದೆ.

ಮೇಮಗಲ್ ಠಾಣಾ ಪೊಲೀಸರು ಅಪಹರಣ ಮತ್ತು ಅತ್ಯಾಚಾರ ಸಂಬಂಧ ಕೇಸ್ ಫೈಲ್ ಮಾಡಿದ್ದು ತನಿಖೆಗೆ ಮುಂದಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
woman gang raped by three people in doddavallbi village in kolar. Yelahanka police registered a case has been transferred to vemagal station.
Please Wait while comments are loading...