ಲೋಕಸಭಾ ಚುನಾವಣೆ: ಎನ್‌ಡಿಎನಿಂದ ಸಮೃದ್ಧಿ ಮಂಜುನಾಥ್- ಕಾಂಗ್ರೆಸ್‌ನಿಂದ ಎಚ್.ನಾಗೇಶ್ ಹೆಸರು ಮುನ್ನೆಲೆಗೆ
ಕೋಲಾರ ಫೆಬ್ರವರಿ 19: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಗೆಲ್ಲಬಹುದಾದ ಅಭ್ಯರ್ಥಿ ಆಯ್ಕೆ ವಿಚಾರ ಎಲ್ಲಾ ರಾಜಕೀಯ ಪಕ್ಷಗಳಿಗೆ ತಲೆನೋವಾಗಿದ್ದು, ಕೋಲಾರ ಲೋಕಸಭೆಯಿಂದ ಬಲಗೈ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎರಡೂ ಕಡೆ ತಯಾರಿ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಹೌದು ಕೋಲಾರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ದಲಿತ ಮತದಾರರೇ ನಿರ್ಣಾಯಕ. ಅದರಲ್ಲಿಯೂ ಪರಿಶಿಷ್ಟ ಜಾತಿಯಲ್ಲಿ ಬಲಗೈ ಸಮುದಾಯದ ಮತದಾರರು ಹೆಚ್ಚಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಬಲಗೈ ಸಮುದಾಯದ ಅಭ್ಯರ್ಥಿಗಳಿಗೆ ಈ ಬಾರಿ ಆದ್ಯತೆ ನೀಡಲು ರಣತಂತ್ರ ನಡೆಯುತ್ತಿದೆ. ಎನ್ನುವ ಗುಸು ಗುಸು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈಗಾಗಲೇ ರಾಷ್ಟ್ರೀಯ ನಾಯಕರ ಹಂತದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ -ಜೆಡಿಎಸ್ ಪಕ್ಷಗಳ ಎನ್‌ಡಿಎ ಅಭ್ಯರ್ಥಿಯಾಗಿ ಸಮೃದ್ಧಿ! ಮಂಜುನಾಥ್ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನುತ್ತಿವೆ ಬಲ್ಲ ಕೆಲ ವಿಶ್ವಸನೀಯ ಮೂಲಗಳು.
ಬಿಜೆಪಿ -ಜೆಡಿಎಸ್ ಮೈತ್ರಿ ಎನ್ ಡಿಎ ಕೂಟವೂ ಸಮುದಾಯ ಬಲಗೈ ದಲಿತ ಅಭ್ಯರ್ಥಿ ಕಣಕ್ಕಿಳಿಸಲು ತಯಾರಿ ನಡೆದಿದ್ದು, ಕಾಂಗ್ರೆಸ್ ಪಕ್ಷದಿಂದ ಬಲಗೈ ಸಮುದಾಯ ಅಭ್ಯರ್ಥಿಗೆ ಟಿಕೆಟ್ ಸಿಕ್ಕರೆ ಕೋಲಾರ ಲೋಕಸಭೆ ಕಾಂಗ್ರೆಸ್‌ಗೆ ಸುಲಭದ ತುತ್ತು ಎಂದು ವಿಶ್ಲೇಷಿಸಲಾಗುತ್ತಿದೆ.
ಹಿನ್ನೆಲೆಯಲ್ಲಿ ಕೆ.ಎಚ್. ಮುನಿಯಪ್ಪ ಕುಟುಂಬದ ಅಭ್ಯರ್ಥಿಗಳನ್ನು ಹೊರತು ಪಡಿಸಿ, ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸುತ್ತಿರುವ ಉಳಿದ ಎಲ್ಲ ಅಭ್ಯರ್ಥಿಗಳು ಬಲಗೈ ಸಮುದಾಯದವರು ಎಂಬುದು ವಿಶೇಷವಾಗಿದೆ. ಅದರಂತೆ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಸಿ.ಎಂ. ಮುನಿಯಪ್ಪ, ಮುದ್ದುಗಂಗಾಧರ್ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ಎಚ್.ನಾಗೇಶ್ ಹೆಸರು ಮುನ್ನೆಲೆಗೆ!
ಕೋಲಾರ ಲೋಕಸಭೆ ಟಿಕೆಟ್‌ಗೆ ತೀವ್ರ ಪೈಪೋಟಿ ಏರ್ಪಟ್ಟಿರುವುದರ ನಡುವೆಯೇ ಮುಳಬಾಗಲು ಮಾಜಿ ಸಚಿವ ಎಚ್ . ನಾಗೇಶ್ ಅವರ ಹೆಸರು ಕಾಂಗ್ರೆಸ್‌ನಿಂದ ಕೇಳಿಬರುತ್ತಿರುವುದು ಅಚ್ಚರಿ ಮೂಡಿಸಿದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.
ಬಲಗೈ ಸಮುದಾಯಕ್ಕೆ ಸೇರಿದಂತಹ ನಾಗೇಶ್‌ಗೆ ಟಿಕೆಟ್ ನೀಡಿದರೆ ಬಲಗೈ ಸಮುದಾಯದ 3.80 ಲಕ್ಷ ಮತಗಳು, 2.40 ಅಲ್ಪಸಂಖ್ಯಾತ ಮತಗಳು ಹಾಗೂ ಇತರೆ ಹಿಂದುಳಿದವರ ಮತಗಳನ್ನು ಪಡೆದು ಸುಲಭವಾಗಿ ಗೆಲುವು ಸಾಧ್ಯವಾಗುತ್ತದೆ. ಒಂದೊಮ್ಮೆ ಎನ್‌ಡಿಎ ಅಭ್ಯರ್ಥಿಯೂ ಬಲಗೈನವರೇ ಆದರೂ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮತಗಳು ಕೈಹಿಡಿಯುತ್ತ ವೆಂಬ ಲೆಕ್ಕಾಚಾರ ನಡೆಯುತ್ತಿದೆ.

ಕೊತ್ತೂರು ಜತೆ ಸಂಧಾನಕ್ಕೆ ಪ್ರಯತ್ನ!
ಮಾಜಿ ಸಚಿವ ಎಚ್.ನಾಗೇಶ್ ಅವರು ಕೊತ್ತೂರು ಮಂಜುನಾಥ್ ನಡುವೆ ವೈಮನಸ್ಸಿದ್ದು, ಇಬ್ಬರ ನಡುವೆ ಸಂಧಾನ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. 2018 ಚುನಾವಣೆಯಲ್ಲಿ ನಾಗೇಶ್ ಗೆಲುವು ಸಾಧಿಸಿದ ಬಳಿಕ ಇಬ್ಬರ ನಡುವೆ ಬಿಕ್ಕಟ್ಟು ಮೂಡಿತ್ತು. ಆ ಹಿನ್ನೆಲೆಯಲ್ಲಿ ಮುನಿಸು ಶಮನಕ್ಕೆ ವರಿಷ್ಠರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದ್ದು, ಯಾವುದು ಅಂತಿಮವಾಗಿಲ್ಲ. ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದನ್ನು ಕಾಡುನೋಡಬೇಕಿದೆ.
ಪ್ರಸ್ತುತ ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರವನ್ನು ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನ ಮುಂದುವರೆಸಿರುವ ಎನ್.ಡಿ.ಎ ಮೈತ್ರಿ ಕೂಟವು ಕಾಂಗ್ರೆಸ್ ಪಕ್ಷದ ತಂತ್ರಕ್ಕೆ ಪ್ರತಿ ತಂತ್ರವಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟವಾದ ಎನ್.ಡಿ.ಎ ಸಹ ಅಳೆದು ತೂಗಿ ಅಭ್ಯರ್ಥಿ ಆಯ್ಕೆಗೆ ಮುಂದಾಗಿದ್ದು ಬಹುಸಂಖ್ಯಾತ ಮತಗಳನ್ನು ಹೊಂದಿರುವ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಲು ಬಿಜೆಪಿ-ಜೆಡಿಎಸ್ ಮೈತ್ರಿ ಕೂಟವೂ ತಂತ್ರಗಾರಿಕೆ ನಡೆಸುತ್ತಿದ್ದು, ಎನ್‌ಡಿಎ ಅಭ್ಯರ್ಥಿಯಾಗಿ ಸಮೃದ್ಧಿ ಮಂಜುನಾಥ್ ಕಣಕ್ಕಿಳಿಯುವುದು ಬಹುತೇಕ ಖಚಿತವೆಂಬ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿದೆ.
ಕಾಂಗ್ರೆಸ್ ಪಕ್ಷದಿಂದ ಎಡಗೈ ಸಮೃದ್ಧಿ ಮಂಜುನಾಥ್ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ, ಸುಲಭವಾಗಿ ಗೆಲುವು ಸಾಧಿಸಬಹುದೆಂಬ ಲೆಕ್ಕಾಚಾರವನ್ನು ಎನ್ ಡಿಎ ಕೂಟ ಹೊಂದಿದೆ. ಈ ನಡುವೆ ಬಲಗ್ಗೆ ಸೇರಿದ ನಿಸರ್ಗ ನಾರಾಯಣಸ್ವಾಮಿ, ಭೋವಿ ಸಮುದಾಯದ ಮಲ್ಲೇಶ್‌ಬಾಬು ಅವರ ಹೆಸರು ಕೇಳಿಬರುತ್ತಿವೆ.
ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ
ಲಕ್ಷ್ಮೀನಾರಾಯಣ, ಮಾತನಾಡಿ ಕಾಂಗ್ರೆಸ್ ಟಿಕೆಟ್ ಗಾಗಿ ಸಾಕಷ್ಟು ಜನರು ಅರ್ಜಿಗಳನ್ನು ಹಾಕಿದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪಕ್ಷಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸಿಕೊಂಡು ಬರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.












Click it and Unblock the Notifications