ಕದಂಬೋತ್ಸವದ ಶಾಮಿಯಾನ ಬಿಲ್ ಪಾವತಿಸದ ಉತ್ತರ ಕನ್ನಡ ಜಿಲ್ಲಾಡಳಿತ: ಮಾಲಿಕ ಕಣ್ಣೀರು
ಕಾರವಾರ, ನವೆಂಬರ್, 14: ಕನ್ನಡಿಗರ ಮೊದಲ ರಾಜಧಾನಿ ಬಸವಾಸಿಯಲ್ಲಿ ಕದಂಬೋತ್ಸವವನ್ನು ಪ್ರತಿ ವರ್ಷ ಸರ್ಕಾರದಿಂದ ಆಚರಿಸಲಾಗುತ್ತದೆ. ಆದರೆ 2020ರ ನಂತರ ಕೋವಿಡ್ ಸೇರಿದಂತೆ ಇನ್ನಿತರ ಕಾರಣದಿಂದ ಉತ್ಸವವನ್ನು ಸರ್ಕಾರ ಆಚರಣೆ ಮಾಡಿರಲಿಲ್ಲ. ಆದರೆ 2020ರ ಉತ್ಸವದಲ್ಲಿ ಪೆಂಡಲ್ ಮಾಲಿಕರ ಬಳಿ ಸರ್ಕಾರ ಲಕ್ಷಾಂತರ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದೆ. ಬಾಕಿ ಬಿಲ್ ಪಾವತಿಸುವಂತೆ ಮಾಲಿಕರು ಕಚೇರಿಗೂ ಮನೆಗೂ ಕಳೆದ ಎರಡು ವರ್ಷದಿಂದಲೂ ಅಲೆದಾಡುತ್ತಲೇ ಇದ್ದಾರೆ. ಆದರೆ ಬಿಲ್ ಮಾತ್ರ ಪಾವತಿಯಾಗದೆ ಮಾಲಿಕರು ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಪ್ರತಿ ವರ್ಷ ಕದಂಬೋತ್ಸವವನ್ನು ಸರ್ಕಾರ ಅದ್ದೂರಿಯಾಗಿ ನಡೆಸುತ್ತದೆ. ಕಳೆದ 2020ರಲ್ಲಿ ಯಡಿಯೂರಪ್ಪನವರು ಇದ್ದಾಗ ಉತ್ಸವವನ್ನು ಕೊನೆಯದಾಗಿ ಆಚರಿಸಲಾಗಿತ್ತು. ನಂತರ ಕೊರಿನಾ ಸೇರಿದಂತೆ ಇನ್ನಿತರ ಕಾರಣದಿಂದ ಉತ್ಸವವನ್ನು ಆಚರಿಸಿರಲಿಲ್ಲ. ಆದರೆ ಸರ್ಕಾರ 2020ರಲ್ಲಿ ನಡೆದ ಉತ್ಸವದ ಬಿಲ್‌ಗಳನ್ನು ಇನ್ನೂ ಸರಿಯಾಗಿ ನೀಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಆಗ ಸಿಎಂ ಯಡಿಯೂರಪ್ಪ ಕದಂಬೋತ್ಸವಕ್ಕೆ ಆಗಮಿಸುತ್ತಾರೆ ಎನ್ನುವ ನಿಟ್ಟಿನಲ್ಲಿ ಕಾರವಾರ ಶಾಮಿಯಾನ ಸೌಂಡ್ಸ್ ಅಂಡ್ ಡೆಕೋರೇಟರ್ಸ್ ಅಸೋಸಿಯೇಶನ್ಸ್ ಅಧ್ಯಕ್ಷ ಪ್ರಶಾಂತ್ ಸಾವಂತ್ ಅವರು ಶಾಮಿಯಾನದ ವ್ಯವಸ್ಥೆ ಮಾಡಿದ್ದರು.

ಇದುವರೆಗೂ ಬಿಲ್ ಪಾವತಿಸದ ಸರ್ಕಾರ
ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಡಿದ್ದ ಪೆಂಡಲ್ ವ್ಯವಸ್ಥೆಗೆ ಈವರೆಗೂ ಬಿಲ್ ಪಾವತಿ ಆಗಿಲ್ಲ. ಇನ್ನು ಪೆಂಡಲ್ ಹಾಕಿದ್ದ 10 ಲಕ್ಷ ರೂಪಾಯಿ ಬಿಲ್ ಅನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಇದೀಗ ಕದಂಬೊತ್ಸವ ಮೂರನೇ ವರ್ಷಕ್ಕೆ ಕಾಲಿಟ್ಟರೂ ಸಹ ಇಂದಿಗೂ ಬಿಲ್ ಕೊಡದೇ ನಮ್ಮನ್ನು ಸತಾಯಿಸುತ್ತಿದ್ದಾರೆ ಎಂದು ಶಾಮಿಯಾನ ಮಾಲಿಕ ಪ್ರಶಾಂತ್ ಸಾವಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕದಂಬೋತ್ಸವದ ಶಾಮಿಯಾನ ಟೆಂಡರ್ ಬೆಂಗಳೂರು ಮೂಲದ ನಂದಕಿಶೋರ್ ಎನ್ನುವವರಿಗೆ ಟೆಂಡರ್ ಆಗಿತ್ತು. ಆದರೆ ಅವರಿಂದ ಸಾಧ್ಯವಾಗದ ಕಾರಣ ಕಾರವಾರ ಶಾಮಿಯಾನ ಸೌಂಡ್ಸ್ ಅಂಡ್ ಡೆಕೋರೇಟರ್ಸ್ ಅಸೋಸಿಯೇಶನ್ಸ್ ಅಧ್ಯಕ್ಷ ಪ್ರಶಾಂತ್ ಸಾವಂತ್ ಅವರಿಗೆ ಹೆಚ್ಚುವರಿ ಶಾಮಿಯಾನ ಹಾಕಲು ಅಂದಿನ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಸೂಚಿಸಿದ್ದರು.

10 ಲಕ್ಷ ರೂ. ಕೈಸೇರಿಲ್ಲ ಎಂದು ಅಳಲು
ಅದರಂತೆಯೇ ಸೋಫಾ, ಜನರೇಟರ್, ಖುರ್ಚಿ ಇನ್ನಿತರ ವ್ಯವಸ್ಥೆ ಮಾಡಿಕೊಡಲಾಗಿತ್ತು. ಬಿಲ್ ಅನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡಿದಾಗ ಶಾಮಿಯಾನ ಟೆಂಡರ್ ಆಗಿದ್ದ ನಂದಕುಮಾರ್ ಅವರಿಗೆ ನೀಡಲು ಸೂಚಿಸಿದ್ದರು. ಬಿಲ್ ಎಲ್ಲವನ್ನು ಅವರಿಗೆ ನೀಡಿದ್ದು, ಈವರೆಗೆ ನನಗೆ ಪಾವತಿ ಆಗಬೇಕಿರುವ ಸುಮಾರು 10 ಲಕ್ಷ ರೂಪಾಯಿ ಕೈಸೇರಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹಲವು ಬಾರಿ ಮನವಿ ಸಲ್ಲಿಸಿದ್ದೇನೆ. ಸಚಿವ ಶಿವರಾಮ ಹೆಬ್ಬಾರ್, ಕೋಟ ಶ್ರೀನಿವಾಸ್ ಪೂಜಾರಿ ಅವರನ್ನೂ ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇನೆ. ಆದರೆ ಈವರೆಗೂ ಬಿಲ್ ಪಾವತಿ ಆಗಿಲ್ಲ.

ಸರ್ಕಾರದ ನಿರ್ಲಕ್ಷ್ಯದಿಂದ ಸಾಲಗಾರರ ಕಾಟ
ನೂರಾರು ಕಾರ್ಮಿಕರಿಗೆ ನಾನು ಕೂಲಿ ಪಾವತಿಸಿಲ್ಲ. ಸ್ನೇಹಿತರಿಂದ ಪಡೆದಿದ್ದ ಕೆಲವು ಮೆಟಿರಿಯಲ್ಸ್‌ಗಳ ಹಣವನ್ನೂ ಪಾವತಿ ಮಾಡಬೇಕಿದ್ದು, ಅವರು ಮನೆಗೆ, ಕಚೇರಿಗೆ ಬಂದು ಕೂರುತ್ತಿದ್ದಾರೆ. ಸಾಲಸೋಲ ಮಾಡಿ ಶಾಮಿಯಾನದ ವ್ಯವಸ್ಥೆ ಮಾಡಿದ್ದು, ಮೂರು ವರ್ಷವಾದರೂ ಜಿಲ್ಲಾಡಳಿತ ಬಿಲ್ ಪಾವತಿಸದೆ ಸತಾಯಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಬಳಿ ಈ ಬಗ್ಗೆ ಕೇಳಿದ್ದೆ. ಅವರು ಮೂರು ವರ್ಷದಿಂದ ಬಿಲ್ ಆಗದೇ ಇರುವ ವಿಚಾರ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ವಿಚಾರಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾಧಿಕಾರಿ ಹೇಳಿದ್ದೇನು?
ಸದ್ಯ ಕರಾವಳಿ ಉತ್ಸವವನ್ನು ಆಯೋಜನೆ ಮಾಡಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಳ್ಳುತ್ತಿದೆ. ಮೊದಲು ಹಳೆಯ ಉತ್ಸವದ ಬಿಲ್‌ಗಳನ್ನ ನೀಡಿ ನಂತರ ಕರಾವಳಿ ಉತ್ಸವ ಮಾಡಿ ಎನ್ನುವುದು ಶಾಮಿಯಾನ ಮಾಲಿಕರ ಆಗ್ರಹವಾಗಿದೆ. ಒಟ್ಟಿನಲ್ಲಿ ರಾಜ್ಯಮಟ್ಟದ ಉತ್ಸವಕ್ಕೆ, ಅದು ಸಿಎಂ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಲ್ ಬಿಲ್‌ಗಳನ್ನೇ ಇನ್ನೂ ಕೊಡದೇ ಸತಾಯಿಸುತ್ತಿರುವುದು ನಿಜಕ್ಕೂ ದುರಂತವೇ ಸರಿ. ಈಗಿನ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಆದಷ್ಟು ಬೇಗ ಬಿಲ್ ಮೊತ್ತವನ್ನು ಕೊಡಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದು ಅಳಲು ತೋಡಿಕೊಂಡರು.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications