Haliyal Constituency : ಆರ್.ವಿ.ದೇಶಪಾಂಡೆ ಕೋಟೆಯಲ್ಲಿ ಬಿರುಕು, ಶಾಸಕರಿಗೆ ಸವಾಲಾಗುವುದೇ ಕೊನೆಯ ಚುನಾವಣೆ?
ರಾಜ್ಯದ ಹಿರಿಯ ಶಾಸಕ ಸದನದ ದೊಡ್ಡಣ್ಣ ಎಂದೇ ಗುರುತಿಸಿಕೊಳ್ಳುವ ಶಾಸಕ ಆರ್.ವಿ.ದೇಶಪಾಂಡೆಯವರ ಪಾಲಿಗೂ ಹಾಗೂ ಕಾಂಗ್ರೆಸ್ ಪಾಲಿಗೂ ಹಳಿಯಾಳ ಭದ್ರಕೋಟೆಯಾಗಿದೆ. ಆದರೆ ಈ ಬಾರಿ ಘೋಟ್ನೇಕರ ತನ್ನ ಗುರುವಿನ ವಿರುದ್ಧ ಸೆಡ್ಡು ಹೊಡೆದಿದ್ದಾರೆ.
ಶಾಸಕ ಆರ್.ವಿ.ದೇಶಪಾಂಡೆಯವರ ಭದ್ರಕೋಟೆ ಎಂದೇ ಗುರುತಿಸಲ್ಪಡುವ ಹಳಿಯಾಳ ಕ್ಷೇತ್ರದಲ್ಲಿ ಈ ಬಾರಿ ನಡೆಯಲಿರುವ ಚುನಾವಣೆಯು ದೇಶಪಾಂಡೆ ಹಾಗೂ ಅವರ ಸಾಂಪ್ರದಾಯಿಕ ಎದುರಾಳಿಗಳ ಪಾಲಿಗೆ ಭವಿಷ್ಯದ ಕೊನೆಯ ಚುನಾವಣೆ ಎಂದು ಕ್ಷೇತ್ರದ ಮತದಾರರು ಹೇಳುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಗಡಿ ತಾಲೂಕುಗಳಲ್ಲಿ ಒಂದಾಗಿರುವ ಹಳಿಯಾಳ, ಜಿಲ್ಲೆಯ ಪಾಲಿಗೆ ಹಿಂದುಳಿದ ಕ್ಷೇತ್ರ ಎಂದೂ ಗುರುತಿಸಿಕೊಂಡಿದ್ದರೂ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಅರೆ ಮಲೆನಾಡಾಗಿರುವ ಕಾರಣ ಈ ಭಾಗದಲ್ಲಿ ಮುಖ್ಯ ಬೆಳೆಗಳಾಗಿ ಭತ್ತ ಮತ್ತು ಕಬ್ಬು ಹೆಚ್ಚಾಗಿ ಬೆಳೆಯಲಾಗುತ್ತಿದೆ.
ಜೊತೆಗೆ, ರಾಗಿ ಮತ್ತು ಹತ್ತಿ, ತೆಂಗು, ಅಡಿಕೆ, ಕೋಕೋ, ಗೋಡಂಬಿ, ಮಾವು, ಬಾಳೆ, ಅನಾನಸ್ ಮತ್ತು ಸಪೋಟ, ತರಕಾರಿಗಳಲ್ಲಿ ಈರುಳ್ಳಿ, ಮೂಲಂಗಿ, ಸೌತೆಕಾಯಿ, ಹೂಕೋಸು, ಸಿಹಿ ಗೆಣಸು, ಬದನೆ ಬೆಳೆಯಲಾಗುತ್ತದೆ. ಮಸಾಲೆಗಳಲ್ಲಿ ಮೆಣಸು, ಏಲಕ್ಕಿ, ಶುಂಠಿ ಮತ್ತು ಜಾಯಿಕಾಯಿ ಸೇರಿವೆ.
ಹಳಿಯಾಳವನ್ನು ಕುಸ್ತಿಪಟುಗಳ ತಯಾರಿಸುವ ಕಾರ್ಖಾನೆ ಎಂದೇ ಕರೆಯಲಾಗುತ್ತದೆ. ಇಲ್ಲಿ ಸಾವಿರಾರು ಕುಸ್ತಿಪಟುಗಳು ಗರಡಿಯಲ್ಲಿ ಪಳಗಿ ರಾಜ್ಯ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಯುವಜನ ಕ್ರೀಡಾ ಸಬಲೀಕರಣ ಮತ್ತು ಖೇಲೋ ಇಂಡಿಯಾ ಸಹಯೋಗದಲ್ಲಿ ಇಲ್ಲಿ ಕುಸ್ತಿ ತರಬೇತಿ ಶಾಲೆಯೂ ಇಲ್ಲಿದೆ.

ಗುರುವಿಗೆ ಸೆಡ್ಡು ಹೊಡೆಯಲು ಸಜ್ಜಾದ ಘೋಟ್ನೇಕರ
ರಾಜ್ಯದ ಹಿರಿಯ ಶಾಸಕ ಸದನದ ದೊಡ್ಡಣ್ಣ ಎಂದೇ ಗುರುತಿಸಿಕೊಳ್ಳುವ ಶಾಸಕ ಆರ್.ವಿ.ದೇಶಪಾಂಡೆಯವರ ಪಾಲಿಗೂ ಕಾಂಗ್ರೆಸ್ ಪಾಲಿಗೂ ಹಳಿಯಾಳ ಭದ್ರಕೋಟೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದ್ದರೂ ಹಳಿಯಾಳ ಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ.
ಈವರೆಗೆ ಒಂಬತ್ತು ಚುನಾವಣೆಯನ್ನು ಎದುರಿಸಿರುವ ದೇಶಪಾಂಡೆ ಎಂಟು ಬಾರಿ ಗೆದ್ದಿದ್ದು, ಒಂದು ಬಾರಿ ಸೋಲನ್ನು ಅನುಭವಿಸಿದ್ದಾರೆ. ದೇಶಪಾಂಡೆಯವರ ಭದ್ರಕೋಟೆಯಲ್ಲಿ ಬಿರುಕು ಕಂಡಾಗ ಮಾತ್ರ ದೇಶಪಾಂಡೆ ಹಿನ್ನಡೆ ಅನುಭವಿಸಿದ್ದಾರೆ.
ವಿಧಾನ ಪರಿಷತ್ ಟಿಕೆಟ್ ಎರಡನೇ ಬಾರಿ ದೊರೆಯಲಿಲ್ಲವೆಂಬ ಕಾರಣಕ್ಕೆ ದೇಶಪಾಂಡೆಯವರ ಪರಮಾಪ್ತರಾದ ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಡಿ.ಹೆಗಡೆ ಬಂಡಾಯ ಎದ್ದು 2008ರಲ್ಲಿ ತನ್ನ ಪುತ್ರ ಸುನೀಲ ಅವರನ್ನು ಚುನಾವಣೆಗೆ ನಿಲ್ಲಿಸಿ ದೇಶಪಾಂಡೆಯವರನ್ನು ಸೋಲಿಸಿದ್ದರು. ಈಗ ಮತ್ತೆ ಅಂತಹದ್ದೇ ಸನ್ನಿವೇಶವು ದೇಶಪಾಂಡೆಯವರಿಗೆ ಎದುರಾಗಿದೆ. ಈ ಬಾರಿ ಘೋಟ್ನೇಕರ ತನ್ನ ಗುರುವಿನ ವಿರುದ್ಧ ಸೆಡ್ಡು ಹೊಡೆದಿದ್ದಾರೆ.

ಬೂತ್ ಮಟ್ಟದಿಂದ ಮೇಲ್ಮಟ್ಟದವರೆಗೆ ನಿಕಟ ಸಂಪರ್ಕ ಹೊಂದಿರುವ ಸುನೀಲ ಹೆಗಡೆ
2008ರಲ್ಲಿ ಅಲ್ಪಸಂಖ್ಯಾತರ ಬೆಂಬಲದೊಂದಿಗೆ ಜೆಡಿಎಸ್ ಪಕ್ಷದಿಂದ ಚುನಾವಣೆ ಗೆದ್ದ ಸುನೀಲ ಹೆಗಡೆ, ತದನಂತರ ಜೆಡಿಎಸ್‌ನಿಂದ ಹಾಗೂ ಹಿಂದಿನ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದಾರೆ. ಸುನೀಲ್ ಬಿಜೆಪಿ ಸೇರ್ಪಡೆಯಾದ ನಂತರ ಪಕ್ಷವನ್ನು ಬೆಳೆಸುವುದರ ಜೊತೆಗೆ ಪಕ್ಷದ ಮೇಲೆ ಬಲವಾದ ಹಿಡಿತವನ್ನು ಸಾಧಿಸಿದ್ದಾರೆ.
ತನ್ನ ಬೆಂಬಲಿಗರನ್ನೇ ಪಕ್ಷದ ಆಯಕಟ್ಟಿನ ಸ್ಥಳದಲ್ಲಿ ನೇಮಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಸುನೀಲ, ಬೂತ್ ಮಟ್ಟದಿಂದ ಹಿಡಿದು ಮೇಲ್ಮಟ್ಟದವರೊಂದಿಗೆ ನಿರಂತರ ನಿಕಟ ಸಂಪರ್ಕವನ್ನು ಹೊಂದಿದ್ದು, ಪ್ರತಿ ಕಾರ್ಯಕರ್ತರನ್ನು ಬೆಂಬಲಿಗರನ್ನು ಪಕ್ಷ ಸಂಘಟನೆಯ ಕಾರ್ಯದಲ್ಲಿ ವ್ಯಸ್ಥಗೊಳಿಸುವುದರೊಂದಿಗೆ ಪಕ್ಷಕ್ಕೆ ಇಲ್ಲಿ ತಾವೇ ಅಲ್ಟಿಮೆಟ್ ಚಾಯ್ಸ್ ಎಂದು ಬಿಂಬಿಸುವಲ್ಲಿ ಸಫಲರಾಗಿದ್ದರೂ, ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಅದರ ಉಪಯೋಗವನ್ನು ಸಕಾರಾತ್ಮಕ ಜನಪರವಾಗಿ ಬಳಸದೇ ಇರುವುದು ನೆಗೆಟಿವ್ ಅಂಶವಾಗಿ ಪರಿಣಮಿಸಿದೆ.

ಆರ್.ವಿ ದೇಶಪಾಂಡೆ ಮತ ಕಸಿಯಲು ಘೋಟ್ನೇಕರ ಸಜ್ಜು
ದೇಶಪಾಂಡೆಯವರ ವಿರುದ್ಧ ತೊಡೆ ತಟ್ಟಿರುವ ಘೋಟ್ನೇಕರ ಇದೀಗ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ತಾವು ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೆಂದು ಮೊದಲು ಸಾರಿದ ಘೋಟ್ನೇಕರ, ಕಾಂಗ್ರೆಸ್ ಟಿಕೆಟ್ ಸಾಧ್ಯತೆಗಳು ಕಡಿಮೆಯಾಗಿದ್ದನ್ನು ನೋಡಿ, ಬಿಜೆಪಿಯತ್ತ ಮುಖ ಮಾಡಿದ್ದು, ಟಿಕೆಟ್ ಪಡೆಯಲು ಹರಸಾಹಸ ಆರಂಭಿಸಿದ್ದಾರೆ.
ಇಲ್ಲಿ ಘೋಟ್ನೇಕರ ಅವರಿಗೆ ವಯಸ್ಸು ಹಾಗೂ ಅವರ ವಿರುದ್ಧ ಕೇಳಿ ಬರುವ ಆಪಾದನೆಗಳೇ ಬಿಜೆಪಿ ಟಿಕೆಟಿಗೆ ತೊಡಕಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ಜೆಡಿಎಸ್ ನ ತೆನೆ ಹೊತ್ತಿರುವ ಅವರು ಆರ್. ವಿ ದೇಶಪಾಂಡೆ ಮತಗಳನ್ನು ಕಸಿಯುವ ಸಾಧ್ಯತೆಗಳು ದಟ್ಟವಾಗಿದೆ. ಇನ್ನು ಎರಡೂ ವರ್ಷಗಳಿಂದ ಕ್ಷೇತ್ರದೆಲ್ಲೆಡೆ ತಿರುಗಾಡಿ ಮತದಾರರ ಆಶೀರ್ವಾದ ಯಾಚಿಸಿದ್ದ ಘೋಟ್ನೇಕರ ಈಗ ಚುನಾವಣಾ ಹೊಸ್ತಿಲಲ್ಲಿ ಪ್ರಾದೇಶಿಕ ಪಕ್ಷ ಸೇರಿದ್ದಾರೆ.

ಹಳಿಯಾಳದಲ್ಲಿ ಕಮರಿ ಹೋದ ಮರಾಠ ಅಭ್ಯರ್ಥಿ ಕನಸು
2008ರಲ್ಲಿ ಚುನಾವಣೆಯ ಸೋತ ನಂತರ, 2013ರಲ್ಲಿ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಿದ ದೇಶಪಾಂಡೆ ತಮ್ಮ ಆಡಳಿತದ ಕ್ರಮವನ್ನೇ ಬದಲಾಯಿಸಿಕೊಂಡಿದ್ದರೆ. ಅಭಿವೃದ್ಧಿ ಕಾಮಗಾರಿಗಳಿಗೆ ಯೋಜನೆಗಳಿಗೆ ಒತ್ತು ನೀಡಿದ ದೇಶಪಾಂಡೆ, ಸರ್ಕಾರದಿಂದ ಹಾಗೂ ಖಾಸಗಿ ಉದ್ದಿಮೆದಾರರಿಂದ ಜನಪರ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದಾರೆ.
ಕಾಳಿನದಿ ನೀರಾವರಿ ಯೋಜನೆ, ಬಹುಗ್ರಾಮ ಯೋಜನೆ, ಒಳಚರಂಡಿ ಸೇರಿದಂತೆ, ವಸತಿ ಯೋಜನೆಗಳು, ಕ್ರೀಡಾ ಯೋಜನೆಗಳ ಮೂಲಕ ಮತದಾರರಿಗೆ ಹತ್ತಿರಯಾಗಿದ್ದರೆ. ರುಡ್‌ಸೆಟ್ ಸಂಸ್ಥೆ ಆರಂಭಿಸಿ ಸಾವಿರಾರು ನಿರುದ್ಯೋಗಿಗಳಿಗೆ ಸ್ವಾವಲಂಭಿ ಬದುಕನ್ನು ಕಟ್ಟಿಸಿ ಕೊಟ್ಟ ದೇಶಪಾಂಡೆ, ಇನ್ನೊಂದೆಡೆ ತಂದೆಯೇ ಹೆಸರಿನಲ್ಲಿ ಸ್ಥಾಪಿಸಿರುವ ಟ್ರಸ್ಟ್ ಮೂಲಕ ಆರೋಗ್ಯ ಶಿಬಿರ, ಶೈಕ್ಷಣಿಕ ಶಿಬಿರ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳ ಮೂಲಕ ಕ್ಷೇತ್ರದ ಮತದಾರರ ಹತ್ತಿರವಾಗಿದ್ದಾರೆ. ತನ್ನ ಮನೆಗೆ ನೆರವು ಸಹಕಾರ ಯಾಚಿಸಿ ಬರುವ ಪ್ರತಿಯೊಬ್ಬರಿಗೂ ಪಕ್ಷಾತೀತವಾಗಿ ದೇಶಪಾಂಡೆ ನೆರವಿನ ಕೈಚಾಚುತ್ತಾರೆ.
ಕ್ಷೇತ್ರದಲ್ಲಿ ಮರಾಠ ಮತದಾರರು ಬಹು ಸಂಖ್ಯಾತರಾಗಿದ್ದು, ತಮ್ಮ ಸಮುದಾಯದ ಅಭ್ಯರ್ಥಿಯನ್ನು (ಮರಾಠಿ ಮಾನುಸ್) ಆಯ್ಕೆಮಾಡಬೇಕೆಂಬ ಕೂಗು ಪ್ರತಿ ಚುನಾವಣೆಯ ಸಮಯದಲ್ಲಿ ಮುನ್ನಲೆಗೆ ಬರುತ್ತಿದೆ. ಆದರೆ ಆ ಕೂಗಿಗೆ ಸರಿಸಾಟಿಯಾಗುವಂತಹ ಸರ್ವ ಮಾನ್ಯ ಮರಾಠ ಅಭ್ಯರ್ಥಿಯು ದೊರಕದೇ, ಮರಾಠರ ಅಭ್ಯರ್ಥಿ ಆಯ್ಕೆ ಕನಸು ಕಮರಿ ಹೋಗುತ್ತಿದೆ.
ಆದರೆ ಈ ಬಾರಿ ಘೋಟ್ನೆಕರ್ ಸ್ಪರ್ಧೆ ಮಾಡಿರುವುದು ತ್ರಿಕೋನ ಸ್ಪರ್ಧೆಯಾಗುವ ಲಕ್ಷಣ ಗೋಚರವಾಗಿದೆ. ಹಿರಿಯ ನಾಯಕ ದೇಶಪಾಂಡೆಯವರಿಗೆ ವಯಸ್ಸಾಗಿದ್ದರಿಂದ ಈ ಬಾರಿ ಅವರ ಕೊನೆಯ ಚುನಾವಣೆಯಾಗುವ ಸಾಧ್ಯತೆ ಇದ್ದು, ದೇಶಪಾಂಡೆಯವರನ್ನು ಒಂದು ಬಾರಿ ಸೋಲಿಸಿ ಎರಡು ಬಾರಿ ಸೋಲನ್ನು ಕಂಡಿರುವ ಮಾಜಿ ಶಾಸಕ ಸುನೀಲ ಹಾಗೂ ಘೋಟ್ನೇಕರ ಅವರ ರಾಜಕೀಯ ಭವಿಷ್ಯ ನಿರ್ಧರಿಸುವ ಚುನಾವಣೆ ಎಂದೇ ವಿಶ್ಲೇಷಿಸಲಾಗುತ್ತದೆ.
ಸದ್ಯಕ್ಕಂತೂ ಕ್ಷೇತ್ರದ ಚುನಾವಣಾ ಕಣಾ ರಂಗೇರಿದ್ದು ಎಸ್ ಎಲ್ ಘೋಟ್ನೆಕರ್ ಜೆಡಿಎಸ್ ಸೇರ್ಪಡೆಯೊಂದಿಗೆ ತೀವ್ರ ಕುತೂಹಲ ಮೂಡುವಂತಾಗಿದೆ.
ಕ್ಷೇತ್ರದ ಮತದಾರ ವಿವರ (2018ರ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ)
ಕ್ಷೇತ್ರದ ಕೋಡ್: 76
ಪುರುಷರು: 87,495
ಮಹಿಳೆಯರು: 84,699
ಇತರರು: 02
ಒಟ್ಟು: 1,72,196
-
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ












Click it and Unblock the Notifications