ದೇವೇಗೌಡರೇ ಹಾಸನ ಬಿಟ್ಟು ಕೊಡಿ ಅಂದ್ರು ಜಮೀರ್!

Posted By:
Subscribe to Oneindia Kannada

ಬೆಂಗಳೂರು, ಜೂನ್ 04 : ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಜೆಡಿಎಸ್ ಪಕ್ಷದ ವರಿಷ್ಠರ ನಡುವಿನ ಜಟಾಪಟಿ ಮುಂದುವರೆದಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮುಸ್ಲಿಂ ನಾಯಕರ ಮೇಲಿರುವ ಪ್ರೇಮದ ಕುರಿತು ವ್ಯಂಗ್ಯವಾಡಿರುವ ಜಮೀರ್, ಗೌಡರಿಗೆ ಸವಾಲು ಹಾಕಿದ್ದಾರೆ.

ಶನಿವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು, 'ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವಾ ಅವರ ಸಹೋದರ ಬಿ.ಎಂ.ಫಾರೂಕ್ ಅವರಿಗೆ ಪಕ್ಷ ರಾಜ್ಯಸಭೆ ಚುನಾವಣೆ ಟಿಕೆಟ್ ಕೊಟ್ಟಿದ್ದು, ಹೇಗೆ?' ಎಂದು ಪ್ರಶ್ನಿಸಿದರು. ['ಜಮೀರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ದಿನ ಹತ್ತಿರ ಬಂದಿದೆ']

zameer ahmed khan

'ತಾವು ಮುಸ್ಲಿಂಮರ ಪರವಾಗಿದ್ದೇವೆ ಎಂದು ಎಚ್.ಡಿ.ದೇವೇಗೌಡರು ನಾಟಕವಾಡುತ್ತಿದ್ದಾರೆ. ಕುಮಾರಸ್ವಾಮಿ ಮತ್ತು ಬಿ.ಎಂ.ಫಾರೂಕ್ ಅವರ ನಡುವೆ ವ್ಯವಹಾರವಿದೆ. ಆದ್ದರಿಂದ, ಅವರಿಗೆ ಟಿಕೆಟ್ ನೀಡಲಾಗಿದೆ' ಎಂದು ದೂರಿದರು. [ರಾಜ್ಯಸಭೆ ಚುನಾವಣೆ : ಕಾಂಗ್ರೆಸ್ಸಿಗೆ ಜಮೀರ್ ಬೆಂಬಲ]

'ಬಿ.ಎಂ.ಫಾರೂಕ್ ಅವರಿಗೆ ಟಿಕೆಟ್ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಮ್ಮ ಪಕ್ಷದಲ್ಲಿ ಇರದ ಫಾರೂಕ್‌ ಅವರಿಗೆ ಟಿಕೆಟ್ ಏಕೆ ನೀಡಲಾಯಿತು' ಎಂದು ಜಮೀರ್ ಅಹಮದ್ ಖಾನ್ ದೇವೇಗೌಡರನ್ನು ಪ್ರಶ್ನಿಸಿದರು. ['ಫಾರೂಕ್ ವಿರುದ್ಧದ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ']

ದೇವೇಗೌಡರ ಮುಸ್ಲಿಂ ಪ್ರೇಮವನ್ನು ಲೇವಡಿ ಮಾಡಿದ ಜಮೀರ್, 'ಜಮೀರ್‌ಗೆ ಟಾಂಗ್ ನೀಡಲು ಈ ಜನ್ಮದಲ್ಲಿ ಸಾಧ್ಯವಿಲ್ಲ. ದೇವೇಗೌಡರಿಗೆ ಮುಸ್ಲಿಂಮರ ಮೇಲೆ ಅಷ್ಟು ಪ್ರೇಮ ವಿದ್ದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಮುಸ್ಲಿಂಮರಿಗೆ ಬಿಟ್ಟುಕೊಡಲಿ' ಎಂದು ಸವಾಲು ಹಾಕಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chamarajpet JDS MLA Zameer Ahmed Khan again raised voice against party leadership. He questioned party supremo H.D.Deve Gowda that, how he issued Rajya sabha election ticket to B.M.Farooq.
Please Wait while comments are loading...