YouTuber Mukaleppa Case: ಪತಿ ಮುಕಳೆಪ್ಪ ಮೇಲೆ ಆರೋಪ! ಪತ್ನಿ ಗಾಯತ್ರಿ ಖಡಕ್ ಎಚ್ಚರಿಕೆ...Video

YouTuber Mukaleppa Wife Video: ಉತ್ತರ ಕರ್ನಾಟಕದ ಪ್ರಮುಖ ಯೂಟ್ಯೂಬರ್‌ಗಳಲ್ಲಿ ಒಬ್ಬನಾಗಿರುವ "ಮುಕಳೆಪ್ಪ' (Mukaleppa) ಅಲಿಯಾಸ್ 'ಕ್ವಾಜಾ ಶಿರಹಟ್ಟಿ' ಹಿಂದೂ ಯುವತಿಯನ್ನು ಪುಸಲಾಯಿತು ಮದುವೆಯಾಗಿದ್ದಾನೆ. ಆತನ ಮೇಲೆ ಲವ್ ಜಿಹಾದ್ ಆರೋಪ ಮಾಡಿ ಹಿಂದೂ ಸಂಘಟನೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿವೆ. ಇದೀಗ ಮುಕಳೆಪ್ಪ ಪತ್ನಿ ಗಾಯತ್ರಿ ಜಾಲಿಹಾಳ್ ಸ್ವತಃ ವಿಡಿಯೋ ಮಾಡಿ ಪ್ರಕರಣ, ಪತಿ ಮೇಲಿನ ಆರೋಪ ಬಗ್ಗೆ ಮಾತನಾಡಿದ್ದಾಳೆ.

ಗಾಯತ್ರಿ ಜಾಲಿಹಾಳ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದೆ. ಅದರಲ್ಲಿರು ಮುಕಳೆಪ್ಪ ಮೇಲಿನ ಲವ್ ಜಿಹಾದ್ ಹಾಗೂ ತನ್ನ ಪೋಷಕರು ಈಗ ಪತಿ ವಿರುದ್ಧ ಹೇಳುತ್ತಿರುವ ಹೇಳಿಕೆಗಳನ್ನು ಖಂಡಿಸಿದ್ದಾರೆ. ಹಾಗಾದ್ರೆ ವಿಡಿಯೋದಲ್ಲೇನಿದೆ?

YouTuber Mukaleppa Case Wife Gayathri Denies Love Jihad Allegations Her Video Viral

""ಇತ್ತಿಚೆಗೆ ನನ್ ಬಗ್ಗೆ, ನನ್ ಗಂಡನ ಬಗ್ಗೆ ಸುಳ್ಳು ಅಪವಾದ ಹೊರಿಸಿದ್ದಾರೆ. ಲವ್ ಜಿಹಾದ್ ಏನು ಆಗಿಲ್ಲ. ಇದು ಸುದ್ದಿ ಸುಳ್ಳು. ಇದನ್ನು ಜನರು ಯಾರು ನಂಬಬಾರದು. ನಾವಿಬ್ಬರು ಸ್ವಹಿತಾಸಕ್ತಿಯಿಂದಲೇ ಮದುವೆ ಆಗೇವಿ. ರಿಜಿಸ್ಟರ್ ಮದುವೆ ಆಗಿದ್ದೇವೆ. ಮದುವಿ ಆದ ಮೇಲೆ ನನಗೆ ಅವ್ವ ಬಾಳ ಸಪೋರ್ಟ್ ಮಾಡಿದ್ಲು. ಅದಕ್ಕ ಸಾಕ್ಷಿ ಅದವು. ಅವುಗಳನ್ನು ಅಪ್ಲೋಡ್ ಮಾಡಿ ನಿಮಗೆ ಮಾಹಿತಿ ನೀಡತೇನಿ. ಆದರೆ ಈಗ ಯಾರ ಮಾತು ಕೇಳಿ ನಮ್ಮವ್ವ ಹೀಗೆ ಮಾತಾಡ್ತಿದಾಳೋ ಗೊತ್ತಿಲ್ಲ. ಮೀಡಿಯಾ ಮುಂದೆ ಈ ರೀತಿ ಹೇಳಿಕೆ ಕೊಡುತ್ತಿದ್ದಾಳೆ. ಅವ್ವಗ ಯಾರು ಮೈಂಡ್ ವಾಶ್ ಮಾಡಿದ್ದಾರೋ ಗೊತ್ತಿಲ್ಲ'' ಎಂದಿದ್ದಾರೆ.

ಲವ್ ಜಿಹಾದ್ ಆಗಿಲ್ಲ: ಪತ್ನಿ ಸ್ಪಷ್ಟನೆ

""ಹುಡುಗಿ ಮೈಂಡ್ ವಾಶ್ ಮಾಡಿ ಮುಕಳೆಪ್ಪ ಕರಕೊಂಡು ಹೋಗಿದ್ದಾನೆ ಎಂದು ಹೇಳುತ್ತಿದ್ದಾರೆ. ನನಗೆ ಯಾರು ಮೈಂಡ್ ವಾಶ್ ಮಾಡಿಲ್ಲ. ನಾನು ಸ್ವಿಇಚ್ಚೆಯಿಂದನೆ ಅವರ (ಮುಕಳೆಪ್ಪ) ಜೊತೆಗೆ ಬಂದನಿ. ನನಗೆ ನನ್ ಗಂಡಗ, ಅವರ ಮನಯವರಿಗೆ ಏನಾದ್ರು ತೊಂದರೆ ಆದರೆ ಕಾನೂನು ನ್ಯಾಯ ಸಿಗಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ನನ್ನ ಅಪ್ಪ ಅವ್ವಗ ಮೈಂಡ್ ವಾಶ್ ಮಾಡಿ ಅವರಿಂದ ಸುಳ್ಳು ಸುದ್ದಿ ಹೇಳಿಸ್ತಿದಾರೆ. ಇದನ್ನು ಯಾರು ನಂಬಬಾರದು'' ಎಂದು ಮುಕಳೆಪ್ಪ ಪತ್ನಿ ಗಾಯತ್ರಿ ಹೇಳಿದ್ದಾಳೆ. ಈ ಮೂಲಕ ಲವ್ ಜಿಹಾದ್ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+