ಅವಳ ಪತಿಯಾಗಲು 20 ಹರೆಯದ ಹುಡುಗಿ "ಸ್ತನ" ಕತ್ತರಿಸಿಕೊಂಡಳು!
ಬೆಂಗಳೂರು, ಜೂ. 28: ಅವಳು ಸುಂದರ ಹುಡುಗಿ. ಅವಳ ಕಣ್ಣು ನೋಡಿದ್ರೆ ಸಾಕು ಎಂಥವರಿಗೂ ಒಮ್ಮೆ ಲವ್ ಯೂ ಹೇಳಿಬಿಡೋಣ ಅಂತ ಅನ್ನಿಸುತ್ತೆ. ಅವಳದ್ದು 20 ವರ್ಷದ ಪ್ರಾಯ. ಆ ಹುಡುಗಿಯನ್ನು ಇನ್ನೊಬ್ಬ ಹುಡುಗಿ ಪ್ರೀತಿಸಿತೊಡಗಿದಳು. ಇಬ್ಬರೇ ಏಕಾಂತದಲ್ಲಿ ಕಳೆದು ಅಮರ ಪ್ರೇಮಿಗಳಾಗಿ ರೂಪಾಂತರಗೊಂಡರು. ಒಂದು ದಿನ ಮದುವೆಯಾಗಲು ನಿಶ್ಚಯಿಸಿದರು. ಗಂಡ ಹೆಂಡತಿಯಂತೆ ಇರಲು ಇಚ್ಛಿಸಿದರು. ಆದ್ರೆ ಪೋಷಕರು ಅದಕ್ಕೆ ಒಪ್ಪಿಲ್ಲ. ಮದುವೆಯಾಗಲು ನಿರ್ಧರಿಸಿದ ಆಕೆ ಹಿಡಿದ ಹಾದಿ ಪ್ರಾಣವೇ ಹೋಗುವಂತಿತ್ತು. ಈ ಕುರಿತ ಪೂರ್ಣ ಸ್ಟೋರಿ ಇಲ್ಲಿದೆ ನೋಡಿ.
ಆಕೆ ಹೆಸರು ರೋಜಾ. ( ಹೆಸರು ಬದಲಿಸಿದೆ) ತುಂಬಾ ಅಂದಗಾತಿ. ವಯಸ್ಸು ಇಪ್ಪತ್ತು ವರ್ಷ. ಅವಳನ್ನು ಪ್ರೀತಿ ಮಾಡಿದ್ದು ಇನ್ನೊಬ್ಬ ಹುಡುಗಿ. ಈಕೆ ಹೆಸರು ಮಾನಸ ( ಹೆಸರು ಬದಲಾಗಿದೆ) ಇಬ್ಬರದ್ದು ಹೇಳಿಕೊಳ್ಳಲಾಗದಷ್ಟು ಗಾಢ ಪ್ರೇಮವಾಗಿತ್ತು. ಏಕಾಂತವಾಗಿ ಇಬ್ಬರೇ ದಿನಗಳನ್ನು ಕಳೆದರು. ಪಾರ್ಕ್ ಗಳನ್ನು ಸುತ್ತಿ ಮುದ್ದಾಡಿಕೊಂಡಿದ್ದರು. ಕೊನೆಗೆ ಗಂಡ ಹೆಂಡತಿ ರೀತಿ ನಡೆದುಕೊಳ್ಳುತ್ತಿದ್ದರು. ಪರಸ್ಪರ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದರು. ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಆದ್ರೆ ಹೆಣ್ಣು ಹೆಣ್ಣನ್ನು ಮದುವೆಯಾಗಲು ಸಮಾಜ ಒಪ್ಪಬೇಕಲ್ಲವೇ ? ಅವರ ಕುಟುಂಬ ಕೂಡ ಪ್ರತಿರೋಧ ತೋರಿದ್ರು. ಹೀಗೆ ಇದ್ದರೆ ಇಬ್ಬರು ಹೆಣ್ಣು ಮಕ್ಕಳ ಮದುವೆಗೆ ಅವಕಾಶ ಕೊಡಲ್ಲ ಎಂದು ನಿರ್ಧರಿಸಿದ ಹುಡುಗಿ ಗಂಡಾಗಿ ಪರಿವರ್ತನೆಯಾಗಲು ನಿರ್ಧರಿಸಿದಳು.

ನಾನು ಪ್ರೀತಿಸುತ್ತಿರುವಳನ್ನು ಮದುವೆಯಾಗಬೇಕು
ತಾನು ಹೆಣ್ಣು. ನಾನು ಪ್ರೀತಿಸುತ್ತಿರುವಳನ್ನು ಮದುವೆಯಾಗಬೇಕು. ನಾನು ಗಂಡಾಗಿ ಬದಲಾಗಬೇಕು ಲಿಂಗ ಪರಿವರ್ತನೆ ಮಾಡಿಸಿಕೊಳ್ಳಬೇಕು ಎಂಬ ಮನವಿಯನ್ನು 20 ರ ಪ್ರಾಯದ ಹುಡುಗಿ ಮೋತಿಲಾಲ್ ನೆಹರು ಮೆಡಿಕಲ್ ಕಾಲೇಜಿನ ವೈದ್ಯರ ಬಳಿ ಇಟ್ಟಳು. ಹೆಣ್ಣು ಗಂಡಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆ ನಾಲ್ಕು ತಿಂಗಳು ಹಿಡಿಯುತ್ತದೆ ಎಂಬ ವಿಷಯವನ್ನು ವೈದ್ಯರು ತಿಳಿಸಿದ್ದರು. ಅದಕ್ಕೆ ಆ ಹುಡುಗಿ ಒಪ್ಪಿದಳು. ಸರ್ಜರಿ ಮಾಡಿಸಿಕೊಳ್ಳಲು ಸಿದ್ಧವಾದಳು.
ಡಾ. ಮೋಹಿತ್ ಜೈನ್, ಡಾ. ಅಮ್ರಿತ್ ಚೌರಾಸಿಯಾ ನೇತೃತ್ವದಲ್ಲಿ ವೈದ್ಯರ ತಂಡ ಹೆಣ್ಣನ್ನು ಗಂಡನ್ನಾಗಿ ಪರಿವರ್ತಿಸುವ ಶಸ್ತ್ರ ಚಿಕಿತ್ಸೆ ಮಾಡಲು ಸಿದ್ಧತೆ ಮಾಡಿಕೊಂಡಿತು. ಆಕೆ ಒಬ್ಬ ಹುಡುಗಿಯನ್ನು ಪ್ರೀತಿಸಿದ್ದಳು. ಗಂಡಿನ ಭಾವನೆ ಬೆಳೆಸಿಕೊಂಡಿದ್ದಳು. ಆಕೆ ಗಂಡಾಗಿ ಪರಿವರ್ತನೆಯಾಗಲು ಇಚ್ಚಿಸಿದ್ದಾಳೆ. ಅವಳ ಅನುಮತಿ ಮೇರೆಗೆ ಗಂಡನ್ನಾಗಿ ಲಿಂಗ ಪರಿವರ್ತನೆ ಮಾಡಲು ತೀರ್ಮಾನಿಸಿದ್ದೇವೆ ಎಂದು ವೈದ್ಯರು ಹೇಳಿಕೊಂಡಿದ್ದಾರೆ.

ಯಾಕಮ್ಮಾ ಅಂದವಾದ ಹೆಣ್ಣು ನೀನು
ಯಾಕಮ್ಮಾ ಅಂದವಾದ ಹೆಣ್ಣು ನೀನು. ಗಂಡಾಗಿ ಪರಿವರ್ತನೆಯಾಗಿ ಸಂಕಟ ಪಡುತ್ತೀಯ ಎಂದು ವೈದ್ಯರು ಕೇಳಿದಾಗ ಆಕೆ ಕೊಟ್ಟ ಉತ್ತರ ವೈದ್ಯರಿಗೆ ಶಾಕ್ ನೀಡಿತ್ತು. ನಾನು ನನ್ನ ಗೆಳತಿಯನ್ನು ಪ್ರೀತಿಸುತ್ತಿದ್ದೇನೆ. ಆಕೆಯನ್ನು ಮದುವೆಯಾಗುತ್ತೇನೆ ಎಂದರೆ ನನ್ನ ಮನೆಯವರು ಒಪ್ಪಿಲ್ಲ. ನಾನು ಅಪ್ರಾಪ್ತಳಲ್ಲ. ನನ್ನ ಸ್ವಂತ ನಿರ್ಧಾರವಿದು. ನಾನು ನನ್ನ ಪ್ರೀತಿ ಉಳಿಸಿಕೊಳ್ಳಲು ಗಂಡಾಗಿ ಬದಲಾಗಬೇಕಿದೆ. ನೀವು ನನಗೆ ಶಸ್ತ್ರ ಚಿಕಿತ್ಸೆ ಮಾಡಿ ಎಂದು ಹೇಳಿದ್ದಾರೆ. ಆಕೆಯ ಈ ಮಾತನ್ನು ಒಪ್ಪಿ ಕೊನೆಗೂ ವೈದ್ಯರು ಕತ್ತರಿ, ಬ್ಲೇಡ್ ಪ್ರಯೋಗಿಸಿದ್ದಾರೆ.

ಮನೋ ವೈದ್ಯರು ಕಂಡುಕೊಂಡ ಸತ್ಯ
ಮನೋ ವೈದ್ಯರು ಕಂಡುಕೊಂಡ ಸತ್ಯ: ಅವನಾಗಬೇಕು ಎಂದು ಬಂದಿದ್ದ ಅವಳನ್ನು ಮೊದಲು ಮನೋವೈದ್ಯರು ಆಪ್ತ ಸಲಹೆಗೆ ಒಳಪಡಿಸಿದ್ದರು. ಆಕೆಯ ಸಮಸ್ಯೆಯ ಮೂಲವನ್ನು ಪತ್ತೆ ಮಾಡಿದ್ದರು. ಆಕೆಗೆ ಹೆಣ್ಣಾಗಿ ಗುರುತಿಸಿಕೊಳ್ಳುವುದಕ್ಕಿಂತಲೂ ಗಂಡಾಗಿ ಗುರುತಿಸಿಕೊಳ್ಳುವ ಮನೋ ವ್ಯಾದಿಗೆ ಒಳಗಾಗಿದ್ದಳು. ಅಕೆ ಹೆಣ್ಣುಗಿಂತಲೂ ಗಂಡು ಆಗಿ ಗುರುತಿಸಿಕೊಳ್ಳುವಲ್ಲಿ ಖುಷಿ ಪಡುತ್ತಿದ್ದಳು. ಹೀಗಾಗಿ ಅವಳನ್ನು ಅನಿವಾರ್ಯವಾಗಿ ವೈದ್ಯರು ಕೂಡ ಅವನಾಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ಕೊಟ್ಟರು.
ಇದಾದ ಕೆಲ ತಿಂಗಳ ಬಳಿಕ 20 ಪ್ರಾಯದ ಹುಡುಗಿಯ ಸ್ತನಗಳನ್ನು ಕತ್ತರಿಸಿ ಚಿಕಿತ್ಸೆ ಕೊಡಿಸಿದರು. ಡಾ. ಚೌರಾಸಿಯಾ ನೇತೃತ್ವದ ತಂಡ, ಆಕೆಯ ಗರ್ಭಕೋಶವನ್ನು ತೆಗೆಯುವಲ್ಲಿ ಯಶಸ್ವಿಯಾದರು.

ಆಕೆಗೆ ಗಡ್ಡ, ಮೀಸೆ ಬೆಳೆಯಲು ನೆರವಾಯಿತು
ಇದಾದ ಬಳಿಕ ಗಂಡಿನ ಸ್ವಭಾವ ಬೆಳೆಯಲು ಆಕೆಗೆ ಹಾರ್ಮೋನಿಯಲ್ ಥೆರಪಿ ನೀಡಿದರು. ಹೀಗಾಗಿ ಆಕೆಗೆ ಗಡ್ಡ, ಮೀಸೆ ಬೆಳೆಯಲು ನೆರವಾಯಿತು.
ಇದಾದ ಕೆಲ ತಿಂಗಳ ಬಳಿಕ ಆಕೆಯನ್ನು ಮತ್ತೆ ಪ್ಲಾಸ್ಟಿಕ್ ಸರ್ಜರಿಗೆ ಗುರಿಪಡಿಸಿದ್ದಾರೆ. ಗಂಡಿಗೆ ಇರಬಹುದಾದ ಅಂಗಾಂಗವನ್ನು ಶಸ್ತ್ರ ಚಿಕಿತ್ಸೆ ಮೂಲಕ ಅಳವಡಿಸಿದ್ದಾರೆ. ಅಷ್ಟೊತ್ತಿಗೆ ಅವಳು ಪರಿಪೂರ್ಣವಾಗಿ ಅವಳಾಗಿ ಪರಿವರ್ತನೆಗೊಂಡಿದ್ದಳು. ತನ್ನ ಪ್ರಿಯತಮೆ ಹಾಗೂ ಪ್ರೀತಿಗಾಗಿ ಅವಳು ಪರಿಪೂರ್ಣವಾಗಿ ಅವನಾಗಿ ಬದಲಾಗಿಹೋದರು. ಅವಳು ಅವನಾಗಿ ಬದಲಾದ ಬಳಿಕ ತನ್ನ ಪ್ರಿಯತಮೆಯನ್ನು ಮದುವೆಯಾಗಿ ಜೊತೆಗಿದ್ದಾರೆ. ಇನ್ನು ಇಷ್ಟೆಲ್ಲಾ ಆದಮೇಲೆ ಆ ಕುಟುಂಬಗಳು ಅಡ್ಡಿ ಪಡಿಸಲು ಸಾಧ್ಯವೇ?












Click it and Unblock the Notifications