Southwest Monsoon Rains: ನೈಋತ್ಯ ಮಾನ್ಸೂನ್ ಪ್ರವೇಶ ಯಾವಾಗ: ಕರ್ನಾಟಕದಲ್ಲಿ ಭರ್ಜರಿ ಮಳೆ ಫಿಕ್ಸ್, ಇಲ್ಲಿದೆ ಗುಡ್‌ನ್ಯೂಸ್!
Southwest Monsoon Rains: ಕರ್ನಾಟಕಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಬಿಗ್ ಗುಡ್‌ನ್ಯೂಸ್ ನೀಡಿದೆ. ರಾಜ್ಯದಲ್ಲಿ ಇದೀಗ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಮೇ 13ರ ವರೆಗೆ ಮುಂಗಾರು ಪೂರ್ವ ಮಳೆ ಮುಂದುರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಇದರ ನಡುವೆ ಅದರ ಒಳಗಾಗಿಯೇ ನೈಋತ್ಯ ಮಾನ್ಸೂನ್ ಪ್ರವೇಶವಾಗುವ ಸಾಧ್ಯತೆ ಇರುವ ಬಗ್ಗೆ ಭರ್ಜರಿ ಗುಡ್‌ನ್ಯೂಸ್ ನೀಡಲಾಗಿದೆ. ಈ ಬಾರಿ ಮುಂಗಾರು ಪೂರ್ವ ಮಳೆಯು ಭರ್ಜರಿಯಾಗಿ ಆಗಿದೆ. ಮಾನ್ಸೂನ್ ಪ್ರವೇಶ ಹಾಗೂ ಮುಂಗಾರು ಮಳೆ ಭರ್ಜರಿಯಾಗಿ ಆಗಲಿದೆ ಎಂದು ಐಎಂಡಿ ರಿಪೋರ್ಟ್ ಹೇಳಿದೆ. ರಾಜ್ಯಕ್ಕೆ ಯಾವಾಗ ಮಾನ್ಸೂನ್ ಪ್ರವೇಶಿಸಲಿದೆ ಹಾಗೂ ಈ ಬಾರಿ ಮುಂಗಾರು ಮಳೆ ಹೇಗಿರಲಿದೆ ಎನ್ನುವ ಸಂಪೂರ್ಣ ವಿವರ ನೋಡೋಣ.
ದೇಶದಲ್ಲಿ ಹಲವು ರೈತರು ಇಂದಿಗೂ ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಿದ್ದಾರೆ. ಕರ್ನಾಟಕದಲ್ಲೂ ಲಕ್ಷಾಂತರ ಜನ ಮಳೆಯಾಧಾರಿತ ಕೃಷಿಯ ಮೇಲೆ ಅವಲಂಬಿತರಾಗಿದ್ದು. ನೈಋತ್ಯ ಮಾನ್ಸೂನ್ ಯಾವಾಗ ಪ್ರವೇಶಿಸಲಿದೆ. ಎಂದಿನಿಂದ ಕರ್ನಾಟಕದಲ್ಲಿ ಮಳೆ ಚುರುಕು ಪಡೆದುಕೊಳ್ಳಲಿದೆ ಎನ್ನುವ ಲೆಕ್ಕಾಚಾರಗಳು ಜೋರಾಗಿವೆ. ಭಾರತದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದ್ದರೂ. ಮುಂಗಾರು ಪೂರ್ವ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಹೀಗಾಗಿ ಈ ಬಾರಿ ನೈಋತ್ಯ ಮಾನ್ಸೂನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಅಲ್ಲದೇ ಈಗಾಗಲೇ ನೈಋತ್ಯ ಮಾನ್ಸೂನ್ ಉತ್ತಮವಾಗಿರಲಿದೆ. ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರೈತರು ಸಹ ಖುಷಿಯಾಗಿದ್ದಾರೆ.

ನೈಋತ್ಯ ಮಾನ್ಸೂನ್ ಮೇ 13ರ ವೇಳೆಗೆ ದಕ್ಷಿಣ ಅಂಡಮಾನ್ ಸಮುದ್ರದ ಮಾರ್ಗವಾಗಿ ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಹಾಗೂ ನಿಕೋಬಾರ್ ದ್ವೀಪಗಳ ಮೂಲಕ ಸಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಈ ಬಾರಿ ಒಂದು ವಾರಕ್ಕಿಂತ ಮುಂಚೆಯೇ ದೇಶದಲ್ಲಿ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ.
ಇದು ಮೊದಲು ಕೇರಳದ ಪಶ್ಚಿಮಘಟ್ಟಗಳನ್ನು ತಲುಪಲಿದ್ದು. ನಂತರ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಮಳೆ ಪ್ರಾರಂಭವಾಗಲಿದೆ. ಹೀಗಾಗಿ ನೈಋತ್ಯ ಮಾನ್ಸೂನ್ ಬಗ್ಗೆ ನಿರೀಕ್ಷೆ ಹೆಚ್ಚಳವಾಗಿದೆ. ಮೇ ಅಂತ್ಯದ ಒಳಗಾಗಿ ಇಲ್ಲವೇ ಜೂನ್ ಪ್ರಾರಂಭದಲ್ಲಿ ಕರ್ನಾಟಕಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ.

ನೈಋತ್ಯ ಮಾನ್ಸೂನ್ ಕೋಬಾರ್ ದ್ವೀಪ ಮಾರ್ಗವಾಗಿ ಕೇರಳಕ್ಕೆ ಪ್ರವೇಶಿಸುವುದಕ್ಕೆ ಸಾಮಾನ್ಯವಾಗಿ ಒಂದು ವಾರವಾಗುತ್ತದೆ. ಅಲ್ಲಿಂದ 7ರಿಂದ 10 ದಿನಗಳಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಮಳೆಯಾಗುತ್ತದೆ. ಇದಾದ ಮೇಲೆ ದೇಶದಾದ್ಯಂತ ಮಳೆಯಾಗುತ್ತದೆ. ಕರ್ನಾಟಕದ ವಿವಿಧ ಭಾಗದಲ್ಲಿ ಈಗ ಮಳೆಯಾಗುತ್ತಿದ್ದು ಈ ಮಳೆ ಇನ್ನೊಂದು ವಾರ ಮುಂದುವರಿಯುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೃಷಿ ಚಟುವಟಿಕೆ ಚುರುಕು: ಇನ್ನು ದೇಶದಾದ್ಯಂತ ಕೆಲವೊಂದು ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಚುರುಕುಪಡೆದುಕೊಂಡಿವೆ. ಮಾನ್ಸೂನ್ ಪೂರ್ವ ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿದೆ.












Click it and Unblock the Notifications