ಕರ್ನಾಟಕದಲ್ಲಿ ರೈಲು ಟಿಕೆಟ್ ಕೊಡುವುದಕ್ಕೆ ಉಡಾಫೆ ತೋರಿದ ನಾರ್ಥಿ: ಇಲ್ಲಿದೆ ವೈರಲ್ ವಿಡಿಯೋ!

ಕರ್ನಾಟಕದ ರೈಲ್ವೆ ನಿಲ್ದಾಣವೊಂದರಲ್ಲಿ ನಾರ್ಥಿಯೊಬ್ಬ ದುರಂಹಕರ ಮೆರೆದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾರ್ಥಿಯ ನಡವಳಿಕೆಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ಸೀಮಿತವಾಗಿದ್ದ ನಾರ್ಥಿಗಳ ಹಾವಳಿ ಇದೀಗ ಕರ್ನಾಟಕದ ವಿವಿಧ ಭಾಗದಲ್ಲೂ ಶುರುವಾಗಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟಕ್ಕೂ ಈ ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.

ಕರ್ನಾಟಕದ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕ್ಲರ್ಕ್ ಒಬ್ಬ ಪ್ರಯಾಣಿಕರು ಟಿಕೆಟ್‌ಗಾಗಿ ಕಾಯುತ್ತಿದ್ದರೂ ಪೋನ್‌ನಲ್ಲಿ ಬ್ಯೂಸಿಯಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಹಲವರು ಸರತಿ ಸಾಲಿನಲ್ಲಿ ಟಿಕೆಟ್‌ಗಾಗಿ ಕಾಯುತ್ತಿದ್ದರೂ ನಿರ್ಲಕ್ಷ್ಯದಿಂದ ಫೋನ್‌ನಲ್ಲಿ ನಿರತರಾಗಿರುವುದು ವೈರಲ್ ವಿಡಿಯೋದಲ್ಲಿ ಇದೆ. ಸರತಿ ಸಾಲಿನಲ್ಲಿ ಟಿಕೆಟ್‌ಗಾಗಿ ಕಾಯುತ್ತಿದ್ದವರು 15 ನಿಮಿಷದ ಮೇಲೆ ಕಾದರೂ ಟಿಕೆಟ್ ಕೊಡದೆ ಇರುವುದರಿಂದ ಆಕ್ರೋಶಕ್ಕೆ ಒಳಗಾಗಿದ್ದಾರೆ.

Viral video of north Indian employee showing arrogance while giving railway tickets in Karnataka

ಪ್ರಯಾಣಿಕರು ಕಾಯುತ್ತಾ ನಿಂತಿರುವಾಗ ಕ್ಲರ್ಕ್ ಫೋನ್‌ನಲ್ಲಿ ಪಕ್ಕದಲ್ಲಿ ಇರುವವರು ಹಾಗೂ ಪೋನ್‌ನಲ್ಲಿ ಉಡಾಫೆಯಿಂದ ಮಾತು ಮುಂದುವರಿಸಿದ್ದಾನೆ. 15 ನಿಮಿಷಗಳಿಂದ ಟಿಕೆಟ್‌ಗಾಗಿ ಕಾಯುತ್ತಿದೆ ಆದರೂ ಈ ವ್ಯಕ್ತಿ ಟಿಕೆಟ್‌ ನೀಡದೆ. ಫೋನ್‌ನಲ್ಲಿ ಬ್ಯೂಸಿಯಾಗಿದ್ದಾನೆ ಎಂದು ಪ್ರಯಾಣಿಕರು ದೂರಿದ್ದಾರೆ. ಪದೇ ಪದೇ ಮನವಿ ಮಾಡಿದರೂ, ಫೋನ್‌ನಲ್ಲಿ ಮಾತನಾಡುವುದನ್ನೇ ಮುಂದುವರಿಸಿದಾ ಪ್ರಯಾಣಿಕರು ಕೂಗಾಡಿದ್ದಾರೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಅವರು, ಈ ಹಿಂದಿಗನ ದುರಹಂಕಾರ ನೋಡಿ.. ಕರ್ನಾಟಕದ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಡೆದಿರೋ ಘಟನೆ. ಕೂಡಲೇ ಈತನನ್ನು ಕೆಲಸದಿಂದ ವಜಾ ಮಾಡಿ ಎಂದು ಆಗ್ರಹಿಸಿದ್ದಾರೆ. ಹಲವು ಕನ್ನಡಿಗರು ಇದೇ ರೀತಿ ಆಕ್ರೋಶ ಹೊರ ಹಾಕಿದ್ದಾರೆ.

ಕನ್ನಡಿಗರ ಆಕ್ರೋಶ: ಉದ್ಯೋಗಕ್ಕಾಗಿ ಉತ್ತರ ಭಾರತ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದು ಇಲ್ಲಿ ಉದ್ಯೋಗ ಮಾಡುವ ಹಲವರು ವರ್ತನೆ ಇದೇ ರೀತಿ ಉಡಾಫೆಯಿಂದ ಕೂಡಿದೆ. ಈ ರೀತಿ ಮಾಡುವವರಿಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಉದ್ದೇಶಪೂರ್ವಕವಾಗಿ ಹಾಗೂ ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ರೈಲ್ವೆ ಸಿಬ್ಬಂದಿ ಅಮಾನತು: ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿಗಳು ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ದೃಢಪಡಿಸಿದ್ದಾರೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ತೀವ್ರ ವಿಷಾದವಿದೆ. ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+