Get Updates
Get notified of breaking news, exclusive insights, and must-see stories!

ಪ್ರೇಮಿಗಳ ದಿನ ಬಿಯರ್, ವೈನ್, ವಿಸ್ಕಿ, ಬ್ರಾಂಡಿ ಸಿಗುತ್ತಾ?

ಪ್ರೇಮಿಗಳು ಈಗ ಫುಲ್ ಹೀಟ್ ಅಂದ್ರೆ ಹೀಟಲ್ಲಿ ಇದ್ದಾರೆ. ಯಾಕಂದ್ರೆ ಇನ್ನೇನು ಫೆಬ್ರವರಿ 14 ಬಂದೇ ಬಿಡುತ್ತದೆ. ಹೀಗಿದ್ದಾಗಲೇ ಪ್ರೇಮಿಗಳಿಗೆ ಮೊದಲ ಶಾಕ್ ಸಿಕ್ಕಿದೆ, ಅದು ಏನೆಂದರೆ ಪ್ರೇಮಿಗಳ ದಿನದಂದು ಅಂದ್ರೆ ಫೆಬ್ರವರಿ 14ರಿಂದ 16 ರವರೆಗೆ ಎಣ್ಣೆ ಸಿಗೋದೆ ಇಲ್ಲವಂತೆ. ಇದಕ್ಕೆ ಕಾರಣ ಏನು ಅನ್ನೋದಕ್ಕಿಂತ ಮೊದಲು ಈ ಕ್ರಮದ ವಿರುದ್ಧ ಇದೀಗ ಹೋಟೆಲ್ ಮಾಲೀಕರ ಸಂಘ ರೊಚ್ಚಿಗೆದ್ದಿದ್ದು ಏಕೆ? ಅನ್ನೋದನ್ನ ತಿಳಿಯೋಣ ಬನ್ನಿ.

ಅಷ್ಟಕ್ಕೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಧಾನ ಪರಿಷತ್ ಚುನಾವಣೆ ಇರುವ ಹಿನ್ನೆಲೆ ಫೆಬ್ರವರಿ 14 ರಿಂದ 16 ರವರೆಗೆ ಮದ್ಯ ಮಾರಾಟ ಬ್ಯಾನ್ ಆಗಿದೆ. ಆದರೆ ಇದೇ ವಿಚಾರ ಈಗ ದೊಡ್ಡ ಬೆಂಕಿ ಹೊತ್ತಿಸಿದೆ, ಅದರಲ್ಲೂ ಹೋಟೆಲ್ ಮಾಲೀಕರ ಸಂಘ & ಚುನಾವಣೆ ನಡುವೆ ಈಗ ಹೊಸ ತಿಕ್ಕಾಟ ಶುರುವಾಗಿದೆ. ಇದೀಗ ಈ ಆದೇಶವನ್ನು ಮರುಪರಿಶೀಲಿಸಬೇಕು ಎಂದು, ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರಿಗೆ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಪತ್ರವನ್ನ ಬರೆದಿದೆ. ಹಾಗಾದ್ರೆ ಫೆಬ್ರವರಿ 14 ರಂದು ಎಣ್ಣೆ ಸಿಗುತ್ತಾ?

Valentines Day Liquor Ban May Affect The Lovers In Bengaluru

ಪತ್ರದಲ್ಲಿ 450 ಕೋಟಿ ವ್ಯವಹಾರ ನಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ ಹೋಟೆಲ್ ಮಾಲೀಕರ ಸಂಘ. ಇದರ ಜೊತೆಗೆ ಸರ್ಕಾರ ಕೂಡ 240 ಕೋಟಿ ರೂಪಾಯಿಯ ಆದಾಯ ಕಳೆದುಕೊಳ್ಳುತ್ತೆ ಎಂದು ವಿವರಿಸಲಾಗಿದೆ. ಹೀಗಾಗಿ ಈಗ ಪತ್ರದಲ್ಲಿ ಇದರ ಬಗ್ಗೆ ಇಂಚಿಂಚಾಗಿ ವಿವರಣೆ ನೀಡಲಾಗಿದೆ. ಅಷ್ಟಕ್ಕೂ ಹೋಟೆಲ್ ಮಾಲೀಕರ ಸಂಘವು ಈಗ ತನ್ನ ಪತ್ರದಲ್ಲಿ ಹೇಳಿರುವುದು ಏನು? ಬನ್ನಿ ತಿಳಿಯೋಣ.

ಎಣ್ಣೆ ಸಿಗುತ್ತಾ? ಎಣ್ಣೆ ಸಿಗಲ್ವಾ?

ಈಗ ಹೋಟೆಲ್ ಮಾಲೀಕರ ಸಂಘವು ಪತ್ರ ಬರೆದಿರುವಂತೆ, 'ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಣ ಕ್ಷೇತ್ರದ ಉಪಚುನಾವಣೆ-2024ರಂದು ಶುಷ್ಕ ದಿನ ( Dry Day) ಘೋಷಿಸಿರುವ ಕುರಿತು.' ಎಂದು ವಿಷಯದ ಬಗ್ಗೆ ಪತ್ರದಲ್ಲಿ ಮೊದಲಿಗೆ ತಿಳಿಸಿದ್ದು, ನಂತರ ಎಣ್ಣೆ ಬಂದ್ ಆಗೋದು ಯಾಕೆ ಬೇಡ ಅನ್ನೋದನ್ನ ಸಂಘಟನೆ ವಿವರಿಸಿದೆ.

ಎಣ್ಣೆ ಬಂದ್ ಆದರೆ ಭಾರಿ ಸಮಸ್ಯೆ

'ತಮ್ಮ ಉಲ್ಲೇಖನ ಪತ್ರದಂತೆ ಪೊಲೀಸ್ ಇಲಾಖೆಯವರು 14.02.2024 ರ ಸಂಜೆ 5:00 ಯಿಂದ 16.02.2024 ರ ಮಧ್ಯರಾತ್ರಿ 12.00 ಗಂಟೆಯವರೆಗೆ, ಹಾಗೂ 20.02.2024 ರಂದು ಬೆಳಿಗ್ಗೆ 6:00 ಯಿಂದ ಮಧ್ಯರಾತ್ರಿ 12 ಗಂಟೆಯವರೆಗೂ ಬೆಂಗಳೂರು ನಗರ & ಜಿಲ್ಲೆಯಾದ್ಯಂತ ಮದ್ಯ ನಿಷೇಧ ಆದೇಶ ಬಂದಿರುತ್ತದೆ. ಇಂದಿನ ಈ ಕಾಲಮಾನದಲ್ಲಿ ಈ ಆದೇಶದಿಂದ ನಮ್ಮ ಉದ್ಯಮಕ್ಕೆ ಬಹಳಷ್ಟು ತೊಂದರೆಗಳು ಆಗುತ್ತಿವೆ.' ಎಂದು ತಿಳಿಸಿದೆ ಹೋಟೆಲ್ ಮಾಲೀಕರ ಸಂಘ.

Valentines Day Liquor Ban May Affect The Lovers In Bengaluru

ಅಯ್ಯಯ್ಯೋ ಎಷ್ಟೆಲ್ಲಾ ಸಮಸ್ಯೆ?

ಹಾಗೇ, '14.02.24 ರಂದು ವಿಶೇಷವಾಗಿ ವ್ಯಾಲೆಂಟೈನ್ಸ್ ಡೇ ( VALENTINES DAY ) ಇರುವುದರಿಂದ ಈಗಾಗಲೇ ಎಲ್ಲಾ ರೀತಿಯ ತಯಾರಿ ನಡೆದಿರುತ್ತದೆ. ನಾಲ್ಕು ದಿನಗಳ ಕಾಲ ವ್ಯಾಪಾರ ವಹಿವಾಟು ಮುಚ್ಚುವುದರಿಂದ ಅಂದಾಜು 500 ಕೋಟಿಗೂ ಹೆಚ್ಚಿನ ವ್ಯವಹಾರವೂ ಸ್ಥಗಿತವಾಗುತ್ತದೆ. ಸರ್ಕಾರಕ್ಕೆ ಅಂದಾಜು 250 ಕೋಟಿಯಷ್ಟು ಅಬಕಾರಿ ತೆರಿಗೆಯಲ್ಲೂ ಕೊರತೆ ಉಂಟಾಗಬಹುದು. ಇಂದಿನ ಹೆಚ್ಚಿರುವ ಲೈಸೆನ್ಸ್ ಶುಲ್ಕದಿಂದ ನಾಲ್ಕು ದಿನದಲ್ಲಿ ಒಂದೊಂದು ಸಣ್ಣದುಗಳಿಗೂ ಅಂದಾಜು 12,000/- ದಷ್ಟು ನಷ್ಟವಾಗುತ್ತದೆ. ಇದರ ಜೊತೆಗೆ ಕಾರ್ಮಿಕರ ಸಂಬಳ, ಕಟ್ಟಡ ಬಾಡಿಗೆ ತೆರಿಗೆಗಳು ಇತ್ಯಾದಿ ಖರ್ಚು ವೆಚ್ಚ ನಿಭಾಯಿಸುವುದು ಬಹಳಷ್ಟು ತೊಂದರೆಯಾಗುತ್ತದೆ.' ಎಂದು ತಿಳಿಸಿದೆ ಹೋಟೆಲ್ ಸಂಘ.

ಜೊತೆಗೆ 'ಬಹಳ ಹಿಂದಿನ ವರ್ಷಗಳಲ್ಲಿ ಜಾರಿಗೆ ಬಂದ ಈ ಕಾನೂನು ಇಂದಿನ ಪ್ರಸಕ್ತ ಕಾಲಮಾನಕ್ಕೆ ಅನುಗುಣವಾಗಿ ಮಾರ್ಪಾಡಾಗುವುದು ಸೂಕ್ತ. ಇಂದಿನ ಜನತೆ ಸಾಕಷ್ಟು ವಿದ್ಯಾವಂತರಾಗಿದ್ದು ತಿಳುವಳಿಕೆ ಉಳ್ಳವರಾಗಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕೇವಲ ಅಂದಾಜು 15,000 ಮತ ಚಲಾವಣೆಯಾಗುವ ಒಂದು ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ನಾಲ್ಕು ದಿನ ಮದ್ಯ ವ್ಯಾಪಾರವನ್ನು ಮುಚ್ಚುವ ಕುರಿತು ಪುನರ್ ಪರಿಶೀಲನೆ ಮಾಡಬೇಕೆಂದು ವಿನಂತಿಸುತ್ತೇವೆ. ಹಾಗೂ ಚುನಾವಣೆಯ ದಿನ ಬೆಳಗ್ಗೆ 6.00 ರಿಂದ ಸಂಜೆ 6.00 ವರೆಗೆ ಮಾತ್ರ ಈ ಕಾನೂನನ್ನು ಜಾರಿ ಮಾಡಬೇಕೆಂದು ಹಾಗೂ ನಮ್ಮ ಉದ್ಯಮದ ಉಳಿವಿಗೆ ಸಹಕಾರ ನೀಡಬೇಕೆಂದು ಮತ್ತೊಮ್ಮೆ ಕೇಳಿಕೊಳ್ಳುತ್ತೇವೆ.' ಎಂದು ಮನವಿ ಮಾಡಿದೆ ಹೋಟೆಲ್ ಮಾಲೀಕರ ಸಂಘ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+