• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಸರ್ಕಾರಕ್ಕೆ ಹೊಸ ಹೆಸರು ಕೊಟ್ಟ ಯು. ಟಿ. ಖಾದರ್!

|

ಬೆಂಗಳೂರು, ಸೆಪ್ಟೆಂಬರ್ 16 : ಮಾಜಿ ಸಚಿವ, ಕಾಂಗ್ರೆಸ್ ನಾಯಕ ಯು. ಟಿ. ಖಾದರ್ ಕರ್ನಾಟದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ರಾಜ್ಯದ ಬಿಜೆಪಿ ಸರ್ಕಾರ ಒಂದು ಅಟೆನ್ಶನ್ ಡೈವರ್ಷನ್ ಸರ್ಕಾರ" ಎಂದು ಆರೋಪಿಸಿದ್ದಾರೆ.

ಬುಧವಾರ ಯು. ಟಿ. ಖಾದರ್ ಕರ್ನಾಟಕದ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಸೆಪ್ಟೆಂಬರ್ 21ರಿಂದ ವಿಧಾನಸಭೆ ಮುಂಗಾರು ಅಧಿವೇಶನ ಆರಂಭವಾಗು ಹಿನ್ನಲೆಯಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಬಿಜೆಪಿಯ ದೊಡ್ಡ ದೊಡ್ಡ ‌ನಾಯಕರೂ ಡ್ರಗ್ಸ್ ‌ತೆಗೆದುಕೊಳ್ಳುತ್ತಾರೆ; ಬಿ.ಕೆ ಹರಿಪ್ರಸಾದ ಹೊಸ ಬಾಂಬ್

ಕರ್ನಾಟಕದಲ್ಲಿ ಸದ್ಯ ಬಹು ಚರ್ಚಿತವಾಗಿರುವ ಡ್ರಗ್ಸ್ ಪ್ರಕರಣವನ್ನು ಸಚಿವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.‌ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಡಲು ವಿಪಕ್ಷ ಮುಖಂಡರುಗಳ ಮೇಲೆ ಗೂಬೆ ಕೂರಿಸಲು ಮುಂದಾಗಿದೆ ಎಂದು ದೂರಿದ್ದಾರೆ.

ವಿಧಾನಸೌಧದಲ್ಲಿಯೇ ಮಳೆಗಾಲದ ಅಧಿವೇಶನ: ಮಾಧುಸ್ವಾಮಿ

"ಅಧಿವೇಶನ ಆರಂಭವಾಗುತ್ತಿರುವ ಸಂದರ್ಭದಲ್ಲಿ ಜನರ ಗಮನವನ್ನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ‌" ಎಂದು ಟೀಕಿಸಿದ್ದಾರೆ.

ಡ್ರಗ್ಸ್ ನಂತೆ ಬ್ಲೂ ಫಿಲಂ ನೋಡುವುದು ಒಂದು ವ್ಯಸನವೇ: ಸಾ.ರಾ ಮಹೇಶ್ ವ್ಯಂಗ್ಯ

ಯುಟಿ ಖಾದರ್ ಟ್ವೀಟ್

ಕೊರೊನಾ ಹಾವಳಿ, ಪ್ರವಾಹ ಸಂಕಷ್ಟ, ರೈತ ವಿರೋಧಿ ಎಪಿಎಎಂಸಿ ಜನಕಾಯ್ದೆ ತಿದ್ದುಪಡಿ, ಶ್ರಮಿಕ ವಿರೋಧಿ ಕಾರ್ಮಿಕ ಕಾಯ್ದೆ ತಿದ್ದುಪಡಿಗಳ ಬಗ್ಗೆ ಸರ್ಕಾರ ಚರ್ಚಿಸುತ್ತಿಲ್ಲ ಎಂದು ಯು. ಟಿ. ಖಾದರ್ ಟ್ವೀಟ್ ಮಾಡಿದ್ದಾರೆ.

ಹಿಟ್ ಅಂಡ್ ರನ್ ರೀತಿ ವರ್ತನೆ

ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ನಾರ್ಕೋಟಿಕ್ ಸೆಲ್ ಹಾಗೂ ಕಾನೂನು ಇನ್ನಷ್ಠು ಬಲಿಷ್ಠಗೊಳಿಸೋ ಬದಲು ರಾಜಕೀಯ ಲಾಭಕ್ಕಾಗಿ ಹಿಟ್ ಅಂಡ್ ರನ್ ಕೇಸ್ ರೀತಿ ವರ್ತಿಸುತ್ತಿದೆ ಎಂದು ಯು. ಟಿ. ಖಾದರ್ ದೂರಿದ್ದಾರೆ.

ಜನರ ಗಮನ ಬೇರೆಡೆಗೆ

ಡ್ರಗ್ಸ್ ಪ್ರಕರಣದ ಮೂಲಕ ಅಧಿವೇಶನ ಆರಂಭವಾಗುತ್ತಿರುವ ಸಂದರ್ಭದಲ್ಲಿ ಜನರ ಗಮನವನ್ನ ಬೇರೆಡೆಗೆ ಸೆಳೆಯುವ ಪ್ರಯತ್ನವನ್ನು ಸರ್ಕಾರ ನಡೆಸುತ್ತಿದೆ ಎಂದು ದೂರಿದ್ದಾರೆ.

  Pakistan, OIC ,Turkeyನ ತರಾಟೆಗೆ ತಗೊಂಡ India | Oneindia Kannada
  ಸೆ. 21ರಿಂದ ಅಧಿವೇಶನ

  ಸೆ. 21ರಿಂದ ಅಧಿವೇಶನ

  ವಿಧಾನಸಭೆಯ ಮುಂಗಾರು ಅಧಿವೇಶನ ಸೆಪ್ಟೆಂಬರ್ 21ರಿಂದ ಆರಂಭವಾಗಲಿದೆ. ಕೋವಿಡ್ ಪರಿಸ್ಥಿತಿ, ಪ್ರವಾಹ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ವಿಪಕ್ಷಗಳು ಸಿದ್ಧವಾಗಿವೆ.

  English summary
  Congress leader and Former minister U. T. Khader called Karnataka BJP government as attention diversion govt. He made several tweet against B. S. Yediyurappa lead govt.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X