New Railway Line: ಆಂಧ್ರ ಸಂಪರ್ಕಿಸುವ ತುಮಕೂರು-ರಾಯದುರ್ಗ ರೈಲು ಯೋಜನೆ, 83 ಕಿಮೀ ಕಾರ್ಯಾರಂಭ, ಅಪ್ಡೇಟ್
Tumakur-Rayadurg Railway Line: ಕೇಂದ್ರ ರೈಲ್ವೆ ಇಲಾಖೆಯು ತನ್ನ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಹೊಸ ರೈಲು ಯೋಜನೆಗಳನ್ನು ಆರಂಭಿಸಿದೆ. ಇದರಲ್ಲಿ ಹೊಸ ಮಾರ್ಗ ನಿರ್ಮಾಣ ಪ್ರಗತಿಯಲ್ಲಿದೆ. ಈ ಪೈಕಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಹೊಸ ರೈಲು ಮಾರ್ಗದ ಬಗ್ಗೆ ನೈಋತ್ಯ ರೈಲ್ವೆಯು ಮಹತ್ವದ ಅಪ್ಡೇಟ್ ನೀಡಿದೆ. ಯಾವ ಮಾರ್ಗ, ಎಷ್ಟು ಕಿಲೋ ಮೀಟರ್ ಕಾರ್ಯಾರಂಭವಾಗಿದೆ. ಪ್ರಯೋಜನಗಳು, ಇತರ ಪೂರ್ಣ ಮಾಹಿತಿ ಇಲ್ಲಿದೆ.
ರೈಲ್ವೆ ಇಲಾಖೆ ತಿಳಿಸಿರುವ ಅಧಿಕೃತ ಮಾಹಿತಿ ಪ್ರಕಾರ, ಕರ್ನಾಟಕದ ತುಮಕೂರು- ರಾಯದುರ್ಗವರೆಗೆ ಒಟ್ಟು 206.53 ಕಿಲೋ ಮೀಟರ್ ಉದ್ದದ ಹೊಸ ಮಾರ್ಗ ನಿರ್ಮಿಸಲಾಗುತ್ತಿದೆ. ಇದು ಕಲ್ಯಾಣದುರ್ಗ ಮೂಲಕ ಸಾಗುವ ರೈಲು ಮಾರ್ಗವಾಗಿದ್ದು, ಪ್ರಯಾಣಿಕರಿಗೆ, ಸರಕು ಸಾಗಣೆಗೆ ಹೆಚ್ಚಿನ ವೇಗ ನೀಡಲಿದೆ. ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಪೂರ್ಣಗೊಂಡಿರುವ ಸುಮಾರು 40%ರಷ್ಟು ಮಾರ್ಗದಲ್ಲಿ ರೈಲುಗಳ ಸಂಚಾರ ಸಹ ಶುರುವಾಗಿದೆ.

83 ಕಿಲೋ ಮೀಟರ್ ಮಾರ್ಗ ಕಾರ್ಯಾರಂಭ
ಯೋಜನೆಯ ಒಟ್ಟು 206.53 ಕಿಲೋ ಮೀಟರ್ ಮಾರ್ಗದ ಪೈಕಿ 83 ಕಿಲೋ ಮೀಟರ್ ರೈಲು ಮಾರ್ಗವನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಈ ಮಾರ್ಗದಲ್ಲಿ ಈಗಾಗಲೇ ರೈಲುಗಳ ಕಾರ್ಯಾಚರಣೆಗೂ ಅನುಮತಿ ನೀಡಿ ಸೇವೆ ಒದಗಿಸಲಾಗುತ್ತಿದೆ. ಬಾಕಿ ಕಾಮಗಾರಿ ಪೂರ್ಣಗೊಂಡರೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ರೈಲು ಸಂಪರ್ಕ ಮತ್ತಷ್ಟು ಸುಧಾರಿಸಲಿದೆ. ಹೆಚ್ಚುವರಿ ರೈಲುಗಳನ್ನು ಓಡಿಸಲು, ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಮುಖ್ಯವಾಗಿ ಪ್ರಯಾಣಿಕರ ಸಂಚಾರ ಸಮಯ ಕಡಿಮೆ ಆಗುತ್ತದೆ.
ಪ್ರಯೋಜನೆಗಳು: ಎರಡು ರಾಜ್ಯಗಳ ಆರ್ಥಿಕ ಬೆಳವಣಿಗೆ
ಕಳೆದ ಮಾರ್ಗವಾಗಿ ಸಾಗುತ್ತಿದ್ದ ರೈಲಿನ ಸಮಯವು ಈ ಹೊಸ ತುಮಕೂರು-ರಾಯದುರ್ಗದ ನಡುವೆ ಸಂಚಾರ ಮಾಡುವುದರಿಂದ ಸುಮಾರು 140 ಕಿಲೋ ಮೀಟರ್ ದೂರ ಕಡಿಮೆಯಾಗುತ್ತದೆ. ಇದರಿಂದ ಸಾಕಷ್ಟು ಸಮಯ, ಪ್ರಯಾಣಿಕರಿಗೆ ಹಣ ಉಳಿಯುತ್ತದೆ. ಕರ್ನಾಟಕ ಮತ್ತು ಆಂಧ್ರ ಪ್ರದೇಶ ಎರಡೂ ರಾಜ್ಯಗಳಲ್ಲಿ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ದೊಡ್ಡ ಉತ್ತೇಜನ ಸಿಕ್ಕಂತಾಗುತ್ತದೆ. ಸರಕು ಸಾಗಣೆ, ಪ್ರಯಾಣಿಕರ ಸಂಚಾರ, ಸ್ಥಳೀಯ ವ್ಯಾಪಾರ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗುವ ನಿರೀಕ್ಷೆ ಇದೆ.
ತುಮಕೂರು-ಕಲ್ಯಾಣದುರ್ಗ-ರಾಯದುರ್ಗದವರೆಗೆ ಅನೇಕ ರೈಲು ನಿಲ್ದಾಣಗಳು ಬರಲಿವೆ. ಈ ಪೈಕಿ ಕಾರ್ಯಾರಂಭಗೊಂಡ 83 ಕಿಲೋ ಮೀಟರ್ ರೈಲು ಮಾರ್ಗದಲ್ಲಿ ಜೋಡಿ ಹಳ್ಳಿಗಳು ಸ್ಥಾಪನೆ ಆಗಿದೆ. ರಸ್ತೆ ಬ್ರಿಡ್ಜ್, ರೈಲು ಸಂಚಾರಕ್ಕೆ ಅನುಕೂಲವಾಗುವಂತೆ ನದಿ ಮೇಲೆ ಸ್ಟೀಲ್ ಮೇಲ್ಸೇತುವೆ, ವಿದ್ಯುತ್ ಸಂಪರ್ಕ ವ್ಯವಸ್ಥೆ, ನಿಲ್ದಾಣಗಳು, ಸ್ಕೈವಾಕ್ ಎಲ್ಲವನ್ನು ನಿರ್ಮಿಸಲಾಗಿದೆ. ಇಂತಹ ಮೂಲ ಸೌಕರ್ಯಗಳು ಬಾಕಿ ಇರುವ ರೈಲು ಮಾರ್ಗದಲ್ಲೂ ತಲೆ ಎತ್ತಲಿವೆ. ಆದಷ್ಟು ಶೀಘ್ರವೇ ಈ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವನ್ನು ರೈಲ್ವೆ ಇಲಾಖೆ ವ್ಯಕ್ತಪಡಿಸಿದೆ.
ಎರಡು ರಾಜ್ಯಗಳ ಮಧ್ಯ ಸಂಪರ್ಕ ಕಲ್ಪಿಸುವ ಜೊತೆಗೆ ಹೊಸ ರೈಲು ಮಾರ್ಗ ಹಾದುವ ಹೋಗುವ ಆಯಾ ಭಾಗದ ಗ್ರಾಮೀಣ ಭಾಗಗಳಿಗೆ ಹೆಚ್ಚುವರಿ ಸಾರಿಗೆ ಸೇವೆ ಲಭ್ಯವಾಗಿದೆ. ಹಳ್ಳಿಗಳ ಅಭಿವೃದ್ಧಿಗೆ, ಆರ್ಥಿಕ ಚೇತರಿಕೆಗೆ ಇದು ಸಹಾಯ ಮಾಡಲಿದೆ. 2027ರ ಹೊತ್ತಿಗೆ ಬಾಕಿ ಕಾಮಗಾರಿಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ.













Click it and Unblock the Notifications