ಡಾ.ಕೆ ಸುಧಾಕರ್ ಗೆ ಚಿಕ್ಕಬಳ್ಳಾಪುರ ಟಿಕೆಟ್ ಸಿಕ್ಕಿದ್ದು ಹೇಗೆ? ರಹಸ್ಯ ಬಿಚ್ಚಿಟ್ಟ ಪ್ರದೀಪ್ ಈಶ್ವರ್

ಬೆಂಗಳೂರು, ಮಾರ್ಚ್‌ 25: ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ. ಕೆ.ಸುಧಾಕರ್ ಅವರಿಗೆ ಬಿಜೆಪಿಯವರು ಲೋಕಸಭೆ ಟಿಕೆಟ್ ನೀಡಿದ್ದಾರೆ. ಪ್ರಜಾಪ್ರಭುತ್ವದ ಸಾವಿಗೆ ಈ ಟಿಕೆಟ್ ನೀಡಿರುವುದು ಮುನ್ನಡಿಯಾಗಿದೆ. ಕೋರೊನಾ ಸಮಯದಲ್ಲಿ 2200 ಕೋಟಿ ಹಗರಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. 40 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ ಆರೋಪ ಮಾಡಿದ್ದಾರೆ. ಆದರೂ ಬಿಜೆಪಿ ಅವರಿಗೆ ಟಿಕೆಟ್ ನೀಡಿದೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಒಬ್ಬ ಸಾಮಾನ್ಯ ವ್ಯಕ್ತಿ ಮೇಲೆ ಸೋತ ವ್ಯಕ್ತಿಗೆ, ಟ್ಯೂಷನ್ ಟೀಚರ್ ವಿರುದ್ಧ ಸೋತ ವ್ಯಕ್ತಿಗೆ ಏಕೆ ಟಿಕೆಟ್ ನೀಡಿದರು ಎನ್ನುವುದೇ ಆಶ್ವರ್ಯ. ರಾಜ್ಯದ ಕೆಲವು ಬಿಜೆಪಿ ನಾಯಕರಿಗೆ ಸಹಾಯ ಮಾಡಿರುವ ಕಾರಣ ಟಿಕೆಟ್ ದೊರೆತಿದೆ. ಹಿರಿಯ ನಾಯಕರಿಗೆ ಸೂರ್ಯ ನಮಸ್ಕಾರ, ಶವಾಸನ, ಕಪಾಲಿಪಾತಿ, ಧೀರ್ಘ ದಂಡ ನಮಸ್ಕಾರ ಈ ರೀತಿಯ ಸೇವೆಯನ್ನು ಮಾಡಿರುವ ಕಾರಣ ಟಿಕೆಟ್ ಸಿಕ್ಕಿರಬಹುದು.

Ticket To Dr K Sudhakar Indicates End Of Democracy Said Pradeep Eshwar

ಸಾಮಾನ್ಯ ಮನುಷ್ಯನಾದ ನಾನು ನನ್ನ ಎಲ್ಲಾ ವ್ಯವಹಾರ, ಗಳಿಕೆ, ಖರ್ಚು ಸೇರಿದಂತೆ ನನ್ನ ಸಂಪೂರ್ಣ ಆದಾಯದ ಬಗ್ಗೆ ನಾಳೆಯೇ ಲೆಕ್ಕ ನೀಡಲು ಸಿದ್ದನಿದ್ದೇನೆ. ನೀವು ನನ್ನ ಮೇಲೆ ಐಟಿ, ಇಡಿ ಬಿಡುವ ಪ್ರಮೇಯವೇ ಬೇಡ. ನೀವು ಪ್ರಾಮಾಣಿಕರಾಗಿದ್ದರೆ ನಿಮ್ಮ ಆದಾಯದ ಮೂಲವನ್ನು ಘೋಷಣೆ ಮಾಡುತ್ತೀರಾ. ನಿಮಗೆ ಆ ಧೈರ್ಯ ಇದೆಯೇ? ಸಂಸತ್ತು ಘನತೆಯನ್ನು ಹೊಂದಿರುವ ಸ್ಥಳ, ಅಲ್ಲಿಗೆ ನಿಮ್ಮನ್ನು ನಾವು ಹೋಗಲು ಬಿಡುವುದಿಲ್ಲ. ಇಡೀ ಕೇಂದ್ರ ಸರ್ಕಾರವೇ ಬಂದು ನಿಂತುಕೊಂಡರೂ ಸುಧಾಕರ್ ಅವರು ಸಂಸತ್ತಿನ ಮೆಟ್ಟಿಲನ್ನು ತುಳಿಯಲು ಬಿಡುವುದಿಲ್ಲ.

ಇದು ಆಕ್ರೋಶದ ಮಾತಲ್ಲ ಮಧ್ಯಮ ವರ್ಗದ ಹುಡುಗನೊಬ್ಬನ ಮಾತು. ಸಾರ್ವಜನಿಕ ಜೀವನದಲ್ಲಿ ನಿಮ್ಮನ್ನು ನೂರಾರು ಜನ ತೆಗಳುತ್ತಾರೆ, ಹೊಗಳುತ್ತಾರೆ ಆದನ್ನು ಸ್ವೀಕರಿಸುವ ಮನೋಭಾವ ಇರಬೇಕು. ನನಗೂ ಸಹ ಅನೇಕ ಜನ ಕೆಟ್ಟದಾಗಿ ಬೈಯ್ಯುತ್ತಾರೆ. ಆದರೆ ನಾನು ಅದನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುತ್ತೇನೆ. ನನ್ನ ಮೇಲೆ 22 ಪ್ರಕರಣ ದಾಖಲಿಸಿದರು. 10 ಸಾವಿರ ಜನ ಬಂದು ನನ್ನನ್ನು ಬಿಡುಗಡೆ ಮಾಡಿಸಿದರು.

ನನ್ನ ಮೇಲೆ ಇಲ್ಲಸಲ್ಲದ ಕೇಸ್ಗಳನ್ನು ಹಾಕಿಸಿದರು. ನಾನು ಜೈಲಿನಲ್ಲೇ ಉಪವಾಸ ಸತ್ಯಾಗ್ರಹ ಮಾಡಿ ಬೇಲ್ ದೊರೆಯುವಂತೆ ಮಾಡಿಕೊಳ್ಳುತ್ತೇನೆ. ಕಾನೂನನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ ವ್ಯಕ್ತಿ ಅಚಾನಕ್ ಆಗಿ ಗೆದ್ದರೆ ಎಂದು ಸಾಂದರ್ಬಿಕವಾಗಿ ಹೇಳುತ್ತಿದ್ದೇನೆ. ಈ ವ್ಯಕ್ತಿ ಗೆಲ್ಲಲ್ಲ, ಗೆಲ್ಲಬಾರದು. ಸುಧಾಕರ್ ಅವರು ಗೆದ್ದರೆ ಕೇಂದ್ರದ ಬಿಜೆಪಿಯ ಮಂತ್ರಿಗಳಿಗೂ ಇವರು ಒಂದಷ್ಟು ಆಸನಗಳನ್ನು ಕಲಿಸುತ್ತಾರೆ. ಒಂದಷ್ಟು ಜನರ ಆತ್ಮ ಸಂತೋಷ, ಆತ್ಮ ತೃಪ್ತಿಗೆ ಕೆಲಸ ಮಾಡುತ್ತಾರೆ. ಇದಾದ ನಂತರ ರಾಜ್ಯದಲ್ಲಿ ವಿಜಯೇಂದ್ರ ಸೇರಿದಂತೆ ಯಾರೂ ಇರುವುದಿಲ್ಲ.

ಸುಧಾಕರ್ ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅದಕ್ಕೆ ನಾನು ಹೇಳಿದೆ ಮಾನ ಇದ್ದವರು ನಷ್ಟವಾಗಿದೆ ಎಂದು ಕೇಸ್ ಹಾಕಬೇಕು ಇವರು ಏಕೆ ಹಾಕಿದರು?. ಅವರಿಗೆ ಮಾನ ಇದೆ ಎಂದು ಸಾಭೀತು ಮಾಡಲಿ ನಾನು ಹೇಳಿದಂತೆ ಕೇಳುತ್ತೇನೆ. ಕೆ. ಸುಧಾಕರ್ ವಿಚಿತ್ರವಾದ ರಾಜಕಾರಣಿ. ಬಿಜೆಪಿಯ ಕೆಲವು ನಾಯಕರು ಹೇಳಿದರು ಸುಧಾಕರ್ ತುಂಬಾ ಕ್ರಮಿನಲ್ ಮನುಷ್ಯ ನಿನ್ನ ಅವನು ಬಿಡುವುದಿಲ್ಲ ಎಂದು. ಆದರೆ ನಾನೇ ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದೇನೆ. ಸುಧಾಕರ್ ಅವರು ಮಾಡಿದ ಭ್ರಷ್ಟಾಚಾರದ ವಿರುದ್ದ ನನ್ನ ಹೋರಾಟ. ಒಂದೇ ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳದ ವ್ಯಕ್ತಿ ಎಂದರು.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಭಾಗದ ಯುವಕರು, ಜನತೆ ನನ್ನ ಮಾತನ್ನು ಗಮನವಿಟ್ಟು ಕೇಳಬೇಕು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡಿದರು ನೀವು ಬೆಂಬಲ ನೀಡಬೇಕು. ಸುಧಾಕರ್ ಗೆದ್ದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಆತ ಭ್ರಷ್ಟಾಚಾರಿ ಎಂದು ಅವರ ಪಕ್ಷದ ಯಲಹಂಕ ಶಾಸಕ ವಿಶ್ವನಾಥ್ ಹೇಳಿದ್ದಾರೆ. ಅವರ ಅಹಂಕಾರದ ಬಗ್ಗೆ ಅವರ ಪಕ್ಷದ ಜನರೇ ಮಾತನಾಡುತ್ತಾರೆ.

ನೀವು ನನ್ನ ವಿರುದ್ದ ಧೈರ್ಯವಾಗಿ ಮಾತನಾಡಿ ನಾನು ಕೋರ್ಟಿಗೆ ಹೋಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸಹಿಸಿಕೊಳ್ಳುವ ಶಕ್ತಿ ಇದ್ದರೆ ಮಾತ್ರ ರಾಜಕಾರಣಕ್ಕೆ ಬರಬೇಕು. ಮೆಡಿಕಲ್ ಕಾಲೇಜು, ಕ್ರಷರ್ ಸೇರಿದಂತೆ ಅನೇಕ ವಿಚಾರದಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪವಿದೆ. ನೀವು ಸಾರ್ವಜನಿಕ ಚರ್ಚೆಗೆ ಬರುವಿರಾ? ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+