Cyber Crime: ಸೈಬರ್ ವಂಚಕರಿಂದ ತಪ್ಪಿಸಿಕೊಳ್ಳಲು ಇಷ್ಟು ಮಾಡಿ ಸಾಕು!
Cyber Crime: ಸೈಬರ್ ಕ್ರೈಂ ಹಾಗೂ ಸೈಬರ್ ವಂಚಕರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದೀಗ ಸೈಬರ್ ವಂಚಕರಿಂದ ತಪ್ಪಿಸಿಕೊಳ್ಳುವ ಹಾಗೂ ನಿಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವ ಬಗ್ಗೆ ರಾಜ್ಯ ಪೊಲೀಸರು ಮಹತ್ವದ ಸಲಹೆಯೊಂದನ್ನು ಕೊಟ್ಟಿದ್ದಾರೆ. ಈ ಸಲಹೆಯನ್ನು ನೀವು ಪಾಲಿಸಿಕೊಂಡಲ್ಲಿ ನೀವು ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಯಾವುದೇ ಸೈಬರ್ ವಂಚಕರ ಜಾಲಕ್ಕೆ ಸಿಲುಕಿಕೊಳ್ಳಲು ಸಾಧ್ಯವೇ ಇಲ್ಲ. ಹೌದು ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಹಾಗೂ ಸೈಬರ್ ವಂಚಕರ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಸೈಬರ್ ವಂಚಕರ ಹಾವಳಿ ಜೋರಾಗಿದೆ. ಜನರು ಈ ವಂಚನೆ ಜಾಲಕ್ಕೆ ಸಿಲುಕಿ ಕೋಟ್ಯಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಇದೀಗ ರಾಜ್ಯ ಪೊಲೀಸ್ ಇಲಾಖೆಯಿಂದ ಇದನ್ನು ತಪ್ಪಿಸಲು ಸಲಹೆಯೊಂದನ್ನು ಕೊಡಲಾಗಿದೆ.
ಸೈಬರ್ ವಂಚಕರು ಈಗೆಲ್ಲಾ ಯಾವ ರೀತಿ ವಂಚನೆ ಮಾಡುತ್ತಾರೆ ಎನ್ನುವುದೇ ತಿಳಿಯುವುದಿಲ್ಲ. ಶುಭಾಶಯದ ನೆಪದಲ್ಲೂ ಈಗೆಲ್ಲ ವಂಚನೆಗಳು ನಡೆಯುತ್ತಿವೆ. ಆಫರ್, ಶುಭಾಶಯ ಹಾಗೂ ಸರ್ಕಾರದ ಆದೇಶ ಎನ್ನುವ ನೆಪದಲ್ಲಿ ಬರುವ ಮೆಸೇಜ್ ಹಾಗೂ ಲಿಂಕ್‌ಗಳ ಮೂಲಕವೂ ವಂಚಕರು ಮೋಸ ಮಾಡುತ್ತಿದ್ದಾರೆ. ಅದರಲ್ಲೂ ಈ ರೀತಿ ವಂಚನೆ ಮಾಡುವವರಲ್ಲಿ ಉತ್ತರ ಭಾರತೀಯ ವಂಚಕರೇ ಜಾಸ್ತಿ. ಇದಕ್ಕೆ ಕರ್ನಾಟಕ ಪೊಲೀಸರು ಸರಳ ಹಾಗೂ ಸಿಂಪಲ್ ಸಲಹೆಯೊಂದನ್ನು ಕೊಟ್ಟಿದ್ದಾರೆ. ಅದರ ವಿವರಣೆ ನೋಡೋಣ..

ಕರ್ನಾಟಕದಲ್ಲಿ ಸೈಬರ್ ವಂಚಕರ ಜಾಲದ ಬಗ್ಗೆ ರಾಜ್ಯ ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಲ್ಲೇ ಇದ್ದಾರೆ. ಇಷ್ಟಾದರೂ ವಂಚಕರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸರಳ ಐಡಿಯಾವೊಂದನ್ನು ಕೊಟ್ಟಿದ್ದಾರೆ.
ಸೈಬರ್ ವಂಚಕರಿಂದ ತಪ್ಪಿಸಿಕೊಳ್ಳು ಕನ್ನಡ ಬಳಸಿ: ಸೈಬರ್ ವಂಚಕರಿಂದ ತಪ್ಪಿಸಿಕೊಳ್ಳಲು ಕನ್ನಡ ಬಳಸಿ ಎಂದು ಅವರು ಹೇಳಿದ್ದಾರೆ. ಕೆಲವೊಮ್ಮೆ...
ನಮ್ಮ ಕನ್ನಡ ಭಾಷೆ ನಮ್ಮನ್ನು ಸೈಬರ್ ವಂಚಕರಿಂದ ಪಾರು ಮಾಡಬಲ್ಲದು ಹೇಗೆ ಎಂದು ಅವರು ವಿವರಿಸಿದ್ದಾರೆ. ಸೈಬರ್ ವಂಚಕರು ಕರೆ ಮಾಡಿದಾಗ ಹೆಚ್ಚಾಗಿ ಹಿಂದಿ ಭಾಷೆಯಲ್ಲಿಯೇ ಮಾತನಾಡುತ್ತಾರೆ. ನಿಮಗೆ ಇತರೆ ಭಾಷೆಗಳು ಗೊತ್ತಿದ್ದರೂ ಸಹ ವಂಚಕರಿಗೆ ಕನ್ನಡದಲ್ಲಿಯೇ ಮಾತನಾಡಿ ಎಂದು ಒತ್ತಾಯಿಸಿ. ಅಲ್ಲಿಗೆ ಭಾಗಶಃ ವಂಚಕರು ಕರೆ ಕಟ್ ಮಾಡುತ್ತಾರೆ. ಇದರ ಹೊರತಾಗಿಯೂ ಸೈಬರ್ ವಂಚನೆಗಳ ಬಗ್ಗೆ ಎಚ್ಚರವಿರಲಿ ಎಂದು ಹೇಳಿದ್ದಾರೆ.
ಜನರ ರಿಯಾಕ್ಷನ್ ಹೆಂಗಿದೆ: ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ರಿಪ್ಲೈ ಮಾಡಿರುವ ಕನ್ನಡಿಗರು ಕನ್ನಡ ಬಳಸಿ ಸೈಬರ್ ವಂಚನೆಯಿಂದ ಪಾರಾಗಿ ಎಂದಿದ್ದಾರೆ. ಅಂದರೆ ಹೆಚ್ಚು ಸೈಬರ್ ವಂಚಕರು ಹಿಂದಿ ಭಾಷಿಕರೇ ಹಾಗಿರುತ್ತಾರೆ ಅರ್ಥಾತ್ ಉತ್ತರ ಭಾರತೀಯರೇ ಎಂದು ಹರೀಶ್ ಎನ್ನುವವರು ಕಮೆಂಟ್ ಮಾಡಿದ್ದಾರೆ.












Click it and Unblock the Notifications