ಬೆಂಗಳೂರಿನ ದಾಹ ತಣಿಸಲು ಶರಾವತಿ, ತುಂಗಾ ಭದ್ರಾ ನೀರು
ಬೆಂಗಳೂರು, ಜೂನ್ 12: ಬೆಂಗಳೂರಿಗರ ಕುಡಿಯುವ ನೀರಿನ ದಾಹ ತಣಿಸಲು ಕಾವೇರಿ ನದಿಯಿಂದ ಸಾಧ್ಯವಾಗದ ಕಾರಣ ಮತ್ತೊಮ್ಮೆ ಲಿಂಗನಮಕ್ಕಿ ಅಣೆಕಟ್ಟಿನಿಂದ ಶರಾವತಿ ಹಾಗೂ ತುಂಗಾ ಭದ್ರಾ ನದಿಯಿಂದ ನೀರು ತರುವ ಪ್ರಯತ್ನಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ.
ತುಂಗಾ ಭದ್ರಾ ನದಿಯಿಂದ ಬೆಂಗಳೂರಿಗೆ ನೀರು ಒದಗಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಈ ಬಗ್ಗೆ ವಿಸ್ತೃತ ವರದಿ ನೀಡುವಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚಿಸಿದ್ದಾರೆ.
ಬೆಂಗಳೂರಿನಿಂದ 425 ಕಿ.ಮೀ ದೂರದಲ್ಲಿರುವ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ತರುವುದು ಅತ್ಯಂತ ಸೂಕ್ತ ಕ್ರಮ ಎಂದು ನೀರಾವರಿ ತಜ್ಞರು ಅಭಿಪ್ರಾಯಪಟ್ಟಿದ್ದರೆ, ಪರಿಸರವಾದಿಗಳು, ಬೆಂಗಳೂರಿನಲ್ಲಿ ಜಲ ಸಂಪನ್ಮೂಲ ಉಳಿಸಿಕೊಂಡರೆ ನೀರಿನ ದಾಹ ತಣಿಸಬಹುದು ಎಂದಿದ್ದಾರೆ.
ಈಗ 18 ಟಿಎಂಸಿ ಅಡಿಗಳಷ್ಟು ನೀರು ತರಲು ಬೇಕಾದ ರೂಪುರೇಷೆ ಸಿದ್ಧಪಡಿಸುವಂತೆ ಮಂಗಳವಾರ(ಜೂನ್ 12) ದಂದು ನಡೆದ ಸಭೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ಸೂಚಿಸಿದ್ದಾರೆ.

ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ತರುವುದು ಸೂಕ್ತ ಕ್ರಮ
ಬೆಂಗಳೂರಿನಿಂದ 425 ಕಿ.ಮೀ ದೂರದಲ್ಲಿರುವ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ತರುವುದು ಅತ್ಯಂತ ಸೂಕ್ತ ಕ್ರಮ ಎಂದು ನೀರಾವರಿ ತಜ್ಞರು ಅಭಿಪ್ರಾಯ ಪಟ್ಟಿದ್ದು, ಈಗ 18 ಟಿಎಂಸಿ ಅಡಿಗಳಷ್ಟು ನೀರು ತರಲು ಬೇಕಾದ ರೂಪುರೇಷೆ ಸಿದ್ಧಪಡಿಸುವಂತೆ ಮಂಗಳವಾರ(ಜೂನ್ 12) ದಂದು ನಡೆದ ಸಭೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ಸೂಚಿಸಿದ್ದಾರೆ.

ವಿವಿಧ ಜಿಲ್ಲೆಗಳಿಗೆ ಪ್ರಯೋಜನ
ವಿವಿಧ ಜಿಲ್ಲೆಗಳಿಗೆ ಪ್ರಯೋಜನ: ಲಿಂಗನಮಕ್ಕಿಯಿಂದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತಂದರೆ, ಬೆಂಗಳೂರಷ್ಟೇ ಅಲ್ಲ, ಚಿಕ್ಕಬಳ್ಳಾಪುರ, ಕೋಲಾರ ಭಾಗಗಳಿಗೂ ಕುಡಿಯುವ ನೀರು ಒದಗಿಸಬಹುದು ಎಂದು ನೀರಾವರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

1964ರಲ್ಲಿ ನಿರ್ಮಾಣಗೊಂಡ ಅಣೆಕಟ್ಟು
1964ರಲ್ಲಿ ನಿರ್ಮಾಣಗೊಂಡ ಅಣೆಕಟ್ಟಿನಲ್ಲಿ ಗರಿಷ್ಠ 151 ಟಿಎಂಸಿ ಅಡಿಯಷ್ಟು ನೀರು ಸಂಗ್ರಹಿಸಬಹುದಾಗಿದೆ. ಲಿಂಗಮಕ್ಕಿ ಜಲಾಶಯವನ್ನು ಶರಾವತಿ ನದಿಗೆ ಅಡ್ಡಲಾಗಿ, 1964ರಲ್ಲಿ ಕರ್ನಾಟಕ ಸರ್ಕಾರ ನಿರ್ಮಿಸಿತು. ಈ ಅಣೆಕಟ್ಟು 2.4 ಕಿ.ಮೀ. ಉದ್ದವಿದ್ದು, 1819 ಅಡಿ ಎತ್ತರವಿದೆ. 4368 ಮಿಲಿಯನ್ ಮೀಟರ್ ಕ್ಯೂಬ್ ನೀರು ಸಂಗ್ರಹ ಸಾಮರ್ಥ್ಯವನ್ನು ಜಲಾಶಯ ಹೊಂದಿದೆ.

ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆ
ನೀರಿನ ಬೇಡಿಕೆ: ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆ 18 ರಿಂದ 20 ಟಿಎಂಸಿ ಅಡಿಯಷ್ಟಿದ್ದು,ಮಳೆಕೊಯ್ಲು ವಿಧಾನದಿಂದ 15ಟಿಎಂಸಿ ಅಡಿಯಷ್ಟು ನೀರು ಉಳಿಸಬಹುದು. ನೀರು ಪುನರ್ ಬಳಕೆ ವಿಧಾನದಿಂದ 16 ಟಿಎಂಸಿ ಅಡಿಗಳಷ್ಟು ನೀರನ್ನು ಉಳಿಸಬಹುದು ಎಂದು ಐಐಎಸ್ಸಿ ಪ್ರೊ. ಡಾ ಟಿ. ವಿ ರಾಮಚಂದ್ರ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications