ಹಾಲಿ ಶಾಸಕರಿಗೆ ಟಿಕೆಟ್ ಕೊಡಲೇ ಬೇಕೆನ್ನುವ ಕಾನೂನಿಲ್ಲ, ಇದೇನು ನಮ್ಮಪ್ಪನ ಆಸ್ತಿಯಲ್ಲ: ರೇಣುಕಾಚಾರ್ಯ

ದಾವಣಗೆರೆ, ಜನವರಿ 10: ಹಾಲಿ ಶಾಸಕರಿಗೆ ಟಿಕೆಟ್ ಕೊಡಲೆಬೇಕು ಎಂಬ ಕಾನೂನು ಇಲ್ಲ. ಇದೇನು ನಮ್ಮಪ್ಪನ ಆಸ್ತಿಯಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಈ ಬಾರಿಯ ಕೆಲವು ಹಾಲಿ ಶಾಸಕರಿಗೆ ಬಿಜೆಪಿಯಲ್ಲಿ ಟಿಕೆಟ್ ಕೈ ತಪ್ಪುವ ಆತಂಕ ಕಾಡುತ್ತಿದೆ. ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಾಧ್ಯಮಗಳ ಜೊತೆಗೆ ಪ್ರತಿಕ್ರಿಯಿಸಿದ ಅವರು, ಹಾಲಿ ಶಾಸಕರಿಗೆ ಟಿಕೆಟ್ ಕೊಡಲೆಬೇಕು ಎಂಬ ಕಾನೂನು ಇಲ್ಲ. ಇದೇನು ನಮ್ಮಪ್ಪನ ಆಸ್ತಿಯಲ್ಲ. ಕಾನೂನು ಇಲ್ಲ. ಪಕ್ಷ ಏನು ಬೇಕಾದರೂ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಹೇಳಿಕೆಯನ್ನ ಕೊಟ್ಟಿದ್ಧಾರೆ.

ಟಿಕೆಟ್ ಕೊಡುವುದು ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಪಕ್ಷದ ತೀರ್ಮಾಣಕ್ಕೆ ನಾವೆಲ್ಲ ಬದ್ದರಾಗಿರಬೇಕಷ್ಟೆ ಎಂದು ಹೇಳಿದ್ದಾರೆ.

There is no law to give tickets to sitting MLAs Said M P Renukacharya

ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ರೇಣುಕಾಚಾರ್ಯ, ಮುಸ್ಲಿಂ ಗೂಂಡಾಗಳಿಂದ ಹಿಂದು ಯುವಕರನ್ನ ಟಾರ್ಗೇಟ್ ಮಾಡಲಾಗುತ್ತಿದೆ. ಇದರಲ್ಲಿ ಕಾಂಗ್ರೆಸ್ ಗೂಂಡಾಗಳು ಅಲ್ಪಸಂಖ್ಯಾತರಿಗೆ ಪ್ರಚೋದನೆ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರಣ. ಕಾಂಗ್ರೆಸ ನವರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ಧಾರೆ, ನಾಚಿಕೆಯಾಗಬೇಕು ಅವರಿಗೆ ಎಂದು ಆರೋಪ ಮಾಡಿದ್ದಾರೆ.

ಹಿಂದು ಯುವಕರ ಮೇಲಿನ ಹಲ್ಲೆಯನ್ನ ನಾವು ಸಹಿಸಲ್ಲ ಎಂದು ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದು, ಇದಕ್ಕೆಲ್ಲ ನೇರವಾಗಿ ಕಾಂಗ್ರೆಸ್ ಕಾರಣ. ಕಾನೂನಿನಡಿ ಯಾರಿಗೆ ಯಾವ ಶಿಕ್ಷೆ ಕೊಡಬೇಕು, ಯಾರನ್ನ ಬಂಧಿಸಬೇಕು ಎಂಬುದರ ಬಗ್ಗೆ ಸರ್ಕಾರ ಕ್ರಮಕೈಗೊಳ್ಳುತ್ತದೆ. ಉದ್ಧಟತನ ತೋರುವರನ್ನ, ಮೆರೆಯುವವರನ್ನ ಮಟ್ಟ ಹಾಕುವುದೇ ನಮ್ಮ ಸರ್ಕಾರದ ಉದ್ಧೇಶ. ಕೇಂದ್ರದಲ್ಲಿಯೂ ನಮ್ಮದೇ ಸರ್ಕಾರವಿದ್ದು, ಕಟ್ಟುನಿಟ್ಟಿನ ಕ್ರಮ ಜರುಗಿಸುವುದೆ ಸರ್ಕಾರದ ಉದ್ದೇಶ. ಬಿಜೆಪಿ ಯಾವುದೇ ಗೂಂಡಾಗಳನ್ನ ರಕ್ಷಣೆ ಮಾಡುವುದಿಲ್ಲ. ಗೂಂಡಾಗಿರಿ ಮಾಡುವವರನ್ನ ಮಟ್ಟ ಹಾಕುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಕಾನೂನಾತ್ಮಕ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಸ್ಯಾಂಟ್ರೋ ರವಿ ಪ್ರಕರಣದ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, ಯಾರ್ರೀ ಈ ಸ್ಯಾಂಟ್ರೋ ರವಿ ಎಂದಿದ್ದಾರೆ. ಸ್ಯಾಂಟ್ರೋ ರವಿಗೂ ಬಿಜೆಪಿ ಮತ್ತು ಸಚಿವರಿಗೆ ಯಾವುದೇ ಸಂಬಂಧವಿಲ್ಲ. ಯಾರೋ ಬಂದು ಪೋಟೋ ತಗೊಂಡ್ರೆ ಮಂತ್ರಿಗಳು ಹೊಣೆನಾ? ಇವೆಲ್ಲ ಕಾಂಗ್ರೆಸ್ ಪೋಷಣೆ ಮಾಡಿರುವ ಗೂಂಡಾಗಳು. 150 ಸೀಟ್ ಗೆಲ್ಲುವ ಮೂಲಕ ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ತರಲು ಕೇಂದ್ರ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ನಾವೆಲ್ಲ ಒಂದಾಗಿ ಬಿಜೆಪಿಯನ್ನ ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸವನ್ನ ವ್ಯಕ್ತಪಡಿಸಿದ್ಧಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+