'ಅಮಿತ್ ಶಾ'ಗಾಗಿ ಅಧಿವೇಶನವನ್ನೇ ಮೊಟಕುಗೊಳಿಸಿದ ರಾಜ್ಯ ಸರ್ಕಾರ: ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು, ಡಿಸೆಂಬರ್ 29: ಬೆಳಗಾವಿಯ ವಿಧಾನಸಭೆ ಕಲಾಪವನ್ನು ಮೊಟಕುಗೊಳಿಸಿದ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಈ ವಿಚಾರವಾಗಿ ಗುರುವಾರ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಅಧಿವೇಶನವನ್ನು ಕಾಟಾಚಾರಕ್ಕೆ ನಡೆಸಿದ ಸರ್ಕಾರಕ್ಕೆ ಜನರ ಸಮಸ್ಯೆಗಳನ್ನು ಚರ್ಚಿಸಲು ಆಸಕ್ತಿ ಇಲ್ಲ, ಉತ್ತರ ಕೊಡಲಾಗದ ಸಚಿವರು ಗೈರು ಹಾಜರಿಯ ಮೊರೆ ಹೋಗಿದ್ದೆ ಹೆಚ್ಚು. ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಜನರ ಸಮಸ್ಯೆ ಮರೆತು ಅಧಿವೇಶನವನ್ನು ಮುಂಚಿತವಾಗಿ ಮೊಟಕುಗೊಳಿಸಿದ ಬಿಜೆಪಿ ಸರ್ಕಾರ ಜನಹಿತ ಮುಖ್ಯವಲ್ಲ ಎಂಬುದನ್ನು ಸಾಬೀತುಪಡಿಸಿದೆ' ಎಂದು ಟೀಕಿಸಿದೆ.
ಇದು ಬಿಜೆಪಿ ಮಾಡುತ್ತಿರುವ ಪ್ರಜಾಪ್ರಭುತ್ವದ ಅಣಕವೆಂದು ಹೇಳಿರುವ ಕಾಂಗ್ರೆಸ್, ನಾಲ್ಕು ಅಂಶಗಳನ್ನು ಟ್ವೀಟ್ ಮಾಡಿದೆ. ಈ ಕೆಳಗೆ ನಾಲ್ಕು ಅಂಶಗಳಿವೆ...

*11 ದಿನದ ಬೆಳಗಾವಿ ಅಧಿವೇಶನ ಹತ್ತೇ ದಿನಕ್ಕೆ ಮೊಟಕು
*ಬೆಳಗಾವಿಯಲ್ಲಿದ್ದರೂ ಕಲಾಪಕ್ಕೆ ಹಾಜರಾಗದ ಬಿಜೆಪಿಯ ಈಶ್ವರಪ್ಪ, ರಮೇಶ್ ಜಾರಕಿಹೊಳಿ
*ಸಚಿವರುಗಳು ನಿರಂತರ ಗೈರುಹಾಜರಿ
*ಅಧಿವೇಶದ ಮದ್ಯೆಯೇ ಸಿಎಂ ದೆಹಲಿ ಪ್ರವಾಸ, (ಹೋಗಿದ್ದೇಕೆ ಎಂದು ಅವರಿಗೂ ತಿಳಿದಂತಿಲ್ಲ!)
◆11 ದಿನದ ಬೆಳಗಾವಿ ಅಧಿವೇಶನ ಹತ್ತೇ ದಿನಕ್ಕೆ ಮೊಟಕು
— Karnataka Congress (@INCKarnataka) December 29, 2022
◆ಬೆಳಗಾವಿಯಲ್ಲಿದ್ದರೂ ಕಲಾಪಕ್ಕೆ ಹಾಜರಾಗದ ಬಿಜೆಪಿಯ ಈಶ್ವರಪ್ಪ, ರಮೇಶ್ ಜಾರಕಿಹೊಳಿ
◆ಸಚಿವರುಗಳು ನಿರಂತರ ಗೈರುಹಾಜರಿ
◆ಅಧಿವೇಶದ ಮದ್ಯೆಯೇ ಸಿಎಂ ದೆಹಲಿ ಪ್ರವಾಸ, (ಹೋಗಿದ್ದೇಕೆ ಎಂದು ಅವರಿಗೂ ತಿಳಿದಂತಿಲ್ಲ!)
ಇದು @BJP4Karnataka ಮಾಡುತ್ತಿರುವ ಪ್ರಜಾಪ್ರಭುತ್ವದ ಅಣಕ!
'ಬೆಳಗಾವಿ ಅಧಿವೇಶನವನ್ನು ಕಾಲಹರಣಕ್ಕೆ ಬಳಸಿದ ಸಚಿವರು ಗೈರುಹಾಜರಾಗಿದ್ದೆ ಹೆಚ್ಚು. ವಿಸ್ತರಿಸಬೇಕಿದ್ದ ಅಧಿವೇಶನವನ್ನು ನಿಗದಿಗಿಂತ ಮೊದಲೇ ಕೊನೆಗಾಣಿಸಿದ ಬಿಜೆಪಿ ಕೊನೆ ದಿನವೂ ಕಾಲಹರಣಕ್ಕೆ ಅವಕಾಶ ಕೇಳಿದ್ದು ನಾಚಿಕೆಗೇಡು. ಬಿಜೆಪಿಗೆ ಸದನದ ಮೇಲೆ ಅಷ್ಟು ಆಸಕ್ತಿ ಇದ್ದಿದ್ದರೆ ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಅಧಿವೇಶನ ಮೊಟಕುಗೊಳಿಸಿದ್ದೇಕೆ' ಎಂದು ಪ್ರಶ್ನಿಸಿದೆ.

ವಿರೋಧ ಪಕ್ಷದ ಸಿದ್ದರಾಮಯ್ಯ ಆಕ್ರೋಶ
ಇದೇ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 'ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ನಾಳಿನ ಸದನವನ್ನು ರದ್ದು ಮಾಡಿರುವ ರಾಜ್ಯ ಬಿಜೆಪಿ ಸರ್ಕಾರದ ನಿಲುವು ನಾಡವಿರೋಧಿಯಾದುದ್ದು. ಸದನವನ್ನು ಇನ್ನು ಒಂದು ವಾರ ವಿಸ್ತರಿಸಿ, ಜನರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತೇನೆ' ಎಂದು ಹೇಳಿದ್ದಾರೆ.
'ಇನ್ನೂ ಹದಿನೈದು ದಿನ ಚರ್ಚಿಸಿದರೂ ಮುಗಿಯದಷ್ಟು ಜನರ ಸಮಸ್ಯೆಗಳಿವೆ, ಅವೆಲ್ಲವನ್ನೂ ಬದಿಗೊತ್ತಿ ಅಮಿತ್ ಶಾ ಅವರ ಎದುರು ನಡುಬಗ್ಗಿಸಿ ನಿಲ್ಲಲು ಸದನವನ್ನೇ ಮೊಟಕುಗೊಳಿಸಿರುವುದು ಜನತೆಯ ಮೇಲೆ ರಾಜ್ಯ ಸರ್ಕಾರಕ್ಕಿರುವ ಅಸಡ್ಡೆಯನ್ನು ತೋರುತ್ತದೆ' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
'ಹಳೆಯ ಪಿಂಚಣಿ ಪದ್ಧತಿ ಮರುಜಾರಿ, ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ, ಚಿಕಿತ್ಸೆ ಸಿಗದೆ ತುಮಕೂರಿನಲ್ಲಿ ಬಾಣಂತಿ, ಹಸುಗೂಸಿನ ಸಾವು ಇಂಥಾ ಹತ್ತಾರು ವಿಷಯಗಳು ಇನ್ನೂ ಚರ್ಚೆಯಾಗಬೇಕಿವೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಇದ್ಯಾವುದು ಬೇಕಿಲ್ಲ, ಅವರಿಗೆ ಬೇಕಿರುವುದು ಅಮಿತ್ ಶಾ ಅವರ ಕೃಪಾಕಟಾಕ್ಷ ಮಾತ್ರ' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.












Click it and Unblock the Notifications