Government Employee: ಸರ್ಕಾರಿ ನೌಕರರ ರಾಜ್ಯ ಮಹಾ ಸಮ್ಮೇಳನ ; ನೌಕರರ ಸಮಸ್ಯೆ ಚರ್ಚೆ

ಬೀದರ್‌, ಫೆಬ್ರವರಿ 19: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಬೆಂಗಳೂರಿನಲ್ಲಿ ಫೆಬ್ರವರಿ 27ರಂದು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದು, ನೌಕರರ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು ಎಂದು ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದರು.

ಈ ಕುರಿತು ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಸರ್ಕಾರಿ ನೌಕರರ ರಾಜ್ಯ ಮಹಾ ಸಮ್ಮೇಳನದಲ್ಲಿ ಜಿಲ್ಲೆಯ 2 ಸಾವಿರ ಸರ್ಕಾರಿ ನೌಕರರು ಪಾಲ್ಗೊಳ್ಳಲಿದ್ದಾರೆ. ಇನ್ನೂ ಏಳನೇ ವೇತನ ಆಯೋಗದ ಶಿಫಾರಸು, ಎನ್‌ಪಿಎಸ್‌ ರದ್ದುಪಡಿಸಿ ಒಪಿಎಸ್ ಜಾರಿಗೊಳಿಸುವುದು, ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು ಮೊದಲಾದ ಬೇಡಿಕೆಗಳ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.

The Issue Of Employees Will Be Discussed In The State Conference Says Rajendrakumar

ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನವನ್ನ ಉದ್ಘಾಟಿಸಲಿದ್ದಾರೆ. ಅಲ್ಲದೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ 2 ಸಾವಿರ ಸರ್ಕಾರಿ ನೌಕರರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳ ನೌಕರರು ರೈಲು, ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ. ಸಮ್ಮೇಳನದಲ್ಲಿ ನೌಕರರಿಗೆ ಊಟ, ವಸತಿ ಸೌಲಭ್ಯ ಇರಲಿದೆ ಎಂದು ತಿಳಿಸಿದರು. ಇನ್ನೂ ಈ ವೇಳೆ ಜಿಲ್ಲೆಯ ನೌಕರರು ಸಮ್ಮೇಳನದ ಯಶಸ್ವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಮ್ಮೇಳನದ ಕರಪತ್ರ ಬಿಡುಗಡೆ ಮಾಡಿದರು.

ಇನ್ನೂ ಈ ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಕಾರ್ಯಾಧ್ಯಕ್ಷ ರಾಜಕುಮಾರ ಹೊಸದೊಡ್ಡೆ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ರಾಜ್ಯ ಪರಿಷತ್ ಸದಸ್ಯ ಸುಧಾಕರ ಶೇರಿಕಾರ, ವೈಶಾಲಿ, ಸಿದ್ದಮ್ಮ, ಓಂಕಾರ ಮಲ್ಲಿಗೆ, ಪಾಂಡುರಂಗ ಬೆಲ್ದಾರ್, ಮನೋಹರ ಕಾಶಿ, ಶಿವರಾಜ ಕಪಲಾಪುರೆ, ರಾಜಪ್ಪ ಪಾಟೀಲ, ಮಲ್ಲಿಕಾರ್ಜುನ ಮೇತ್ರೆ, ರಾಜಕುಮಾರ ಬೇಲೂರೆ, ರಾಜಕುಮಾರ ಉದಗಿರೆ, ಲಿಂಗಾನಂದ ಮಹಾಜನ, ಭೀಮಶಂಕರ ಆದೆಪ್ಪ, ಮಹೆಬೂಬ್ ಪಟೇಲ್, ಸಾರಿಕಾ ಗಂಗಾ, ಸಂಜೀವಕುಮಾರ ಸೂರ್ಯವಂಶಿ, ವಿಜಯಕುಮಾರ ಪಾಟೀಲ, ಡಾ. ನಾಗರಾಜ, ಡಾ. ಶರಣಪ್ಪ ಮುಡಬಿ, ಭೀಮರಾವ್ ಹಡಪದ, ಸಂತೋಷ ಚಲುವಾ, ಸುಮತಿ ರುದ್ರಾ, ಸೊಹೇಲ್ ಅಹಮ್ಮದ್, ರೂಪಾದೇವಿ, ದೀಪಾ ದೇಶಪಾಂಡೆ, ನರಸಮ್ಮ ಪಾಟೀಲ, ಶ್ರೀದೇವಿ ವಿಜಯಕುಮಾರ ಪಾಟೀಲ, ಸುವರ್ಣಾ, ಉಮೇಶ ಪಾಟೀಲ, ಶಾಮರಾವ್ ಮೋರಗಿಕರ್ ಹಲವರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+