ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ
ಹಾಸನ, ಫೆ. 1: ಶ್ರವಣಬೆಳಗೊಳದ ಸಾಹಿತ್ಯ ಸಮ್ಮೇಳನಕ್ಕೆ ಉದ್ಘಾಟನೆಗೆ ತೆರಳುತ್ತಿದ್ದ ಸಿಎಂ ಸಿದ್ದರಾಮಯ್ಯ ಹೆಲಿಕ್ಯಾಪ್ಟರ್ ನಕಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಲ ಕಾಲ ಗೊಂದಲಕ್ಕೆ ಎಡೆಮಾಡಿಕೊಟ್ಟಿತು.
ಶ್ರವಣಬೆಳಗೊಳದಲ್ಲಿ ಇಳಿಯಬೇಕಿದ್ದ ಹೆಲಿಕ್ಯಾಪ್ಟರ್ ನಿಗದಿತ ಸಮಯಲಕ್ಕಿಂತ 8 ನಿಮಿಷ ತಡವಾಗಿ ಇಳಿಯಿತು. ಹೆಲಿಕ್ಯಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ವಿಳಂಬಕ್ಕೆ ಕಾರಣವಾಯಿತು.[ಸಿದ್ದು ಪಯಣಿಸಬೇಕಿದ್ದ ಹೆಲಿಕಾಪ್ಟರಲ್ಲಿ ಬೆಂಕಿ, ತಪ್ಪಿದ ಅನಾಹುತ]

ಭೂ ಸ್ಪರ್ಶ ಮಾಡಬೇಕಿದ್ದಾಗ ಹೆಲಿಕ್ಯಾಪ್ಟರ್ ನಿಯಂತ್ರಣಕ್ಕೆ ಬರಲಿಲ್ಲ. ಹಾಗಾಗಿ ಮತ್ತೆ ಗಾಳಿಯಲ್ಲೇ 8 ನಿಮಿಷ ಹಾರಾಟ ನಡೆಸಿದ ನಂತರ ಭೂಮಿಗೆ ಇಳಿಯಿತು. ತಾಂತ್ರಿಕ ದೋಷಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ.
ಜನವರಿ ಎರಡನೇ ವಾರ ಮೈಸೂರಿಗೆ ಪ್ರಯಾಣಿಸುತ್ತಿದ್ದ ಸಿಎಂ ಹೆಲಿಕ್ಯಾಪ್ಟರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಅವಾಂತರ ಸೃಷ್ಟಿಯಾಗಿತ್ತು. ಭದ್ರತಾ ಸಿಬ್ಬಂದಿ ಸಿಎಂ ಅವರನ್ನು ಹೆಲಿಕಾಪ್ಟರ್‌ನಿಂದ ಕೆಳಗಿಳಿಸಿ ಅನಾಹುತ ತಪ್ಪಿಸಿದ್ದರು.












Click it and Unblock the Notifications