SWR: ಯಶವಂತಪುರ-ತಾಳಗುಪ್ಪ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್..
ಬೆಂಗಳೂರು, ಜುಲೈ 19: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ, ಹಬ್ಬಗಳ ವಿಶೇಷ ಸಂದರ್ಭಗಳಲ್ಲಿ ರೈಲುಗಳ ವಿಸ್ತರಣೆ, ಹೊಸ ರೈಲು ಕಾರ್ಯಾಚರಣೆ ಮಾಡಲಾಗುತ್ತಿದೆ. ಇದೀಗ ಮಲೆನಾಡು ಭಾಗದ ಜನರಿಗೆ ರೈಲ್ವೆ ಅಧಿಕಾರಿಗಳು ಸಿಹಿ ಸುದ್ದಿ ನೀಡಿದ್ದಾರೆ. ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಶಿವಮೊಗ್ಗ ಮಾರ್ಗವಾಗಿ ತಾಳಗುಪ್ಪ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಕಾರ್ಯಾಚರಣೆ ಕಲ್ಪಿಸಲಾಗಿದೆ.
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರ- ತಾಳಗುಪ್ಪ ಮಧ್ಯ ಈ ವಿಶೇಷ ಎಕ್ಸ್‌ಪ್ರೆಸ್ ರೈಲು (06587/06588) ಓಡಿಸಲಾಗುತ್ತದೆ. ಯಶವಂತಪುರ-ತಾಳಗುಪ್ಪ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06587) ಇದೇ ಜುಲೈ 25 ರಂದು ರಾತ್ರಿ 10:30 ಗಂಟೆಗೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗ್ಗೆ 04:15 ಗಂಟೆಗೆ ತಾಳಗುಪ್ಪ ತಲುಪುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶೇಷ ರೈಲಿನ ನಿಲುಗಡೆ
ಈ ರೈಲು ತುಮಕೂರನ್ನು 11:18 ಗಂಟೆಗೆ ತಲುಪಿ ಅಲ್ಲಿಂದ 11:20ಕ್ಕೆ ಹೊರಡುತ್ತದೆ. ಇದೇ ರೀತಿ ಮುಂದೆ ತಿಪಟೂರಿಗೆ (00:13/00:15 AM), ಬೀರೂರು, (00:33/00:38 AM), ತರೀಕೆರೆ (01:13/01:15), ಭದ್ರಾವತಿ (01:43/01:45), ಶಿವಮೊಗ್ಗ ಟೌನ್ (02:00/02:02), ಆನಂದಪುರಂ (03:10/03:12) ಮತ್ತು ಸಾಗರ ಜಂಬಗಾರು (03:35/03:37) ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ಮಾರ್ಗದ ರೈಲ್ವೆ ಪ್ರಯಾಣಿಕರಿಗೆ ಈ ವಿಶೇಷ ರೈಲು ಸಾರಿಗೆ ಅನುಕೂಲ ಒದಗಿಸಲಿದೆ.
ಮರಳಿ ತಾಳಗುಪ್ಪದಿಂದ ತಾಳಗುಪ್ಪ-ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು (06588) ಜುಲೈ 26ರಂದು ಬೆಳಗ್ಗೆ 08:15 ಗಂಟೆಗೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 04:50 ಗಂಟೆಗೆ ಯಶವಂತಪುರ ನಿಲ್ದಾಣಕ್ಕೆ ಬಂದು ಸೇರಲಿದೆ. ಈ ರೈಲು ಮಾರ್ಗ ಮರ್ಧಯೆ ಸಾಗರ ಜಂಬಗಾರು, ಆನಂದಪುರ, ಶಿವಮೊಗ್ಗ ಟೌನ್, ಭದ್ರಾವತಿ, ತರೀಕೆರೆ, ಬೀರೂರು, ತಿಪಟೂರು, ತುಮಕೂರು ಮೂಲಕ ಬೆಂಗಳೂರಿನ ಯಶವಂತಪುರ ನಿಲ್ದಣಾಕ್ಕೆ ಆಗಮಿಸಲಿದೆ.
20 ಬೋಗಿಗಳು
ಈ ರೈಲು ಒಟ್ಟು 20 ಬೋಗಿಗಳನ್ನು ಹೊಂದಿದೆ. ಇದರಲ್ಲಿ 01 ಎಸಿ ಟೈರ್ ಟು, 02 ಎಸಿ ತ್ರಿ ಟೈರ್, 10 ಸ್ಲೀಪರ್ ಕ್ಲಾಸ್, 05 ಜನರಲ್ ಸೆಕೆಂಡ್ ಕ್ಲಾಸ್ ಮತ್ತು ಎರಡು ಕ್ಲಾಸ್ ಲಗೇಜ್ ಬೋಗಿಗಳನ್ನು ಹೊಂದಿರಲಿದೆ. ಪ್ರಯಾಣಿಕರು ಈ ರೈಲು ಸೇವೆ ಸದುಪಯೋಗ ಮಾಡಿಕೊಳ್ಳುವಂತೆ ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications