Sabarimala Special Train: ಶಬರಿಮಲೈ ಭಕ್ತರಿಗೆ ಸಿಹಿ ಸುದ್ದಿ! 3 ತಿಂಗಳು ವಿಶೇಷ ರೈಲು ವ್ಯವಸ್ಥೆ, ವೇಳಾಪಟ್ಟಿ ವಿವರ

ಬೆಂಗಳೂರು, ನವೆಂಬರ್ 11: ಕರ್ನಾಟಕ ರಾಜ್ಯದಿಂದ ಕೇರಳದ ಶಬರಿಮಲೈ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವವರಿಗೆ ನೈಋತ್ಯ ರೈಲ್ವೆ ವಲಯವು (SWR) ಸಿಹಿ ಸುದ್ದಿ ನೀಡಿದೆ. ಮುಂದಿನ ಮೂರು ತಿಂಗಳು ಕಾಲ ಕರ್ನಾಟಕದಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಸಂಚಾರ ದಟ್ಟಣೆ ನಿವಾರಣೆಗೆ, ಭಕ್ತಾಧಿಗಳ ಅನುಕೂಲಕ್ಕಾಗಿ ವಿಶೇಷ ರೈಲು ಓಡಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ನವೆಂಬರ್ 12ರಿಂದ ಮುಂದಿನ ವರ್ಷ ಜನವರಿ 28ರವರೆಗೆ ಈ ಕರ್ನಾಟಕ-ಶಬರಿಮಲೈ ವಿಶೇಷ ರೈಲುಗಳು ಸಂಚಾರ ಸೇವೆ ನೀಡಲಿವೆ. ಈ ರೈಲುಗಳು ಕರ್ನಾಟಕದಿಂದ ಕೇರಳ ರಾಜ್ಯದ ಕೊಚುವೆಲ್ಲಿ ರೈಲು ನಿಲ್ದಾಣಕ್ಕೆ ತೆರಳಲಿದೆ. ಪ್ರತಿ ದಿಕ್ಕಿನಲ್ಲಿ ಒಟ್ಟು 12 ಟ್ರಿಪ್‌ಗಳನ್ನು ಹೊಡೆಯಲಿವೆ. ವಾರಕ್ಕೆ ಒಮ್ಮೆಯಂತೆ ಮುಂದಿನ ಮೂರು ತಿಂಗಳು 12 ವಾರ ಈ ಸಾಪ್ತಾಹಿಕ ರೈಲು ಸಂಚರಿಸಲಿವೆ. ರೈಲು ಸಮಯ, ರೈಲು ಸಂಖ್ಯೆ ಹಾಗೂ ವೇಳಾಪಟ್ಟಿ ಹೀಗಿದೆ.

SWR Announced Karnataka to Sabarimala Special Trains in Next 3 Month Know Schedule

ರೈಲುಗಳ ವಿವರ ಹೀಗಿದೆ

* ಕೊಚುವೇಲಿ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು (ಸಂಖ್ಯೆ 06083 ) ನವೆಂಬರ್ 12 ರಿಂದ ಜನವರಿ 28, 2025 ರವರೆಗೆ ಸೇವೆ ನೀಡಲಿದೆ. ಪ್ರತಿ ವಾರ ಕೊಚುವೇಲಿ ನಿಲ್ದಾಣದಿಂದ ಸಂಜೆ 18:05 ಗಂಟೆಗೆ ಹೊರಟು, ಮರುದಿನ ದಿನ ಬೆಳಗ್ಗೆ 10:55 ಗಂಟೆಗೆ SMVT ಬೆಂಗಳೂರು ನಿಲ್ದಾಣಕ್ಕೆ ಬರಲಿದೆ.

* ಎಸ್‌ಎಂವಿಟಿ ಬೆಂಗಳೂರು-ಕೊಚುವೇಲಿ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು (ಸಂಖ್ಯೆ: 06084) ನವೆಂಬರ್ 13 ರಿಂದ ಜನವರಿ 29, 2025 ರವರೆಗೆ ಸೇವೆ ನೀಡಲಿದೆ. ಪ್ರತಿ ವಾರ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಿಂದ 12:45 ಗಂಟೆಗೆ ಹೊರಟು, ಮರುದಿನ ದಿನ 06:45 ಗಂಟೆಗೆ ಕೊಚುವೇಲಿ ನಿಲ್ದಾಣ ತಲುಪಲಿದೆ.

ಈ ರೈಲು ಎರಡು ದಿಕ್ಕಿನ ಮಾರ್ಗದಲ್ಲಿ, ಕೊಲ್ಲಂ, ಕಾಯಂಕುಳಂ, ಪಾಲಕಾಡ್, ಪೊದನೂರ್, ಈರೋಡ್, ಸೇಲಂ, ಜೋಲಾರ್ ಪೆಟ್ನಾಯ್, ಜಂಕ್ಷನ್ ಗಳ ನಡುವೆ ಸಂಚರಿಸಲಿದೆ.

ಪ್ರಯಾಣಿಕರು ಮತ್ತು ಭಕ್ತರ ನೈಋತ್ಯ ರೈಲ್ವೆ ಅಧಿಕೃತ ವೆಬ್‌ಸೈಟ್ (www.enquiry.indianrail.gov.in) ಗೆ ಭೇಟಿ ನೀಡಿ, ಎನ್‌ಟಿಇಎಸ್ ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ಈ ಪ್ರಯಾಣಿಕರ ರೈಲುಗಳನ್ನು ಪರಿಶೀಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+