ಉಡುಪಿ: ಮಂತ್ರಾಲಯ ಸ್ವಾಮೀಜಿಗಳ ಪುರ ಪ್ರವೇಶ
ಉಡುಪಿ,
ಮೇ 8:: ಮಂತ್ರಾಲಯದ ರಾಘವೇಂದ್ರ ಗುರು ಸಾರ್ವಭೌಮರ ಪೀಠಾಧೀಶ 108ನೇ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿಯ ಉಡುಪಿ ಪುರ ಪ್ರವೇಶ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಪ್ರಥಮ ಬಾರಿಗೆ ಉಡುಪಿಗೆ ಪುರಪ್ರವೇಶ ಮಾಡುತ್ತಿರುವ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಉಡುಪಿಯ ಜೋಡುಕಟ್ಟೆಗೆ ಆಗಮಿಸುತ್ತಿದ್ದಂತೆಯೇ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಪಣೆಗೈಯಲಾಯಿತು. id="toptextpromo"> id='are-slot-1' class='oiad oi-axt oiadv'>ಜೋಡುಕಟ್ಟೆಯಿಂದ
ಸ್ವಾಮೀಜಿಯನ್ನು ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಶ್ರೀಕೃಷ್ಣಮಠಕ್ಕೆ ಕರೆ ತರಲಾಯಿತು. ನಾಸಿಕ್ ಬ್ಯಾಂಡ್, ಡೊಳ್ಳು ಕುಣಿತ, ತಟ್ಟಿರಾಯ, ಕುದುರೆ, ಒಂಟೆ, ಟ್ಯಾಬ್ಲೊಗಳು ಮೆರವಣಿಗೆಯಲ್ಲಿ ಇದ್ದವು. ಶಾಸಕ ಪ್ರಮೋದ್ ಮಧ್ವರಾಜ್, ನಗರಸಭಾ ಅಧ್ಯಕ್ಷ ಯುವರಾಜ್, ಜಿಲ್ಲಾಧಿಕಾರಿ ಡಾ.ಮುದ್ದು ಮೋಹನ್, ಅಮರನಾಥ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಹರಿಕೃಷ್ಣ ಪುನರೂರು ಮೊದಲಾದವರು ಉಪಸ್ಥಿತರಿದ್ದರು. [ಚಿತ್ರಗಳು: ಐಸಾಕ್ ರಿಚರ್ಡ್, ಮಂಗಳೂರು] id='are-slot-2' class='oiad oi-axt oiadv'>
ಸಾಂಪ್ರದಾಯಿಕ ಮೆರವಣಿಗೆ
ಜೋಡುಕಟ್ಟೆಯಿಂದ ಸ್ವಾಮೀಜಿಯನ್ನು ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಶ್ರೀಕೃಷ್ಣಮಠಕ್ಕೆ ಕರೆ ತರಲಾಯಿತು.

ಸ್ವಾಮೀಜಿಯ ಉಡುಪಿ ಪುರ ಪ್ರವೇಶ
ನಾಸಿಕ್ ಬ್ಯಾಂಡ್, ಡೊಳ್ಳು ಕುಣಿತ, ತಟ್ಟಿರಾಯ, ಕುದುರೆ, ಒಂಟೆ, ಟ್ಯಾಬ್ಲೊಗಳು ಮೆರವಣಿಗೆಯಲ್ಲಿ ಇದ್ದವು.

ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಪಣೆ
ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಉಡುಪಿಯ ಜೋಡುಕಟ್ಟೆಗೆ ಆಗಮಿಸುತ್ತಿದ್ದಂತೆಯೇ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಪಣೆಗೈಯಲಾಯಿತು.

ಮೆರವಣಿಗೆಯಲ್ಲಿ ಪಾಲ್ಗೊಂಡ ಗಣ್ಯರು
ಶಾಸಕ ಪ್ರಮೋದ್ ಮಧ್ವರಾಜ್, ನಗರಸಭಾ ಅಧ್ಯಕ್ಷ ಯುವರಾಜ್, ಜಿಲ್ಲಾಧಿಕಾರಿ ಡಾ.ಮುದ್ದು ಮೋಹನ್, ಅಮರನಾಥ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಹರಿಕೃಷ್ಣ ಪುನರೂರು ಮೊದಲಾದವರು ಉಪಸ್ಥಿತರಿದ್ದರು.

ಸುಬುಧೇಂದ್ರ ತೀರ್ಥರ ಅನುಗ್ರಹ ಸಂದೇಶ
ಈ ಸಂದರ್ಭದಲ್ಲಿ ಅನುಗ್ರಹ ಸಂದೇಶ ನೀಡಿದ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ, ಭಗವಂತನ ಎರಡು ರೂಪಗಳಾದ ರಾಮ ಹಾಗೂ ಕೃಷ್ಣನ ಸಮ್ಮಿಲನ ಉಡುಪಿಯಲ್ಲಿ ಆಗಿದೆ. ಉಡುಪಿಯ ಅಷ್ಟಮಠಗಳಿಗೂ ಮಂತ್ರಾಲಯ ಮಠಕ್ಕೂ ಅಳಿಯಲಾರದಂತಹ ಸಂಬಂಧವಿದೆ. ಮುಂದೆಯೂ ಆ ಸಂಬಂಧ ಹೆಚ್ಚಾಗಲಿ ಎಂದು ಹಾರೈಸಿದರು.

ರಾಜಾಂಗಣದಲ್ಲಿ ಸ್ವಾಮೀಜಿಗೆ ಪೌರಸನ್ಮಾನ
ಪೊಡವಿಗೊಡೆಯ ಶ್ರೀಕೃಷ್ಣನ ದರ್ಶನ ಪಡೆದ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿಯವರಿಗೆ ರಾಜಾಂಗಣದಲ್ಲಿ ಪೌರಸನ್ಮಾನ ನೆರವೇರಿಸಲಾಯಿತು.

ಸ್ವಾಮೀಜಿಯನ್ನು ಸ್ಮರಣಿಕೆ ನೀಡಿ ಸನ್ಮಾನಿಸಿದರು
ಅಧ್ಯಕ್ಷತೆ ವಹಿಸಿದ್ದ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮಂತ್ರಾಲಯ ಸ್ವಾಮೀಜಿಯನ್ನು ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಕಾಣಿಯೂರು ಸ್ವಾಮೀಜಿಗೆ ಮುತ್ತಿನ ಅಭಿಷೇಕ
ಮಂತ್ರಾಲಯ ಸ್ವಾಮೀಜಿ ಪರ್ಯಾಯ ಕಾಣಿಯೂರು ಸ್ವಾಮೀಜಿಗೆ ಮುತ್ತಿನ ಅಭಿಷೇಕ ಮಾಡಿ, ಬಂಗಾರದ ಸರವನ್ನು ಸಮರ್ಪಿಸಿ ಸನ್ಮಾನಿಸಿದರು.

ಅದ್ದೂರಿ ಸಮಾರಂಭದಲ್ಲಿ ಉಪಸ್ಥಿತರಿದ್ದವರು
ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ನಗರಸಭಾ ಅಧ್ಯಕ್ಷ ಯುವರಾಜ್, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಗಿರಿ ಆಚಾರ್ಯ, ರಾಜಗೋಪಾಲಾಚಾರ್ಯ, ಹರಿದಾಸ ಉಪಾಧ್ಯಾಯ, ಮಠದ ದಿವಾನ ರಘುಪತಿ ಆಚಾರ್ಯ ಉಪಸ್ಥಿತರಿದ್ದರು.

ಪುರ ಪ್ರವೇಶ ಕಾರ್ಯಕ್ರಮ ಅದ್ದೂರಿ
ಮಂತ್ರಾಲಯದ ರಾಘವೇಂದ್ರ ಗುರು ಸಾರ್ವಭೌಮರ ಪೀಠಾಧೀಶ 108ನೇ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿಯ ಉಡುಪಿ ಪುರ ಪ್ರವೇಶ ಕಾರ್ಯಕ್ರಮ ಅದ್ದೂರಿ ಚಿತ್ರ












Click it and Unblock the Notifications