ಲೋಕಾಯುಕ್ತ ಬಲೆಗೆ ಲಂಚಕೋರ ಇನ್ಸ್ ಪೆಕ್ಟರ್
ಬೆಂಗಳೂರು, ಡಿ.17: ರಿಕ್ರಿಯೇಷನ್ ಕ್ಲಬ್ ತೆರವುಗೊಳಿಸದೆ ಮುಂದುವರೆಸಲು ಅನುಮತಿ ಕೋರಿದ್ದ ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಇನ್ಸ್ ಪೆಕ್ಟರ್ ಸೇರಿದಂತೆ ಒಬ್ಬ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಹಲಸೂರು ಗೇಟ್ ಪೊಲೀಸ್ ಸ್ಟೇಷನ್ ನ ಇನ್ಸ್ ಪೆಕ್ಟರ್ ದೀಪಕ್ ಮತ್ತು ಪೊಲೀಸ್ ಕಾನ್ಸ್ ಟೇಬಲ್ ಮಂಜುನಾಥ್ ಎಂಬವರು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಉದ್ಯಮಿ ಮಂಜುನಾಥ್ ಎಂಬವರಿಂದ 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ನಗರದ ಅವೆನ್ಯೂ ರಸ್ತೆಯಲ್ಲಿ ರಿಕ್ರಿಯೇಷನ್ ಕ್ಲಬ್ ನಡೆಸಿರುವ ಮಂಜುನಾಥ್ ಅವರು ಇದನ್ನು ಮುಂದುವರಿಸಲು ಇನ್ಸ್ ಪೆಕ್ಟರ್ ದೀಪಕ್ 25 ಸಾವಿರ ರೂ. ಲಂಚ ಕೇಳಿದ್ದರು. ಆದರೆ, ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದು ಮಂಜುನಾಥ್ ಹೇಳಿದಾಗ 10 ಸಾವಿರ ರೂ. ನೀಡುವ ಬಗ್ಗೆ ಮಾತುಕತೆಯಾಗಿತ್ತು.
ಈ ದೂರಿನ ಮೇರೆಗೆ ಸೋಮವಾರ ಸಂಜೆ 4.30ರ ಸುಮಾರಿಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಗಳನ್ನು ಭ್ರಷ್ಟಾಚಾರ ನಿಗ್ರಹ ಪ್ರತಿಬಂಧಕ ಕಾಯ್ದೆಯಡಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗಳನ್ನು ಮಂಗಳವಾರದವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ, ಹಿರಿಯೂರು, ಕೊಳ್ಳೇಗಾಲ, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ದಕ್ಷಿಣ ಕನ್ನಡ ಜಿಲ್ಲೆ
ಕೊಣಾಜೆ ಠಾಣಾ ವ್ಯಾಪ್ತಿಯ ಕೈರಂಗಳದ ಡಿಜಿಕಟ್ಟೆ ಬಳಿಯ ತಿರುವು ಪ್ರದೇಶದಲ್ಲಿ ಮಂಜನಾಡಿ ಕಡೆಯಿಂದ ಮುಡಿಪು ಕಡೆಗೆ ಸಂಚರಿಸುತ್ತಿದ್ದ ಬಸ್‌ನ ಮುಂಬಾಗಿಲಿನಲ್ಲಿ ನಿಂತುಕೊಂಡಿದ್ದ ಯುವಕನೋರ್ವ ಆಯತಪ್ಪಿ ಬಿದ್ದು ಹಿಂಬದಿಯ ಚಕ್ರದಡಿಗೆ ಸಿಲುಕಿ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ. ಮಂಜೇಶ್ವರ ವರ್ಕಾಡಿ ಗ್ರಾಮದ ಬಾಕಿಮಾರ್ ನಿವಾಸಿ ಇಬ್ರಾಹೀಂ ಎಂಬವರ ಪುತ್ರ ಮುಹಮ್ಮದ್ ಜಾಫರ್ ಯಾನೆ ಹನೀಫ್(19)ಮೃತ ಯುವಕನಾಗಿದ್ದಾನೆ.

ಚಿಕ್ಕಮಗಳೂರು
ಇನಾಂ ದತ್ತಾತ್ರೇಯ ಪೀಠದಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿವಾರದವರು ದತ್ತಜಯಂತಿ ಕಾರ್ಯಕ್ರಮದ ಸಮಾರಂಭ ಏರ್ಪಡಿಸಲಾಗಿತ್ತು.
ಈ ವೇಳೆ ಚಿಕ್ಕಮಗಳೂರು ವಾಸಿ ಸಂತೋಷ್ ಕೋಟ್ಯಾನ್, ಆಲ್ದೂರು ವಾಸಿಗಳಾದ ತುಡುಕೂರು ಮಂಜ, ರಾಕೇಶ್ ಮತ್ತು ಇತರೇ 30 ರಿಂದ 40 ಜನ ಭಜರಂಗದಳದದ ಕಾರ್ಯಕರ್ತರುಗಳ ಗುಂಪು ಪೂರ್ವಯೋಜಿತವಾಗಿ ಷ್ಯಡಂತ್ರ ಹೂಡಿ, ಅಡ್ಡಪಲ್ಲಕ್ಕಿಯನ್ನು ದತ್ತಪೀಠಕ್ಕೆ ತಂದು ದತ್ತಪೀಠದ ಉತ್ತರ ದಿಕ್ಕಿನಲ್ಲಿರುವ ಗೇಟೆಗೆ ಇರುವ ತಂತಿಯ ಬೇಲಿಯನ್ನು ಬೇದಿಸಲು ಯತ್ನಿಸಿದರು.
ಗುಹೆ ಒಳಗೆ ನುಗ್ಗಿ ಮುಸ್ಲಿಂ ಸಮುದಾಯದ ಘೋರಿಗಳ ಮೇಲೆ ದ್ವಜವನ್ನು ಹಾರಿಸಲು ಪ್ರಯತ್ನಿಸಿದ್ದಲ್ಲದೆ ಮತೀಯ ಬಾವನೆಗಳಿಗೆ ಧಕ್ಕೆ ಬರುವಂತೆ ಘೋಷಣೆ ಕೂಗಿದ್ದು ಸುಪ್ರಿಂಕೋರ್ಟ ಆದೇಶವನ್ನು ಉಲ್ಲಂಘನೆಯಾಗಿದೆ

ಶಿವಮೊಗ್ಗ
ಅಡಿಕೆ ಕಳವು ಪ್ರಕರಣ: ಹೋಳೆ ಹೊನ್ನೂರು ಠಾಣೆ.
ಪಿರ್ಯಾದಿ ಜಯಪ್ಪ ಬಿನ್ ಮಲ್ಲಪ್ಪ ವಾಸ ಮಲ್ಲಾಪುರ ಗ್ರಾಮ ಇವರು ಮನೆಯ ಮುಂದಿನ ಅಂಗಳದಲ್ಲಿ ಒಣಗಲು ಹಾಕಿದ್ದ 13 ಚೀಲ ಅಡಿಕೆಯನ್ನು ಕಳ್ಳರು ವಾಹನ ಸಂಖ್ಯೆ ಕೆ ಎ 17 ಬಿ 7148 ರ ವಾಹನದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಬೆಲೆ 1,80,000/-

ಮಾರಣಾಂತಿಕ ಅಪಘಾತ ಪ್ರಕರಣ
ಹಿರಿಯೂರು: ನಂ: ಕೆಎ-16/ಬಿ-4390 ನೇ ಲಗೇಜ್ ಆಟೋ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಸ್ತೆಯಲ್ಲಿ ಪಲ್ಟಿ ಹೊಡೆಸಿದ ಪರಿಣಾಮ ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಚಾಲಕ ಸೇರಿ ಆರು ಜನರಿಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿರುವ ಘಟನೆ ತಾಲ್ಲೂಕಿನ ಹೂವಿನಹೊಳೆ ಈಶ್ವರಗೆರೆ ಮಧ್ಯದ ರಸ್ತೆಯಲ್ಲಿ ನಡೆದಿದೆ.
ಕೋಡಿಹಳ್ಳಿ ಗ್ರಾಮದ ಪೂಜಾರಿ ಕೃಷ್ಣಪ್ಪ (45) ಮೃತಪಟ್ಟ ವ್ಯಕ್ತಿಯಾಗಿದ್ದು, ಅದೇ ಗ್ರಾಮದ ವೆಂಕಟೇಶ (40) ಹಾಗೂ ಚಾಲಕ ಯೋಗರಾಜ ಮತ್ತು ಇತರೆ ನಾಲ್ಕು ಜನರಿಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿರುತ್ತವೆ. ಈ ಬಗ್ಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ಚಾಮರಾಜನಗರ ಜಿಲ್ಲೆ
ಕೊಳ್ಳೇಗಾಲ ತಾಲ್ಲೂಕಿನ ರಾಚಪ್ಪಾಜಿ ನಗರದ ಜ್ಯೋತಿ ಹಾಗೂ ಅದೇ ಗ್ರಾಮದ ಚಿನ್ನಂಕಯ್ಯ ಅಲಿಯಾಸ್ ಮುತ್ತುರಾಜು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅನ್ಯ ಜಾತಿ ಎಂಬ ಕಾರಣಕ್ಕೆ ಚಿನ್ನಂಕಯ್ಯನ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿತ್ತು.
ಆರಂಭದಲ್ಲಿ ದಂಪತಿಗಳಿಬ್ಬರು ಅನ್ಯೋನ್ಯವಾಗಿದ್ದರೂ ಜ್ಯೋತಿ ಗರ್ಭಿಣಿಯಾದ ಮೇಲೆ ಶೀಲದ ಬಗ್ಗೆ ಶಂಕೆ ವ್ಯಕ್ತ ಪಡಿಸಿದ ಮುತ್ತುರಾಜ್ ಸಂಚು ಹೂಡಿ ಆಕೆಯನ್ನು ಕೊಂದಿದ್ದನು. ಪ್ರೀತಿಸಿ ಮದುವೆಯಾಗಿದ್ದವಳ ಕೊಂದ ಪತಿ ಹಾಗೂ ಈತನಿಗೆ ಸಹಕರಿಸಿದ ಸ್ನೇಹಿತರನ್ನು ಬಂಧಿಸುವಲ್ಲಿ ಕೊಳ್ಳೇಗಾಲ ಪೊಲೀಸರು ಯಶಸ್ವಿಯಾಗಿದ್ದಾರೆ.












Click it and Unblock the Notifications