ಬೆಂಗಳೂರಿನಲ್ಲಿ ಹಣದಾಸೆಗೆ ವೃದ್ಧೆ ಬರ್ಬರ ಹತ್ಯೆ

ಬೆಂಗಳೂರು, ಜ.29: ಸುಮಾರು 63 ವರ್ಷದ ವೃದ್ಧೆಯನ್ನು ಚಿನ್ನಾಭರಣದ ಆಸೆಗಾಗಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಿ ನಾರಾಯಣಪುರ ಸಮೀಪ ನಡೆದಿದೆ.

ಪಿರ್ಯಾದುದಾರ ಶ್ರೀನಿವಾಸಲು ಬಿನ್ ಕೊಂಡಯ್ಯ, ನಂ.18, 1ನೇಮಹಡಿ, ಮಂಜುನಾಥನಿಲಯ, ಗುರುಮೂರ್ತಿರೆಡ್ಡಿ ಲೇ ಔಟ್, ಪಿ.ಡಬ್ಲ್ಯೂ.ಡಿ.ರಸ್ತೆ ಇಲ್ಲಿನ ನಿವಾಸಿ ನೀಡಿರುವ ದೂರಿನಂತೆ: ತಾಯಿ ಶ್ರೀಮತಿ ಕೊಂಡಮ್ಮ 63 ವರ್ಷ ಇವರು ನೆಲಮಹಡಿಯಲ್ಲಿ ಒಬ್ಬರೆ ವಾಸವಿದ್ದು...

ದಿನಾಂಕ 28-01-2014 ರಂದು ಸಂಜೆ ಸುಮಾರು 7-15 ಗಂಟೆಯ ಸಮಯದಲ್ಲಿ ಪಿರ್ಯಾದುದಾರರ ಮಗಳಾದ ಶ್ರಿಮತಿ ಕವಿತ ರವರು ಶ್ರೀಮತಿ ಕೊಂಡಮ್ಮ 63 ವರ್ಷ ರವರಿಗೆ ಪೋನ್ ಮಾಡಿದಾಗ ರಿಸೀವ್ ಮಾಡದಿದ್ದಾಗ ಪಿರ್ಯಾದುದಾರರಿಗೆ ಹೋಗಿ ನೋಡುವಂತೆ ತಿಳಿಸಿದಾಗ ಪಿರ್ಯಾದುದಾರರು ಹೋಗಿ ನೋಡಲಾಗಿ ಮನೆಯೊಳಗಿನಿಂದ ಲಾಕ್ ‍ಆಗಿದ್ದು ನಂತರ ಬೇರೊಂದು ಕೀಯಿಂದ ತೆಗೆದು ಒಳಹೋಗಿ ನೋಡಲಾಗಿ ಮಂಚದಿಂದ ಕೆಳಗೆ ಬೊರಲಾಗಿ ಬಿದ್ದಿದ್ದು ಸರಿಯಾಗಿ ಮಲಗಿಸಿ ನೋಡಲಾಗಿ ಕುತ್ತಿಗೆಗೆ ಸೀರೆಯಿಂದ ಬಿಗಿದು ಕೊಲೆಮಾಡಲಾಗಿದೆ. ಆಕೆಯ ಮೈಮೇಲೆ ಇದ್ದ ಎರಡು ಚಿನ್ನದ ಚೈನುಗಳು, ನಾಲ್ಕು ಬಳೆಗಳು ಮತ್ತು ಒಂದು ಜೊತೆ ಕಿವಿ ಓಲೆ ಯನ್ನು ತೆಗೆದುಕೊಂಡು ಹೋಗಿರುತ್ತಾರೆ. ಕೊಲೆ ಮಾಡಿರುವ ಆಸಾಮಿಗಳನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತಿಯ ಕ್ರಮಜರುಗಿಸಬೇಕೆಂದು ಕೊಟ್ಟ ದೂರು.

ಅಸ್ವಾಭಾವಿಕ ಮರಣ ಪ್ರಕರಣ

ಅಸ್ವಾಭಾವಿಕ ಮರಣ ಪ್ರಕರಣ

ಉಡುಪಿ: ಸಾಯಿನಾಥ ಶೇಟ್‌, ತಂದೆ: ಸಂಜೀವ ಶೇಟ್‌, ವಾಸ:ಗೋಪಾಲ ಶೆಣೈ ಕಂಪೌಂಡ್‌, ಒಳಕಾಡು, ಉಡುಪಿ ತಂದೆಯವರಾದ ಸಂಜೀವ ಶೇಟ್‌‌ (83) ರವರು ಕಳೆದ ಸುಮಾರು 6 ವರ್ಷಗಳಿಂದ ಉಬ್ಬಸ ಖಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ದಿನಾಂಕ 28/01/2014 ರಂದು ಬೆಳಿಗ್ಗೆ 08:55 ಗಂಟೆಗೆ ಕಾಯಿಲೆ ಉಲ್ಬಣಗೊಂಡಿದ್ದವರನ್ನು ತಕ್ಷಣ ಚಿಕಿತ್ಸೆ ಬಗ್ಗೆ ಉಡುಪಿ ಟಿಎಮ್‌ಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರಿಕ್ಷೀಸಿ ಮೃತಪಟ್ಟಿರುತ್ತಾರೆ ಎಂದು ವೈದ್ಯರು ತಿಳಿಸಿರುತ್ತಾರೆ. ಎಂಬುದಾಗಿ ಸಾಯಿನಾಥ ಶೇಟ್‌ ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಸ್ವಾಭಾವಿಕ ,ಮರಣ ಸಂಖ್ಯೆ 11/13 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಾಸನ: ಬಸ್ ಡಿಕ್ಕಿ ಮಹಿಳೆ ಸಾವು

ಹಾಸನ: ಬಸ್ ಡಿಕ್ಕಿ ಮಹಿಳೆ ಸಾವು

ಸಾರಿಗೆ ಬಸ್ ಗೆಬೈಕ್ ವೊಂದಕ್ಕೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಸಿಲುಕಿದ ಮಹಿಳೆಯೋರ್ವಳು ಸ್ಥಳದಲ್ಲೇ ಮೃತ ಪಟ್ಟು, ಮತ್ತೊಬ್ಬರು ಗಾಯಗೊಂಡಿರುವ ಘಟನೆ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ನಗರದ ಕೆ.ಆರ್.ಪುರಂ ನಿವಾಸಿ ಪ್ರೇಮಲತಾ(50) ಸಾವನ್ನಪ್ಪಿರುವ ಮಹಿಳೆ. ಜಾನ್ ವಿಲ್ಸನ್ (48)ಗಾಯಗೊಂಡಿದ್ದು, ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಚಾಲಕನ ಅಜಾಗರೂ ಕತೆಯಿಂದ ಈ ಘಟನೆ ಜರಗಿದೆ ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಹೆದ್ದಾರಿ ಅಪಘಾತ ವಿದ್ಯಾರ್ಥಿ ಸಾವು

ಮಂಗಳೂರು: ಹೆದ್ದಾರಿ ಅಪಘಾತ ವಿದ್ಯಾರ್ಥಿ ಸಾವು

ಮಂಗಳೂರು, ಜ.28: ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ-ಪಿಲಾರ್ ನಿವಾಸಿ ಇಮ್ತಿಯಾಝ್ ಎಂಬವರ ಪುತ್ರ ಮುಹಮ್ಮದ್ ಇಕ್ಬಾಲ್ (18) ಮೃತಪಟ್ಟಿದ್ದಾನೆ

ನಗರದ ಕದ್ರಿಯಲ್ಲಿರುವ ವೆಸ್ಟರ್ನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿದ್ದ ಇಕ್ಬಾಲ್ ಮನೆಯಿಂದ ಬೈಕ್‌ನಲ್ಲಿ (ಕೆ.ಎ.19 ಇಡಿ 9512) ಹೊರಟಿದ್ದ. 7:15ರ ವೇಳೆಗೆ ಪಂಪ್ ವೆಲ್ ನಿಂದ ತೊಕ್ಕೊಟ್ಟು ಕಡೆಗೆ ಚಲಿಸುತ್ತಿದ್ದ ಲಾರಿ (ಕೆ.ಎ.19 6094)ಯು ಬೈಕ್ ‌ಗೆ ಢಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡ ಇಕ್ಬಾಲ್ ‌ನನ್ನು ತಕ್ಷಣ ಜ್ಯೋತಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಕ್ಬಾಲ್ ಮೃತಪಟ್ಟಿದ್ದಾರೆ.

ಶ್ರೀನಿವಾಸಪುರ : ದೇವಾಲಯದ ಕಳ್ಳತನ

ಶ್ರೀನಿವಾಸಪುರ : ದೇವಾಲಯದ ಕಳ್ಳತನ

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಭಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು, ನಂಬಿಹಳ್ಳೀ ಗ್ರಾಮದಲ್ಲಿನ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಬೀಗವನ್ನು ಮುರಿದು ಒಳ ಪ್ರವೇಶಿಸಿ, ದೇವಾಲಯದ ಹುಂಡಿ ಹಣ ಸುಮಾರು 2,500 ರೂ.ಗಳು ಮತ್ತು ಬೆಳ್ಳಿ ಸಾಮಾನುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಬಸವನಹಳ್ಳಿ : ಸುಲಿಗೆ ಪ್ರಕರಣ

ಬಸವನಹಳ್ಳಿ : ಸುಲಿಗೆ ಪ್ರಕರಣ

ಬಸವನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.20/2014 - ಕಲಂ:394 ಐಪಿಸಿ - ಸಂಧ್ಯಾ ಸರ್ವಿಸ್‌ ಸ್ಟೇಷನ್‌ನ ಪೆಟ್ರೋಲ್ ಬಂಕಿನ ಕೆಲಸಗಾರರಾದ ಪಿರ್ಯಾದಿ ಗುರುರಾಜ್‌ ಅರಸ್‌ ಮತ್ತು ರುದ್ರೇಶರವರು ಪೆಟ್ರೋಲ್ ಬಂಕಿನ ಒಳಗೆ ಊಟ ಮಾಡುತ್ತಿದ್ದಾಗ ಕೆಎ.46 ಇ.4165 ಡಿಸ್ಕವರ್ ಮೋಟಾರ್ ಸೈಕಲ್ಲಿನಲ್ಲಿ ಮೂರು ಜನ ಅಪರಿಚಿತರು ಬಂದು ಪೆಟ್ರೋಲ್ ಹಾಕುವಂತೆ ಹೇಳಿ ಬಂಕಿನ ಗ್ಲಾಸ್ ತಳ್ಳಿದಾಗ ಬಾಗಿಲು ತೆಗೆದಿರುತ್ತಾರೆ. ಕೈಗಳಿಂದ ಹಲ್ಲೆ ನಡೆಸಿ ಟೇಬಲ್ ಮೇಲಿದ್ದ 18000ರೂ ನಗದು ಹಣವನ್ನು ತೆಗೆದುಕೊಂಡಿರುತ್ತಾರೆ. ಮೂರು ಜನ ಅಪರಿಚಿತರು ಹಣವನ್ನು ಕಿತ್ತುಕೊಂಡು ಬಂಕಿನ ಒಳಗೆ ಇಟ್ಟಿದ್ದ ಡೀಸಲ್ ತುಂಬಿಸಿದ್ದ 35 ಲೀಟರ್ ಕ್ಯಾನನ್ನು ತೆಗೆದುಕೊಂಡು ಹೋಗಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+