Wedding: ಎಸ್.ಆರ್ ವಿಶ್ವನಾಥ್ ಪುತ್ರಿ ಬೈರತಿ ಸುರೇಶ್ ಮಗನ ಮದುವೆ ದಿನಾಂಕ ಫಿಕ್ಸ್‌

ಬೆಂಗಳೂರು ಜುಲೈ 25: ಬಿಜೆಪಿ ನಾಯಕ ಶಾಸಕ ಎಸ್.ಆರ್ ವಿಶ್ವನಾಥ್ ಪುತ್ರಿ ಹಾಗೂ ಕಾಂಗ್ರೆಸ್ ನಾಯಕ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಗನ ಮದುವೆ ದಿನಾಂಕ ಫಿಕ್ಸ್‌ ಆಗಿದೆ. ಈ ಬಗ್ಗೆ ಸ್ವತ: ಎಸ್.ಆರ್ ವಿಶ್ವನಾಥ್ ಅವರೇ ಹೇಳಿಕೊಂಡಿದ್ದು, ತಮ್ಮ ಮಗಳ ಮದುವೆ ದಿನಾಂಕವನ್ನು ವೇದಿಕೆ ಮೇಲೆ ನೂರಾರು ಜನರ ಮುಂದೆ ಪ್ರಸ್ತಾಪಿಸಿದ್ದಾರೆ.

ಹೌದು... ಮಕ್ಕಳಿಗೆ ಮದುವೆ ಮಾಡುವ ಮೂಲಕ ಕೈ ಹಾಗೂ ಕಮಲ ಒಂದಾಗುತ್ತಿದೆ. ಕಾಂಗ್ರೆಸ್ ನಾಯಕ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಬಿಜೆಪಿ ನಾಯಕ ಶಾಸಕ ಎಸ್‌ಆರ್ ವಿಶ್ವನಾಥ್ ಬೀಗರಾಗುತ್ತಿರುವ ವಿಚಾರ ನಿಜವಾಗಿದೆ. ಈ ಬಗ್ಗೆ ಸ್ವತ: ಎಸ್.ಆರ್ ವಿಶ್ವನಾಥ್ ಅವರೇ ಹೇಳಿಕೊಂಡಿದ್ದು ಮದುವೆ ದಿನಾಂಕ ಕೂಡ ಅವರು ಘೋಷಣೆ ಮಾಡಿದ್ದಾರೆ.

SR Vishwanath s daughter Byrathi Suresh s son s wedding date is fixed

ಹೌದು... ಎಸ್.ಆರ್ ವಿಶ್ವನಾಥ್ ಪುತ್ರಿ ಹಾಗೂ ಬೈರತಿ ಸುರೇಶ್ ಮಗನ ಮದುವೆಯಾಗುತ್ತಿದ್ದು ದಿನಾಂಕ ಡೂಡ ಫಿಕ್ಸ್‌ ಆಗಿದೆ. ಎಸ್‌ಆರ್‌ ವಿಶ್ವನಾಥ್ ಮಗಳನ್ನು ಬೈರತಿ ಸುರೇಶ್ ಪುತ್ರ ಮದುವೆಯಾಗುತ್ತಿದ್ದು ದಿನಾಂಕ ನಿಗಧಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸುರೇಶ್ ಪುತ್ರ ಸಂಜಯ್ ಹಾಗೂ ವಿಶ್ವನಾಥ್ ಪುತ್ರಿ ಅಪೂರ್ವ ಇಬ್ಬರು ಕಾಲೇಜು ಸ್ನೇಹಿತರಾಗಿದ್ದರು.

ಸಂಜಯ್ ಹಾಗೂ ಅಪೂರ್ವ ಇಬ್ಬರು ಮಲ್ಲೇಶ್ವರಂನ ವಿದ್ಯಾಮಂದಿರದಲ್ಲಿ ಶಿಕ್ಷಣವನ್ನು ಪಡೆದುಕೊಂಡಿದ್ದರು. ಇಬ್ಬರ ನಡುವೆ ಕಾಲೇಜು ದಿನಗಳ ಸಮಯದಲ್ಲೇ ಉತ್ತಮ ಸ್ನೇಹವಿತ್ತು. ಆ ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇದರಂತೆ ಇದೀಗ ಮದುವೆ ಹಂತಕ್ಕೆ ಇಬ್ಬರ ಪ್ರೇಮ ಬಂದಿದ್ದು, ಎರಡೂ ಕುಟುಂಬದ ಸಮ್ಮತಿ ಮೇರೆಗೆ ಮದುವೆ ನಿಶ್ಚಯ ಮಾಡಲಾಗಿದೆ.

ಬೈರತಿ ಸುರೇಶ್ ಅವರ ಮಗ ನನ್ನ ಅಳಿಯನಾಗುತ್ತಿದ್ದಾನೆ. ಫೆಬ್ರವರಿ 7ನೇ ತಾರೀಖು ಅರಮನೆ ಮೈದಾನ ಗೇಟ್ ನಂಬರ್ 1ಮತ್ತು 2ರಲ್ಲಿ ಮದುವೆ ಸಮಾರಂಭ ನಡೆಯಲಿದೆ. ಜುಲೈ 9ನೇ ತಾರೀಖು ಮದುವೆ ಊಟ ಇರುತ್ತದೆ. ಯಾರೂ ಕೂಡ ಮುಸ್ ಮಾಡ್ಬೇಡಿ. ತಮ್ಮ ಆಶೀರ್ವಾದ ನಮ್ಮ ಮಕ್ಕಳ ಮೇಲೆ ಇರಬೇಕು ಎಂದು ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ.

ಇದರಿಂದ ಬಿಜೆಪಿ ನಾಯಕ ಶಾಸಕ ಎಸ್.ಆರ್ ವಿಶ್ವನಾಥ್ ಪುತ್ರಿ ಹಾಗೂ ಕಾಂಗ್ರೆಸ್ ನಾಯಕ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಇಬ್ಬರೂ ಬೀಗರಾಗುವುದು ಖಚಿತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+