ನೈರುತ್ಯ ರೈಲ್ವೆಯ ವಿವಿಧ ವಿಶೇಷ ರೈಲುಗಳ ಸಂಚಾರ ಸೌಲಭ್ಯ ವಿಸ್ತರಣೆ: ಸಂಪೂರ್ಣ ಮಾಹಿತಿ ಇಲ್ಲಿದೆ
ಹುಬ್ಬಳ್ಳಿ, ಜೂನ್ 14: ನೈರುತ್ಯ ರೈಲ್ವೆಯು ವಿವಿಧ ವಿಶೇಷ ರೈಲುಗಳ ಸಂಚಾರ ಸೌಲಭ್ಯ ವಿಸ್ತರಣೆ ಮಾಡಲು ನಿರ್ಧರಿಸಿದ್ದು, ಹುಬ್ಬಳ್ಳಿ-ರಾಮೇಶ್ವರಂ (07355) ವಿಶೇಷ ರೈಲು ಸಂಚಾರವನ್ನು ಜುಲೈ 6ರಿಂದ ಡಿಸೆಂಬರ್ 28ರವರೆಗೆ, ರಾಮೇಶ್ವರಂ-ಹುಬ್ಬಳ್ಳಿ (07356) ರೈಲು ಸಂಚಾರವನ್ನು ಜುಲೈ1ರಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.
ಹುಬ್ಬಳ್ಳಿ-ಕೆಸಿಆರ್ ಬೆಂಗಳೂರು (07339) ರೈಲು ಸಂಚಾರವನ್ನು ಜುಲೈ 1ರಿಂದ ಡಿಸೆಂಬರ್ 31ರವರೆಗೆ, ಕೆಸಿಆರ್ ಬೆಂಗಳೂರು-ಹುಬ್ಬಳ್ಳಿ (07340) ರೈಲು ಸಂಚಾರವನ್ನು ಜುಲೈ 2ರಿಂದ 2025ರ ಜನವರಿ 1ರವರೆಗೆ ವಿಸ್ತರಿಸಲಾಗಿದೆ.

ಹುಬ್ಬಳ್ಳಿ-ಡಾ.ಎಂ.ಜಿ.ಆರ್. ಚೆನ್ನೈ ಸೆಂಟ್ರಲ್-ಹುಬ್ಬಳ್ಳಿ (22697/22698) ಸಾಪ್ತಾಹಿಕ ರೈಲು ಯಶವಂತಪುರ ನಿಲ್ದಾಣದ ಬದಲು, ಯಶವಂತಪುರ ಬೈಪಾಸ್ ಮೂಲಕ ಸಂಚರಿಸಲಿದೆ. ಸೆಪ್ಟೆಂಬರ್ 7ರಿಂದ ಹುಬ್ಬಳ್ಳಿ- ಡಾ.ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ (22697) ರೈಲು, ಸೆ.8ರಿಂದ ಡಾ.ಎಂ.ಜಿ.ಆರ್. ಚೆನ್ನೈ ಸೆಂಟ್ರಲ್-ಹುಬ್ಬಳ್ಳಿ (22698) ರೈಲು ಬದಲಿ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕದ 11 ವಿಶೇಷ ರೈಲುಗಳು ರದ್ದು
11 ವಿಶೇಷ ರೈಲುಗಳು ತಾಂತ್ರಿಕ ದೋಷದಿಂದಾಗಿ ರದ್ದಾಗಿರುವುದಾಗಿ ನೈಋತ್ಯ ರೈಲ್ವೆ ತಿಳಿಸಿದೆ. ರೈಲು ಸಂಖ್ಯೆ 08543 ವಿಶಾಪಟ್ಟಣಂ ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ( ಎಸ್‌ಎಂವಿಡಿ) ಬೆಂಗಳೂರು ರೈಲನ್ನು ಜೂನ್ 16ರಂದು ರದ್ದು ಮಾಡಲಾಗಿದೆ.
*ರೈಲು ಸಂಖ್ಯೆ 06218 ಗಯಾ-ಯಶವಂತಪುರ ರೈಲನ್ನು ಜೂನ್ 17ರಂದು ರದ್ದಾಗಲಿದೆ.
*ರೈಲು ಸಂಖ್ಯೆ 06521 ಎಸ್‌ಎಂವಿಟಿ ಬೆಂಗಳೂರು-ಗುವಾಹಟಿ ರೈಲು ಜೂನ್ 18 ರದ್ದುಗೊಳಿಸಲಾಗಿದೆ.
*ರೈಲು ಸಂಖ್ಯೆ 06565 ಎಸ್‌ಎಂವಿಟಿ ಬೆಂಗಳೂರು-ಮಾಲ್ಡ್‌ಟೌನ್ ರೈಲನ್ನು ಜೂನ್ 19ರಂದು ರದ್ದುಗೊಳಿಸಲಾಗಿದೆ.
*ರೈಲು ಸಂಖ್ಯೆ 08845 ಸಂತ್ರಗಾಚ್ ಎಸ್‌ಎಂವಿಟಿ ಬೇಂಗಳೂರು ರೈಲನ್ನು ಜೂನ್ 21ರಂದು ರದ್ದುಗೊಳಿಸಲಾಗಿದೆ.
*ರೈಲು ಸಂಖ್ಯೆ 06566 ಮಾಲ್ಡ್‌ಟೌನ್-ಎಸ್‌ಎಂವಿಟಿ ಬೆಂಗಳೂರು ರೈಲನ್ನು ಜೂನ್ 22ರಮದು ರದ್ದುಗೊಳಿಸಲಾಗಿದೆ.
*ರೈಲು ಸಂಖ್ಯೆ 06522 ಎಸ್‌ಎಂವಿಟಿ ಬೆಂಗಳೂರು ಗುವಾಹಟಿ ರೈಲು ಜೂನ್ 22ರಂದು ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 08846 ಎಸ್‌ಎಂವಿಟಿ ಬೆಂಗಳೂರು-ಸಂತ್ರಗಾಚ್ ರೈಲನ್ನು ಜೂನ್ 23ರಂದು ರದ್ದುಗೊಳಿಸಲಾಗಿದೆ.












Click it and Unblock the Notifications