ರಿಷಬ್ ಶೆಟ್ಟಿ ಈ ಕಮೆಂಟ್‌ಗೆ ಗರಂ ಆದ ದರ್ಶನ್ ಫ್ಯಾನ್ಸ್ !
Darshan Thoogudeepa: ನಟ ದರ್ಶನ್ ಫ್ಯಾನ್ ದರ್ಶನ ಅವರು ಕೊಲೆ ಆರೋಪದ ಮೇಲೆ ಕಾರಾಗೃಹ ಸೇರಿದ್ದರೂ, ಅವರ ಬಗ್ಗೆ ಯಾರಾದರು ಮಾತನಾಡಿದರೆ ಬಿಡ್ತಿಲ್ಲ. ಇದೀಗ ದರ್ಶನ್ ಫ್ಯಾನ್‌ಗಳ ಕೆಂಗಣ್ಣಿಗೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಗುರಿಯಾಗಿದ್ದಾರೆ. ರಿಷಬ್ ಶೆಟ್ಟಿ ಅವರು ಮಾಡಿದ ಕಾಮೆಂಟ್ ಸಹ ವಿವಾದಕ್ಕೆ ಕಾರಣವಾಗುಂತೆ ಏನು ಇರಲಿಲ್ಲ. ಆದರೆ, ರಿಷಬ್ ಶೆಟ್ಟಿಯನ್ನು ಕಳೆದ ಎರಡು ಮೂರು ದಿನಗಳಿಂದ ದರ್ಶನ್ ಫ್ಯಾನ್ಸ್ ಟಾರ್ಗೆಟ್ ಮಾಡಿದ್ದಾರೆ.
ದರ್ಶನ್ ಅಭಿಮಾನಿಗಳ ಅತಿರೇಖದ ವರ್ತನೆಯ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಇದೀಗ ಇದಕ್ಕೆ ರಿಷಬ್ ಶೆಟ್ಟಿ ಗುರಿಯಾಗಿದ್ದಾರೆ. ದರ್ಶನ್ ಅವರು ಒಳ್ಳೆಯ ಸ್ಥಾನದಲ್ಲಿ ಇದ್ದಾಗ ಇವರೆಲ್ಲರೂ ಅವರನ್ನು ಬಾಸ್ ಅಂತಿದ್ರು. ಈಗ ಒಂದು ಸಕ್ಸಸ್ ಬಂದ ಕೂಡಲೇ ದುರಹಂಕಾರದ ವರ್ತನೆ ತೋರುತ್ತಿದ್ದಾರೆ ಎಂದು ಡಿ ಬಾಸ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಕಾಲೆಳೆದಿದ್ದಾರೆ.

ರಿಷಬ್ ಶೆಟ್ಟಿ ಟ್ರೋಲ್‌ಗೆ ಕಾರಣವೇನು ?
ರಿಷಬ್ ಶೆಟ್ಟಿಯನ್ನು ಟ್ರೋಲ್ ಮಾಡುತ್ತಿರುವುದಕ್ಕೆ ಕಾರಣ ವಿಚಿತ್ರವಾಗಿದೆ. ದರ್ಶನ್ ಬಗ್ಗೆ ರಿಷಬ್ ನೋಕಮೆಂಟ್ಸ್ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಅಷ್ಟಕ್ಕೇ ದರ್ಶನ್ ಫ್ಯಾನ್ಸ್ ಗರಂ ಆಗಿದ್ದು. ಒಂದೇ ಒಂದು ಸಕ್ಸಸ್‌ಗೆ ರಿಷಬ್ ಶೆಟ್ಟಿ ಅವರಿಗೆ ಇಷ್ಟೊಂದು ದುರಹಂಕಾರ, ದರ್ಪ, ಮನುಷ್ಯ ಬೆಳೆದ ಮೇಲೆ ಇಷ್ಟೆ ಎಂದೆಲ್ಲ ಹೇಳುತ್ತಿದ್ದಾರೆ. ಇದಕ್ಕೆ ರಿಷಬ್ ಶೆಟ್ಟಿಯ ಫ್ಯಾನ್ಸ್‌ಗಳು ವಿರೋಧ ವ್ಯಕ್ತಪಡಿಸಿದ್ದು. ದರ್ಶನ್ ಫ್ಯಾನ್ಸ್‌ನ ವಿರುದ್ಧ ತಿರುಗಿ ಬಿದಿದ್ದಾರೆ. ಅವರು ಯಾವ ಸಂದರ್ಭದಲ್ಲಿ ಏನು ಹೇಳಿದ್ದಾರೆ ಎಂದು ನೋಡಿ ಎಂದಿದ್ದಾರೆ.
ಇಷ್ಟುಕ್ಕೂ ಈ ವಿವಾದ ಕಾರಣವಾಗುವುದರ ಹಿಂದೆ ಸಣ್ಣ ವಿಷಯವಿದೆ. ತೆಲುಗಿನ ಪ್ರಖ್ಯಾತ ನಟ ಜ್ಯೂನಿಯರ್ ಎನ್‌ಟಿಆರ್ ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದು, ಕರ್ನಾಟಕದ ಉಡುಪಿಯ ಶ್ರೀಕೃಷ್ಣ ಮಠ ಸೇರಿದಂತೆ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಮಾಧ್ಯಮಗಳ ಮುಂದೆ ಜ್ಯೂನಿಯರ್ ಎನ್‌ಟಿಆರ್ ಹಾಗೂ ರಿಷಬ್ ಶೆಟ್ಟಿ ಅವರು ಮಾತನಾಡುವ ಸಂದರ್ಭದಲ್ಲಿ ದರ್ಶನ್ ಬಗ್ಗೆ ಮಾತನಾಡುವುದಕ್ಕೆ ರಿಷಬ್ ಶೆಟ್ಟಿ ಅವರು ನಿರಾಕರಿಸಿದ್ದಾರೆ ನೋ ಕಮೆಂಟ್ಸ್ ಅಂದರೆ, ಈಗ ಆ ವಿಷಯ ಬೇಡ ಬಿಡಿ ಎಂದಷ್ಟೇ ಹೇಳಿದ್ದಾರೆ. ಇಷ್ಟಕ್ಕೇ ದರ್ಶನ್ ಫ್ಯಾನ್ಸ್ ಕೆಂಡಾಮಂಡಲರಾಗಿದ್ದಾರೆ. ಇನ್ನೂ ಕೆಲವರು ದೇವಸ್ಥಾನದಲ್ಲಿ ಈ ವಿಷಯ ಬೇಡ ಎಂದಷ್ಟೇ ಹೇಳಿದ್ದಾರೆ. ಈ ಮಾಧ್ಯಮದವರಿಗೆ ಎಲ್ಲಿ ಯಾವ ಪ್ರಶ್ನೆ ಕೇಳಬೇಕು ಎನ್ನುವ ಪರಿಜ್ಞಾನವೇ ಇಲ್ಲ ಎಂದು ಬೈದಿದ್ದಾರೆ. ರಿಷಬ್ ಶೆಟ್ಟಿ ಅವರೇ ಇನ್ನೂ ನಿಮ್ಮನ್ನು ಆ ಫ್ಯಾನ್ಸ್ ಬಿಡಲ್ಲ ಹುಷಾರು ಎಂದು ವ್ಯಂಗ್ಯ ಎಚ್ಚರಿಕೆಯನ್ನೂ ನೀಡಿದ್ದಾರೆ.
ಹಳೇ ವಿಡಿಯೋ ಹಾಕಿ ಟ್ರೋಲ್ ಮಾಡ್ತಿದ್ದಾರೆ ಫ್ಯಾನ್ಸ್
ಈ ಹಿಂದೆ ಚಿತ್ರವೊಂದರ ಬಿಡುಗಡೆ ಸಂದರ್ಭದಲ್ಲಿ ನಟ ದರ್ಶನ್ ಅವರ ಬಗ್ಗೆ ನಟ ರಿಷಬ್ ಅವರು ಮೆಚ್ಚುಗೆಯ ಮಾತನಾಡಿದ್ದ ವಿಷಯ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಹಾಗೂ ವೈರಲ್‌ಗೆ ಕಾರಣವಾಗಿದೆ. ಈ ಹಿಂದೆ ಚಲನಚಿತ್ರವೊಂದರ ಪ್ರಮೋಷನ್ ಸಂದರ್ಭದಲ್ಲಿ ರಿಷಬ್ ಶೆಟ್ಟಿ, "ಈ ಚಿತ್ರ ಸಕ್ಸಸ್ ಆದ ರೀತಿಯೇ. ಒಮ್ಮೆ ಚಿತ್ರಮಂದಿರಕ್ಕೆ ದರ್ಶನ್ ಫ್ಯಾನ್ಸ್ ಬಂದು ಹೋದರೆ ಸಾಕು. ಚಿತ್ರ ಸಕ್ಸಸ್ ಆದಂಗೆ" ಎಂದಿದ್ದರು. ಈ ವಿಡಿಯೋವನ್ನು ಬಳಸಿಕೊಂಡು ಇದೀಗ ಟ್ರೋಲ್ ಮಾಡಲಾಗುತ್ತಿದೆ. ಬೆಳೆಯುವಾಗ ಎಲ್ಲರೂ ಬೆಳೆಸಿಕೊಳ್ಳತ್ತಾರೆ. ಬೆಳೆದ ಮೇಲೆ ಅವರ ಬುದ್ಧಿ ತೋರಿಸ್ತಾರೆ ಎಂದು ದರ್ಶನ್ ಫ್ಯಾನ್ಸ್ ಟ್ರೋಲ್ ಮಾಡಿದ್ದರೆ. ದೇವಸ್ಥಾನದಲ್ಲಿ ಈ ವಿಷಯ ಬೇಡ ಅಂತ ರಿಷಬ್ ಹೇಳಿದ್ದಾರೆ. ಅಷ್ಟೇ ಬೇರೆ ಕಡೆ ಮಾತಾಡ್ತಾರೆ ಇದರಲ್ಲಿ ತಪ್ಪೇನಿದೆ ಅಂತ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications