ಪೊಲೀಸ್‌ ಧ್ವಜ ಮಾರಾಟದಿಂದ ಬಂದ ಶೇ.50ರಷ್ಟು ಹಣ ಪೊಲೀಸ್‌ ಅಧಿಕಾರಿಗಳ ಕ್ಷೇಮ ನಿಧಿಗೆ

ಬೆಂಗಳೂರು, ಜುಲೈ23: ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್‌ ಅಧಿಕಾರಿಗಳ ಕ್ಷೇಮ ನಿಧಿ ತಿದ್ದುಪಡಿ ನಿಯಮಗಳು ಮತ್ತು 1975ರ ನಿಯಮವನ್ನು ತಿದ್ದುಪಡಿ ಮಾಡಿ ಒಳಾಡಳಿತ ಇಲಾಖೆ ( ಪೊಲೀಸ್ ಇಲಾಖೆ) ಆದೇಶವನ್ನು ಮಾಡಿದೆ.

ಕರ್ನಾಟಕ ರಾಜ್ಯದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿ ನಿಯಮವು 1975ರಲ್ಲಿ ರೂಪಿತವಾಗಿದ್ದು. ಪ್ರಸ್ತುತ ಅದೇ ನಿಯಮವನ್ನು ಅನುಸರಿಸಲಾಗುತ್ತಿತ್ತು. ನಿಯಮಗಳಲ್ಲಿ ಹಲವು ತಿದ್ದುಪಡಿಗಳನ್ನು ಮಾಡುವ ಕುರಿತು ಏಪ್ರಿಲ್ 27, 2022ರಂದು ನಡೆದ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕೇಂದ್ರ ಕಾರ್ಯಕಾರಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಕರ್ನಾಟಕ ರಾಜ್ಯದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿ ಅನುಮೋದಿಸಿದಂತೆ 2022ರ Assets of the funds ಅಡಿಯಲ್ಲಿ ಪೊಲೀಸ್ ಧ್ವಜ ಮಾರಾಟದಿಂದ ಸಂಗ್ರಹವಾಗವ ಮೊತ್ತದಲ್ಲಿ ಶೇ 50ರಷ್ಟನ್ನು ಕೇಂದ್ರ ನಿವೃತ್ತ ಕ್ಷೇಮ ನಿಧಿಗೆ ಬಳಸುವುದು, ಬಾಕಿ ಉಳಿದ ಶೇ 50ರಷ್ಟನ್ನು ಘಟಕದ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ ಬಳಸುವುದು ಎಂಬ ಅಂಶವನ್ನು ಅನುಮೋದನೆಯನ್ನು ನೀಡುವಂತೆ ಸರಕಾರವನ್ನು ಕೋರಿಕೊಳ್ಳಲಾಗಿತ್ತು.

Retired Police Officers Welfare Fund Amendment Rules and Regulations, 1975 has been amended

ಪೊಲೀಸ್ ಮಹಾ ನಿರ್ದೇಶಕರ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಪರಿಶೀಲನೆಯನ್ನು ಮಾಡಿ ಕರ್ನಾಟಕ ರಾಜ್ಯದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿ ಅನುಮೋದಿಸಿದಂತೆ 2022ರ Assets of the funds ಅಡಿಯಲ್ಲಿ ಪೊಲೀಸ್ ಧ್ವಜ ಮಾರಾಟದಿಂದ ಸಂಗ್ರಹವಾಗವ ಮೊತ್ತದಲ್ಲಿ ಶೇ 50ರಷ್ಟನ್ನು ಕೇಂದ್ರ ನಿವೃತ್ತ ಕ್ಷೇಮ ನಿಧಿಗೆ ಬಳಸುವುದು, ಬಾಕಿ ಉಳಿದ ಶೇ 50ರಷ್ಟನ್ನು ಘಟಕದ ನಿವೃತ್ತ ಪೊಲೀಸ್ ಅಧಿಕಾರಿಳ ಕ್ಷೇಮ ನಿಧಿಗೆ ಬಳಸುವುದು ಎಂಬ ಅಂಶವನ್ನು ಅನುಮೋದಿಸಿ ಸರ್ಕಾರ ಆದೇಶವನ್ನು ನೀಡಿದೆ. ರಾಜ್ಯಪಾಲರ ಆದೇಶದ ಅನುಸಾರ ಒಳ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್ ಆರ್ ಆದೇಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+