ರಮೇಶ್ ಜಾರಕಿಹೊಳಿ ದೆಹಲಿಗೆ, ಸರ್ಕಾರಕ್ಕೆ ಮತ್ತೆ ಆತಂಕ

ಬೆಂಗಳೂರು, ಮೇ 20: ಲೋಕಸಭೆ ಚುನಾವಣೆ 2019ರ ಮತದಾನೋತ್ತರ ಸಮೀಕ್ಷೆಗಳು ಬಹುತೇಕ ಬಿಜೆಪಿ ಪರ ಬರುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮತದಾನೋತ್ತರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ಸೀಟುಗಳು ಲಭ್ಯವಾಗುವ ಸಾಧ್ಯೆತೆ ಇದೆ ಎನ್ನಲಾಗಿದ್ದು, ಇದು ಬಿಜೆಪಿ ಪಾಳಯದಲ್ಲಿ ನಿರೀಕ್ಷೆ ಮೂಡಿಸಿದ್ದು, ಕೆಲ ತಿಂಗಳಿಂದ ನೆನೆಗುದಿಯಲ್ಲಿದ್ದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಮತ್ತೆ ಚಾಲನೆ ದೊರೆತಿದೆ.

ನಿಂತಿರುವ ರಮೇಶ್ ಜಾರಕಿಹೊಳಿ ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ದೆಹಲಿಗೆ ಹೊರಡಲಿದ್ದು, ಬಿಜೆಪಿ ಹೈಕಮಾಂಡ್ ಅನ್ನು ಭೇಟಿ ಮಾಡಲಿದ್ದಾರೆ. ದೆಹಲಿಗೆ ಹೊರಡುವ ಮುನ್ನಾ ಬೆಂಗಳೂರಲ್ಲಿ ಕೆಲವು ಮುಖ್ಯ ವ್ಯಕ್ತಿಗಳೊಡನೆ ರಮೇಶ್ ಜಾರಕಿಹೊಲಿ ಸಭೆ ನಡೆಸಲಿದ್ದಾರೆ.

ಕಾಂಗ್ರೆಸ್‌ನ ಕೆಲವು ಅತೃಪ್ತ ಶಾಸಕರ ಜೊತೆ ಸಂಪರ್ಕದಲ್ಲಿರುವ ರಮೇಶ್ ಜಾರಕಿಹೊಳಿ ದೆಹಲಿಗೆ ಭೇಟಿ ನೀಡಿದ ನಂತರ ಅವರನ್ನು ಅಲ್ಲಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಫಲಿತಾಂಶದ ಬಳಿಕ ಪಕ್ಷಾಂತರ ಪರ್ವ ಆರಂಭವಾಗಲಿದೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ-ಸಿಪಿ.ಯೋಗೇಶ್ವರ್ ಭೇಟಿ?

ರಮೇಶ್ ಜಾರಕಿಹೊಳಿ-ಸಿಪಿ.ಯೋಗೇಶ್ವರ್ ಭೇಟಿ?

ರಮೇಶ್ ಜಾರಕಿಹೊಳಿ ಬೆಂಗಳೂರಲ್ಲಿ ಇಂದು ಸಿ.ಪಿ.ಯೋಗೇಶ್ವರ್ ಅವರನ್ನು ಭೇಟಿ ಮಾಡುವ ಸಂಭವ ಇದೆ. ಅವರ ಜೊತೆಗೆ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಸಹ ಇರಲಿದ್ದಾರೆ ಎನ್ನಲಾಗಿದೆ.

ಅತೃಪ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಅತೃಪ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ರಮೇಶ್ ಅವರು ಈಗಾಗಲೇ ಕೆಲವು ಶಾಸಕರನ್ನು ಸಂಪರ್ಕಿಸಿದ್ದು, ಫಲಿತಾಂಶ ಬಿಜೆಪಿ ಪರವಾದರೆ ಅವರು ಬಿಜೆಪಿಗೆ ಹಾರಲು ತಯಾರಿರುವುದಾ ಹೇಳಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ ಎಕ್ಸಿಟ್ ಪೋಲ್ ಬಿಜೆಪಿ ಪರ ಬಂದ ಕೂಡಲೇ ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ಹಾರುತ್ತಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಉಲ್ಬಣ

ಜೆಡಿಎಸ್-ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಉಲ್ಬಣ

ಲೋಕಸಭೆ ಚುನಾವಣೆ ಬಳಿಕ ಜೆಡಿಎಸ್-ಕಾಂಗ್ರೆಸ್‌ ನಡುವಿನ ಅಸಮಾಧಾನ ಸ್ಫೋಟಗೊಳ್ಳುವ ನಿರೀಕ್ಷೆ ಇದೆ, ಹಾಗಾಗಿಯೇ ಇದರ ಲಾಭ ಪಡೆದುಕೊಳ್ಳಲು ಬಿಜೆಪಿ ಸರ್ವ ರೀತಿಯಲ್ಲಿ ತಯಾರಾಗಿದ್ದು, ಅತೃಪ್ತ ಶಾಸಕರ ಸಂಪರ್ಕವನ್ನು ಈಗಾಗಲೇ ಸಾಧಿಸಿದೆ.

ಅತೃಪ್ತರ ನೇತೃತ್ವ ವಹಿಸಿರುವ ರಮೇಶ್ ಜಾರಕಿಹೊಳಿ

ಅತೃಪ್ತರ ನೇತೃತ್ವ ವಹಿಸಿರುವ ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ಅವರ ಜೊತೆಗೆ ಐವರು ಅತೃಪ್ತ ಶಾಸಕರು ಇದ್ದಾರೆ ಎಂಬ ವದಂತಿ ಇದೆ. ಲೋಕಸಭೆ ಫಲಿತಾಂಶದ ಬಳಿಕ ಅತೃಪ್ತರ ಸಂಖ್ಯೆ ಹೆಚ್ಚಾಗುವ ಸಂಭವವೂ ಇದೆ. ಅತೃಪ್ತ ಶಾಸಕರ ನೇತೃತ್ವವನ್ನು ರಮೇಶ್ ಜಾರಕಿಹೊಳಿ ವಹಿಸಿಕೊಂಡಿದ್ದು, ಅವರು ದೆಹಲಿಗೆ ತೆರಳಿ ಅತೃಪ್ತರ ಪರವಾಗಿ ಹೈಕಮಾಂಡ್‌ನೊಂದಿಗೆ ಬೇಡಿಕೆ ಚರ್ಚೆಗಳಲ್ಲಿ ತೊಡಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+