ಪಾರ್ಶ್ವವಾಯು ನಿವಾರಣೆಗೆ ಬಾಲಕಿಯನ್ನು ಬಲಿ ಕೊಟ್ಟಿದ್ದ ಆರೋಪಿಗಳ ಬಂಧನ

ಹತ್ತು ವರ್ಷದ ಬಾಲಕಿ ಆಯೇಷಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ರಾಮನಗರ ಜಿಲ್ಲೆಯ ಮಾಗಡಿ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ, ಮಾರ್ಚ್. 05 : ಪಾರ್ಶ್ವವಾಯು ರೋಗ ನಿವಾರಣೆಗಾಗಿ ಮುದ್ದಾದ ಬಾಲಕಿಯನ್ನು ಕೊಲೆ ಮಾಡಿದ್ದ ಆರೊಪಿಗಳನ್ನು ಬಂಧಿಸುವಲ್ಲಿ ರಾಮನಗರ ಜಿಲ್ಲೆಯ ಮಾಗಡಿ ಪೊಲೀಸರು ಯಶ್ವಸಿಯಾಗಿದ್ದಾರೆ.

ಮಹಮದ್ ವಾಸೀಲ್, ರಾಶಿದುನ್ನಿಸ್ಸಾ ಹಾಗೂ ನಸೀಂ ತಾಜ್ ಜೊತೆಗೆ ಓರ್ವ ಅಪ್ರಾಪ್ತ ಬಾಲಕನನ್ನು ಭಾನುವಾರ ಬಂಧಿಸಿದ್ದಾರೆ. ಈ ಬಂಧಿತ ಆರೋಪಿಗಳು ಆಯೇಶಾಳನ್ನು ಪಾರ್ಶ್ವವಾಯು ರೋಗ ನಿವಾರಣೆಗಾಗಿ ವಾಮಾಚಾರ ಮಾಡಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. [ಗೋಣಿ ಚೀಲದಲ್ಲಿ ಬಾಲಕಿ ಶವ, ನಿಧಿಗಾಗಿ ಬಲಿ ನೀಡಿದರೆ?]

ಮಾಗಡಿ ಪಟ್ಟಣದ ಹೊಸ ಮಸೀದಿ ಮೊಹಲ್ಲಾದ ನಿವಾಸಿಯಾದ ಮಹಮದ್ ನೂರುಲ್ಲಾ ಹಾಗೂ ಜಮೀಲಾ ದಂಪತಿಯ ಪುತ್ರಿ ಆಯೇಶಾ ಮಾರ್ಚ್ 1 ರಂದು ಕಾಣೆಯಾಗಿದ್ದಳು. ಕಾಣೆಯಾದ ಎರಡು ದಿನಗಳ ನಂತರ ಮಾರ್ಚ್ 3, ಶುಕ್ರವಾರದಂದು ಮಾಗಡಿ ಪಟ್ಟಣದ ಕಲ್ಯಾಗೇಟ್ ಸಮೀಪದ ಹೊಸಳ್ಳಿ ರಸ್ತೆಯ ದರ್ಗಾ ಬಳಿ ಗೋಣಿ ಚೀಲದಲ್ಲಿ ಆಯೇಶಾಳ ಶವ ಪತ್ತೆಯಾಗಿತ್ತು.

Ramanagara: Four people arrested in 10 year old girl ayesha murder case

ಪ್ರಕರಣದ ಬೆನ್ನತ್ತಿದ ಮಾಗಡಿ ಪೊಲೀಸರು ಪಟ್ಟಣದ ಮಹಮದ್ ವಾಸೀಲ್, ರಾಶಿದುನ್ನಿಸ್ಸಾ ಹಾಗೂ ನಸೀಂ ತಾಜ್ ಜೊತೆಗೆ ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ.

ಮಹಮದ್ ವಾಸೀಲ್ ಮೃತ ಆಯೇಶಾಳ ಸೋದರ ಸಂಬಂಧಿ. ವಾಸೀಲ್ ಸಹೋದರ ಮಹಮದ್ ರಫೀ ಎಂಬವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು.

40 ದಿನಗಳಲ್ಲಿ ಒಂದು ಹೆಣ್ಣು ಮಗುವನ್ನು ಬಲೆ ಕೊಟ್ಟರೆ ಗುಣಮುಖವಾಗುತ್ತಾರೆಂದು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+