ಬಾರ್‌ನಲ್ಲಿ ಜಯ ಕರ್ನಾಟಕ-ಕರವೇ ಕಾರ್ಯಕರ್ತರ ಪುಂಡಾಟ

ಯಾದಗಿರಿ, ಜೂ. 18 : ಯಾದಗಿರಿಯ ಎನ್.ವಿ.ಎಂ. ಬಾರ್‌ನಲ್ಲಿ ಬುಧವಾರ ರಾತ್ರಿ ಮಾರಾಮಾರಿ ನಡೆದಿದೆ. ವೇಟರ್ ಮತ್ತು ಬಾರ್ ಸಹಾಯಕನಿಗೆ ಜಯ ಕರ್ನಾಟಕ ಮತ್ತು ಕರವೇ ಕಾರ್ಯಕರ್ತರು ಥಳಿಸಿದ್ದಾರೆ. ಘಟನೆ ಕುರಿತು 5 ಜನರ ವಿರುದ್ಧ ದೂರು ದಾಖಲಾಗಿದೆ.

ಸಿಗರೇಟ್ ಸೇದಬೇಡಿ ಎಂದು ಹೇಳಿದ್ದಕ್ಕೆ ಕೋಪಗೊಂಡ ಜಯ ಕರ್ನಾಟಕ ಸಂಘಟನೆಯ ಯಾದಗಿರಿ ಜಿಲ್ಲಾಧ್ಯಕ್ಷ ಹಾಗೂ ಕರವೇ ನಾರಾಯಣಗೌಡರ ಬಣದ ಕಾರ್ಯಕರ್ತರು ವೇಟರ್ ಹಾಗೂ ಸಹಾಯಕರಿಗೆ ಥಳಿಸಿದ್ದಾರೆ. ಬಾರ್ ಪಿಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. [ನಾಡಿನ ಸಮಸ್ತ ಕುಡುಕರಿಗೆ ಸರಕಾರದಿಂದ ಸಿಹಿ ಟಾನಿಕ್]

yadagiri

ವೇಟರ್‌ ಬಸವರಾಜ್ ಅವರಿಗೆ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ತೇಜರಾಜ್ ರಾಠೋಡ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತ ರಾಮು ರಾಠೋಡ್ ಹಾಗೂ ಮತ್ತಿತರರು ಮನಬಂದಂತೆ ಥಳಿಸಿದ್ದಾರೆ. ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. [ಡಾನ್ಸ್‌ ಬಾರ್‌ ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್]

ಹಲ್ಲೆಯಿಂದ ಗಾಯಗೊಂಡ ಬಸವರಾಜ್ ಅವರನ್ನು ಯಾದಗಿದಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ, ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಐದು ಜನರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bar worker
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+