ರಾಜ್ಯಸಭೆ, ವಿಧಾನಪರಿಷತ್ ಚುನಾವಣಾ ಅಖಾಡ ಸಿದ್ಧ

ಬೆಂಗಳೂರು, ಜೂನ್ 04 : ತೀವ್ರ ಕುತೂಹಲ ಕೆರಳಿಸಿರುವ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯ ಕಣ ಸಿದ್ಧವಾಗಿದೆ. ರಾಜ್ಯಸಭೆ ಚುನಾವಣೆ ಕಣದಲ್ಲಿ 5 ಮತ್ತು ವಿಧಾನಪರಿಷತ್ ಚುನಾವಣೆ ಕಣದಲ್ಲಿ 8 ಅಭ್ಯರ್ಥಿಗಳಿದ್ದಾರೆ.

ಶುಕ್ರವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಸದಸ್ಯ ಅನಿಲ್ ಕುಮಾರ್ ಅವರು ನಾಮಪತ್ರವನ್ನು ವಾಪಸ್ ಪಡೆದರು. ಉಳಿದ ಎಲ್ಲಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. [ಮೂರು ಕಾಸಿಗೆ ಹರಾಜಾದ ರಾಜ್ಯ ಶಾಸಕರ ಮರ್ಯಾದೆ!]

vidhana soudha

ಕರ್ನಾಟಕ ವಿಧಾನಸಭೆಯಿಂದ 4 ರಾಜ್ಯಸಭೆ ಸದಸ್ಯರನ್ನು ಆರಿಸಲು ಜೂನ್ 11ರಂದು ಮತ್ತು ವಿಧಾನಪರಿಷತ್ತಿನ 7 ಸದಸ್ಯರನ್ನು ಆಯ್ಕೆ ಮಾಡಲು ಜೂನ್ 10ರಂದು ಚುನಾವಣೆ ನಡೆಯಲಿದೆ. ಅಂದು ಸಂಜೆಯೇ ಮತ ಎಣಿಕೆ ನಡೆಯುತ್ತದೆ. [ರಾಜ್ಯಸಭೆಗೆ ಸದಸ್ಯರ ಆಯ್ಕೆ ಹೇಗೆ?]

ರಾಜ್ಯಸಭೆ ಕಣದಲ್ಲಿರುವವರು

* ಬಿಜೆಪಿ - ನಿರ್ಮಲಾ ಸೀತಾರಾಮನ್
* ಕಾಂಗ್ರೆಸ್ - ಆಸ್ಕರ್ ಫರ್ನಾಂಡೀಸ್, ಜೈರಾಮ್ ರಮೇಶ್, ಕೆ.ಸಿ.ರಾಮಮೂರ್ತಿ
* ಜೆಡಿಎಸ್ - ಬಿ.ಎಂ.ಫಾರೂಕ್
ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು 45 ಮತಗಳು ಬೇಕು. ನಿರ್ಮಲಾ ಸೀತಾರಾಮನ್, ಆಸ್ಕರ್ ಫರ್ನಾಂಡೀಸ್, ಜೈರಾಮ್ ರಮೇಶ್ ಗೆಲ್ಲುವುದು ಖಚಿತವಾಗಿದ್ದು, ಕೆ.ಸಿ.ರಾಮಮೂರ್ತಿ ಮತ್ತು ಬಿ.ಎಂ.ಫಾರೂಕ್ ಅವರ ನಡುವೆ ಸ್ಪರ್ಧೆ ನಡೆಯಲಿದೆ.

ಪರಿಷತ್ ಚುನಾವಣೆ

* ಕಾಂಗ್ರೆಸ್‌ - ರಿಜ್ವಾನ್ ಅರ್ಷದ್, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ, ಆರ್‌.ಬಿ.ತಿಮ್ಮಾಪುರ
* ಬಿಜೆಪಿ - ವಿ.ಸೋಮಣ್ಣ, ಲೆಹರ್ ಸಿಂಗ್
* ಜೆಡಿಎಸ್‌ - ನಾರಾಯಣ ಸ್ವಾಮಿ, ಡಾ.ವೆಂಕಟಪತಿ ಅವರು ಕಣದಲ್ಲಿದ್ದಾರೆ. ಒಬ್ಬರು ಅಭ್ಯರ್ಥಿ ಗೆಲ್ಲಲು 29 ಮತಗಳು ಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+