Rain Alert: ಮಳೆ ಅಬ್ಬರ ಮತ್ತಷ್ಟು ಜೋರು, ಎಚ್ಚರಿಕೆ ಇಲ್ಲದಿದ್ದರೆ ಸಂಕಷ್ಟ!
ಮಳೆ.. ಮಳೆ.. ಮಳೆ.. ಎಲ್ಲೆಲ್ಲೂ ಮಳೆಯ ಅಬ್ಬರ ಬಲು ಜೋರಾಗಿದ್ದು, ಜನರು ಈಗ ಭರ್ಜರಿ ಮಳೆಯಲ್ಲಿ ಮಿಂದಿದ್ದಾರೆ. ಆದರೆ ಪದೇ ಪದೇ ಮಳೆ ಬರುತ್ತಿರುವುದು ಈಗ ಹೊಸ ಸಮಸ್ಯೆ ಹುಟ್ಟು ಹಾಕಿದ್ದು, ಜನರು ಪರದಾಡುವ ಪರಿಸ್ಥಿತಿ ಬಂದಿದೆ. ಹೀಗಾಗಿ ಮಳೆ ನಿಂತರೆ ಸಾಕು ಅಂತಾ ಕಾಯುವ ಸಮಯದಲ್ಲೇ ಮತ್ತೆ ಮಳೆ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಈಗ ಮಳೆ ಎಚ್ಚರಿಕೆ ನೀಡಿರುವ ಜಿಲ್ಲೆಗಳು ಯಾವುವು? ಇನ್ನೂ ಎಷ್ಟು ದಿನ ಮಳೆ ಬೀಳಲಿದೆ?
ಮಳೆರಾಯ ಬ್ರೇಕ್ ಪಡೆಯದೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಸುರಿಯುತ್ತಿದ್ದಾನೆ. ಈ ಕಾರಣಕ್ಕೆ ಜನರು ಕೂಡ ಭಾರಿ ಮಳೆಯ ಪರಿಣಾಮ ನರಳುವ ಸ್ಥಿತಿ ಬಂದಿದೆ. ಮತ್ತೊಂದು ಕಡೆ ಕರ್ನಾಟಕದ ಮಲೆನಾಡು ಜಿಲ್ಲೆಗಳು & ಕರಾವಳಿ ಜಿಲ್ಲೆಗಳೂ ಈಗಾಗಲೇ ಭಾರಿ ಮಳೆಗೆ ಬೆಚ್ಚಿಬಿದ್ದಿವೆ. ಪರಿಸ್ಥಿತಿ ಹೀಗೆ ಸಂಕಷ್ಟದ ಸ್ಥಿತಿಗೆ ಸಿಲುಕಿರುವ ಸಮಯದಲ್ಲೇ, ಮತ್ತೊಮ್ಮೆ ಇದೇ ರೀತಿ ಭಾರಿ ಮಳೆ ಬೀಳಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದರೆ ಭಾರಿ ಮಳೆಯ ಎಂಟ್ರಿ ಆಗಲಿರುವ ಆ ಜಿಲ್ಲೆಗಳು ಯಾವುವು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಈ ಜಿಲ್ಲೆಗಳಿಗೆ ಭಾರಿ ಭರ್ಜರಿ ಮಳೆ!
ಕರ್ನಾಟಕದಲ್ಲಿ ಮತ್ತೆ ಮುಂಗಾರು ಮಳೆಯ ಮೋಡಗಳು ಅಲರ್ಟ್ ಆಗಿವೆ. ಹೀಗಾಗಿ ಇದೀಗ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಆರಂಭ ಆಗಲಿದೆ. ಆ ನಂತರ ಕನ್ನಡ ನಾಡಿನ ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಸೇರಿ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಭಾರಿ ಭರ್ಜರಿ ಮಳೆ ಬೀಳಲಿದೆ.
ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯು ಸೇರಿದಂತೆ ಹುಬ್ಬಳ್ಳಿ & ಧಾರವಾಡ ಸುತ್ತಮುತ್ತಲ ಭಾಗದಲ್ಲಿ ಭಾರಿ ಭರ್ಜರಿ ಮಳೆ ಎಂಟ್ರಿ ಆಗಲಿದೆ. ಮುಂದಿನ 5 ದಿನಗಳ ಕಾಲ ಇದೇ ರೀತಿ ಮಳೆ ಎಂಟ್ರಿ ಆಗುವ ಮುನ್ಸೂಚನೆ ಇದೆ. ಹಾಗೇ ಬಹುತೇಕ ಕರ್ನಾಟಕದಲ್ಲಿ ಮುಂದಿನ 5 ದಿನ ಇದೇ ರೀತಿಯಾಗಿ ಭರ್ಜರಿ ಮಳೆ ಸುರಿಯುವ ಸೂಚನೆ ಇದೆ. ಹಾಗಾದರೆ ಬೆಂಗಳೂರಿನ ಕಥೆ ಏನು?
ಬೆಂಗಳೂರಿಗೂ ಬರಲಿದೆ ಭರ್ಜರಿ ಮಳೆ!
ಮುಂಗಾರು ಮಳೆಯ ಆರ್ಭಟಕ್ಕೆ ಈಗಾಗಲೇ ರಾಜಧಾನಿ ಬೆಂಗಳೂರು ಬೆಚ್ಚಿಬಿದ್ದಿದೆ. ಆದರೂ ಮಳೆ ಮಾತ್ರ ಸೈಲೆಂಟ್ ಆಗಿಲ್ಲ. ಹೀಗಿದ್ದಾಗಲೇ ಮತ್ತೆ ಮುಂದಿನ ಕೆಲ ದಿನಗಳ ಕಾಲ ಮಳೆ ಮುನ್ಸೂಚನೆ ನೀಡಲಾಗಿದ್ದು, ಬೆಂಗಳೂರಿನಲ್ಲಿ ಜನರು ಚಿಂತೆ ಮಾಡುವಂತಾಗಿದೆ. ಇದೇ ರೀತಿ ಮಳೆ ಮತ್ತೆ ಅಬ್ಬರಿಸಲು ಶುರು ಮಾಡಿದರೆ ಬೆಂಗಳೂರಿನಲ್ಲಿ ಇನ್ನಷ್ಟು ಸಮಸ್ಯೆ ಪಕ್ಕಾ ಎಂಬ ಭಯ ಕಾಡ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಸಂಜೆ ಸಮಯದಲ್ಲಿ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications