• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರಹ್ಮಚರ್ಯ, ಸನ್ಯಾಸತ್ವದ ಮಹತ್ವ ಹರಿಯ ಬಿಟ್ಟವರಿಗೇನು ಗೊತ್ತು!

By ಗುರು ಗಜಾನನ ಭಟ್
|

ಇಂದು ಅನೇಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಕಡೆಗೆ ಮತ್ತೆ ಬರೆಯಬೇಕೆನ್ನಿಸಿತು. ಶ್ರೀಗಳು ಪರೀಕ್ಷೆಗೆ ಬರಲಿಲ್ಲವಂತೆ, ಹೆದರಿದ್ದಾರೆ, ತಪ್ಪು ಮಾಡಿಲ್ಲವಾದರೆ ಬರುತ್ತಿದ್ದರು, ಇನ್ನೋರ್ವರು ಹೇಳಿದರು ಒಂದು ತೊಟ್ಟು ವೀರ್ಯ ಕೊಟ್ಟರೆ ಇವರದ್ದೇನು ಹೋಗತ್ತೆ?

ಭಾರತದ ಸನಾತನ ಹಿಂದೂ ಸಂಪ್ರದಾಯದಲ್ಲಿ ಬ್ರಹ್ಮಚರ್ಯಕ್ಕೆ ಎಲ್ಲಿಲ್ಲದ ಸ್ಥಾನಮಾನಗಳನ್ನು ನೀಡಲಾಗಿದೆ. ಯಾಕೆ ಮಹಾನುಭಾವರೆಲ್ಲ ಬ್ರಹ್ಮಚರ್ಯ ಪಾಲನೆ ಮಾಡಿದವರಾಗಿದ್ದಾರೆ? ಅದಕ್ಕೆ ಅಷ್ಟು ಮಹತ್ವವಿದೆ. ಹಿಡಿದವನಿಗೆ ಅದರ ಅರಿವಿದೆ , ಹರಿಯಬಿಟ್ಟವನಿಗೆ ಅದರ ಅರಿವಿಲ್ಲ. ಸೃಷ್ಟಿಯ ನಿಯಮಕ್ಕೆ ವಿರೋಧ ಅಂದರೂ ಅದಕ್ಕೆ ಅವರನ್ನು ಸೃಷ್ಟಿಕರ್ತರ ಹಾಗೆ ನೋಡುತ್ತಾರೆ .

ಪೀಠಕ್ಕೆ ಅದೇ ಮಹತ್ವ, ಅದೇ ತತ್ವ , ಮೊದಲೇ ಯೋಚಿಸಿ ಬಂದಿರುತ್ತಾರೆ, ಯಾರದೋ ಒತ್ತಡಕ್ಕೆ ಮಣಿದು ಬಂದವರಲ್ಲ. ಸ್ವಇಚ್ಚೆಯಿಂದ ಲೋಕಕಲ್ಯಾಣಕ್ಕೆ ಬಂದವರು. ಮೂರೊತ್ತು ಊಟಮಾಡುವವನಿಗೆ ಅರ್ಥವಾಗಲು ಕಷ್ಟವಾದೀತು, ಬಡವನಿಗೆ ಇದರ ಅರಿವಿದೆ. ಗುರುವಿನ ಹರಿವಿನ ಅರಿವಿದೆ. (ಬಂಧನದ ಭೀತಿಯಿಂದ ಪಾರಾದ ರಾಘವೇಶ್ವರ ಶ್ರೀಗಳು)

ನಿಜಕ್ಕೂ ಮಠದವರು, ಮೇಲ್ವಿಚಾರಕರು ಇದನ್ನು ವಿರೋಧಿಸಿ ದಾವೆ ಹೂಡಬೇಕಾಗಿತ್ತು. ಗುರು ಮಠದ ಆಸ್ತಿ, ಹೇಗೆ ಬೇಕಾದರೂ ದುರುಪಯೋಗ ಪಡಿಸಿಕೊಳ್ಳಲು ಬಿಡಬಾರದು. ಬುದ್ದಿ ಜೀವಿಗಳು ಹೇಳುತ್ತಲೇ ಇರುತ್ತಾರೆ , ಅವರನ್ನು ಗಣನೆಗೆ ತೆಗೆದುಕೊಳ್ಳ ಬಾರದು , ಅವರಿಗೆ ಉತ್ತರಿಸಬಾರದು. ಅವರ ಹೇಳಿಕೆಗೆಲ್ಲ ಉತ್ತರಿಸುತ್ತಾ ಹೋದರೆ , ನಾಳೆ ಅವರು ಬಾಹುಬಲಿ ವಿಗ್ರಹಕ್ಕೂ ಚಡ್ಡಿ ಹಾಕಿಸಿಯಾರು....!

ಪ್ರತಿಯೊಬ್ಬ ವ್ಯಕ್ತಿಗೂ ಒಬ್ಬ ಗುರುವಿರುತ್ತಾನೆ, ಅದು ಯಾವುದೊ ಬಾಹ್ಯ ಶಕ್ತಿ. ಅದು ಯಾವ ರೂಪದಲ್ಲೂ ಇರಬಹುದು, ವ್ಯಕ್ತಿಯು ಆಗಿರಬಹುದು , ವ್ಯಕ್ತಿತ್ವವು ಆಗಿರಬಹುದು . ವಿಚಾರವಾಗಿರಬಹುದು , ಮೂರ್ತಿಯಾಗಿರಬಹುದು , ಪ್ರಾಣಿಯಾಗಿರಬಹುದು , ಪಂಚಭೂತಗಳಾಗಿರಬಹುದು, ದೇವರಾಗಿರಬಹುದು, ದೈವವಾಗಿರಬಹುದು.

ಅದರಲ್ಲಿ ಆತನಿಗೆ ಅಪಾರ ಶೃದ್ದೆ, ನಂಬಿಕೆ ಇರುತ್ತದೆ, ಅದರ ಎದುರು ಪ್ರತಿಯೋರ್ವ ವ್ಯಕ್ತಿಯೂ ಶೂನ್ಯನಾಗುತ್ತಾನೆ. ತನ್ನಿಂದಾಗಿರಬಹುದಾದ ಅಪರಾಧಕ್ಕೋ, ತನಗಾಗಿರುವ ನಷ್ಟಕ್ಕೋ ಆತನಲ್ಲಿ ಮೊರೆ ಹೋಗುತ್ತಾನೆ.

ಇಂದು ಭಾರತದಲ್ಲಿ 90 ಕೋಟಿ ಹಿಂದೂಗಳಿದ್ದಾರೆ. ಅದರಲ್ಲಿ 90 ಸಾವಿರದಷ್ಟು ನಾಸ್ತಿಕರಿರಬಹುದು. ಅವರಿಗೆ ದೇವರಿಲ್ಲ ದೈವವಿಲ್ಲ , ಆದರೂ ಗುರುವಿದ್ದಾನೆ. ಅವರು ದ್ವಂದ್ವದಲ್ಲಿ ಬದುಕುತ್ತಾರೆ. ತಾನೇ ತನ್ನಿಂದಲೇ ಎನ್ನುತ್ತಾ ಬದುಕಿರುತ್ತಾರೆ. (ಮಹಿಳಾ ಆಯೋಗಕ್ಕೆ ಮಠದ 12 ಪ್ರಶ್ನೆಗಳು)

ಅಸಮತೋಲನದ ಜೀವನದಲ್ಲಿರುತ್ತಾರೆ. ಆಸ್ತಿಕರೋ ಅವರದ್ದೇ ಬೇರೆ, ತಮ್ಮೆಲ್ಲ ಕಷ್ಟಗಳನ್ನು ದೇವರ ಪಾದಕ್ಕೆ ಹಾಕಿ ನೆಮ್ಮದಿಯ ಬದುಕಿನಲ್ಲಿರುತ್ತಾರೆ. ಅವರಿಗೆ ಪ್ರತಿ ಆಗು ಹೋಗುಗಳು ದೇವರಿಚ್ಚೆಯೇ ಎಂಬ ನಂಬಿಕೆ.

ಕೆಟ್ಟದ್ದನ್ನು ಮಾಡಿದರೆ ಶಿಕ್ಷೆ ಆಗುತ್ತದೆ ಎಂದು ಭಯವಿರುತ್ತದೆ. ನಾಸ್ತಿಕರಿಗೆ ಅದ್ಯಾವುದೂ ಇಲ್ಲ. ಹಾಗಾಗಿ ಅಪರಾಧಗಳು ನಡೆಯುತ್ತವೆ. ಆಸ್ತಿಕರ ನಂಬಿಕೆಯ ಮೇಲೆಯೇ ಭಾರತ ನಿಂತಿದೆ . ಅದಕ್ಕೆ ವಿಶ್ವ ನಮ್ಮನ್ನು ಬೇರೆ ರೀತಿಯಿಂದಲೇ ನೋಡುತ್ತದೆ. ಹಿಂದಿನ ಪುಟ ಕ್ಲಿಕ್ಕಿಸಿ..

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Raghaveshwara Seer of Ramachandrapura Mutt not attended potency test : Article by Guru Gajanana Bhat - Part 1.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more