ಐಎಎಸ್ ಅಧಿಕಾರಿಗಳ ಬಡ್ತಿ, ವರ್ಗಾವಣೆ ಪಟ್ಟಿ

ಬೆಂಗಳೂರು, ಜನವರಿ 01 : ಕರ್ನಾಟಕ ಸರ್ಕಾರ ಐಎಎಸ್ ಅಧಿಕಾರಿಗಳಿಗೆ ಹೊಸ ವರ್ಷದ ಕೊಡುಗೆ ನೀಡಿದೆ. ಹಲವು ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಮದನ್ ಗೋಪಾಲ್ ಅವರು ನಿವೃತ್ತಿಯಾಗಿದ್ದಾರೆ.

ಡಿಸೆಂಬರ್ 31ರ ಗುರುವಾರ ಸಂಜೆ ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಕೆಲವು ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿದ್ದರೆ, ಕೆಲವರನ್ನು ವರ್ಗಾವಣೆ ಮಾಡಲಾಗಿದೆ. ಕೆಲವು ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

karnataka government

ವರ್ಗಾವಣೆಗೊಂಡವರು : ಎಂ. ಕೂರ್ಮರಾವ್‌ - ಸಿಇಒ ರಾಯಚೂರು ಜಿಲ್ಲಾ ಪಂಚಾಯಿತಿ, ರಿಚರ್ಡ್‌ ವಿನ್ಸೆಂಟ್‌ ಡಿಸೋಜ - ಜಂಟಿ ಆಯುಕ್ತ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಪಶ್ಚಿಮ ವಲಯ). [ಡಿಐಜಿಯಾಗಿ ಬಡ್ತಿ ಪಡೆದ ಎಸ್ಪಿ ಸೋನಿಯಾ ನಾರಂಗ್]

ಬಡ್ತಿ ಪಡೆದವರು : ಕಾರ್ಯದರ್ಶಿ ಶ್ರೇಣಿಗೆ ಬಡ್ತಿ ಪಡೆದ ಅಧಿಕಾರಿಗಳು : ಪಿ.ಹೇಮಲತಾ - ವಿಶೇಷ ಕರ್ತವ್ಯಾಧಿಕಾರಿ, ಬಾಹ್ಯಾಕಾಶ ಇಲಾಖೆಯ ರಾಷ್ಟ್ರೀಯ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ, ಬೆಂಗಳೂರು. ಪಂಕಜ್‌ ಕುಮಾರ್‌ ಪಾಂಡೆ - ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ವಿ.ಪೊನ್ನುರಾಜ್‌ - ಕೇಂದ್ರ ಕಾನೂನು ಸಚಿವರ ಆಪ್ತ ಕಾರ್ಯದರ್ಶಿ, ದೆಹಲಿ. ಎಸ್‌.ಎಸ್‌. ಪಟ್ಟಣ ಶೆಟ್ಟಿ - ಆಯುಕ್ತರು, ಗಣಿ ಮತ್ತು ಭೂವಿಜ್ಞಾನ ಇಲಾಖೆ. ಎ.ಎಂ. ಕುಂಜಪ್ಪ - ಪ್ರಾದೇಶಿಕ ಆಯುಕ್ತರು, ಮೈಸೂರು.

ಹೆಚ್ಚುವರಿ ಜವಾಬ್ದಾರಿ : ಕೆಲವು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಜನಸ್ಪಂದನ) ಪ್ರಧಾನ ಕಾರ್ಯದರ್ಶಿ ಪರಮೇಶ್‌ ಪಾಂಡೆ ಅವರಿಗೆ ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರ ಜವಾಬ್ದಾರಿಯನ್ನೂ ವಹಿಸಲಾಗಿದೆ. ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ಎಸ್‌.ಜಿಯಾವುಲ್ಲಾ ಅವರಿಗೆ ಹಟ್ಟಿ ಚಿನ್ನದ ಗಣಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರ ಪ್ರಭಾರ ಹೊಣೆ ವಹಿಸಲಾಗಿದೆ.

ಸಂಪೂರ್ಣ ಪಟ್ಟಿ ಇಲ್ಲಿದೆ ಓದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+