ಮಂಡ್ಯ : ನ್ಯಾಯಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ?

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಮಾರ್ಚ್ 16 : ನ್ಯಾಯಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ವಿತರಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ನಂತರ ವರದಿ ಬಂದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲು ರಾಜ್ಯ ಆಹಾರ ನಿಗಮ ನಿರ್ಧರಿಸಿದೆ.

ನ್ಯಾಯಬೆಲೆ ಅಂಗಡಿಗಳ ಮೂಲಕ ಚೀನಾ ದೇಶದ ಪ್ಲಾಸ್ಟಿಕ್ ಅಕ್ಕಿಯನ್ನು ವಿತರಿಸಲಾಗಿದೆ ಎಂದು ಮಂಡ್ಯ ತಾಲೂಕಿನ ಕೀಲಾರ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರದಾರರಿಗೆ ಈ ಮಾದರಿಯ ಅಕ್ಕಿಯನ್ನು ವಿತರಿಸಲಾಗಿದೆ ಎಂದು ಅವರು ಸಭೆಯಲ್ಲಿ ದೂರಿದ್ದಾರೆ. [ಅಕ್ಕಿ ಮೇಲೆ ಆಸೆ ಇದ್ದರೆ ಕಡಿಮೆ ಮಾಡಿಕೊಂಡು ಬನ್ನಿ!]

rice

ಮಾರ್ಚ್ ತಿಂಗಳಲ್ಲಿ ವಿತರಿಸಲಾದ ಅಕ್ಕಿಯನ್ನು ಪಡೆದ ಪಡಿತರ ಫಲಾನುಭವಿಯೊಬ್ಬರು ಅದನ್ನು ಪುಡಿ ಮಾಡಿಸಿದಾಗ ಕಡ್ಡಿ ಮಾದರಿಯ ಚೂರುಗಳು ಪತ್ತೆಯಾಗಿವೆ. ಗ್ರಾಮಸಭೆಗೆ ಅಕ್ಕಿಯನ್ನು ತಂದ್ದಿದ್ದ ಚಂದ್ರು ಎಂಬುವರು ಅಧಿಕಾರಿಗಳಿಗೆ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. [ನೀವು ತಿನ್ನುವ ಅಕ್ಕಿ ಯಾವುದರಿಂದ ಮಾಡಿದ್ದು?]

ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಇತರ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಅದು ಮಾಮೂಲಿ ಅಕ್ಕಿಯಂತಿರಲಿಲ್ಲ. ಇದರಿಂದ ಅನುಮಾನಗೊಂಡ ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಲಾಯಿತು.

food

ಇಲಾಖೆಯ ಅಧಿಕಾರಿ ರಮೇಶ್ ಎಂಬುವರು ಸ್ಥಳಕ್ಕೆ ಭೇಟಿ ನೀಡಿ ಅಕ್ಕಿಯನ್ನು ಪರಿಶೀಲಿಸಿದರು. ಅವರೂ ಸಹ ಅದು ಮಾಮೂಲಿ ಅಕ್ಕಿಯೋ ಅಥವಾ ಚೈನಾದ ಪ್ಲಾಸ್ಟಿಕ್ ಅಕ್ಕಿಯೋ ಎಂದು ನಿಖರವಾಗಿ ಗುರುತಿಸುವಲ್ಲಿ ವಿಫಲರಾದರು. ಆದ್ದರಿಂದ ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧರಿಸಲಾಯಿತು. ['ಅನ್ನಭಾಗ್ಯ'ವಂತೆ ಗೀತಾರ ನೆಮ್ಮದಿಯ ನುಡಿಗಳಿವು]

ಕೀಲಾರ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಕರ್ನಾಟಕ ರಾಜ್ಯ ಆಹಾರ ನಿಗಮದಿಂದಲೇ ಅಕ್ಕಿಯನ್ನು ವಿತರಿಸಲಾಗಿದೆ. ಆ ಅಕ್ಕಿ ಚೆನ್ನಾಗಿಯೇ ಇದೆ. ಚೈನಾ ಅಕ್ಕಿ ಇಲ್ಲಿಗೆ ಬರಲು ಸಾಧ್ಯವಿಲ್ಲ. ಗ್ರಾಮಸ್ಥರಿಗೆ ಶಂಕೆ ಇದ್ದರೆ ಅಕ್ಕಿಯನ್ನು ವಾಪಸ್ ಪಡೆದು ಬೇರೆ ಅಕ್ಕಿಯನ್ನು ನೀಡುವುದಾಗಿ ಆಹಾರ ಇಲಾಖೆ ಹೇಳಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಪ್ಲಾಸ್ಟಿಕ್ ಅಕ್ಕಿ ಬಗ್ಗೆ ಸತ್ಯಾಸತ್ಯತೆ ಹೊರಬರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Plastic rice found in Mandya taluk Kilara village. Rice have been distributed in fair price shops in the month of March. Food and civil supply department officers send samples for laboratory.
Please Wait while comments are loading...