ಪರ್ಯಾಯ ಹಬ್ಬಕ್ಕೆ ಉಡುಪಿ ಸಜ್ಜು, ಬಿಗಿ ಬಂದೋಬಸ್ತ್

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಉಡುಪಿ, ಜನವರಿ,14: ಉಡುಪಿ ಪರ್ಯಾಯ ಹಬ್ಬವೂ ಜನವರಿ 18ರ ಭಾನುವಾರ ವಿಜೃಂಭಣೆಯಿಂದ ನಡೆಯಲಿದ್ದು, ಹಲವಾರು ಗಣ್ಯರು ಆಗಮಿಸುವ ಸಾಧ್ಯತೆ ಇದೆ. ಹಾಗಾಗಿ ಕಾನೂನು ಮತ್ತು ಸುರಕ್ಷಾ ವ್ಯವಸ್ಥೆ ರೂಪಿಸಲು ಜಿಲ್ಲಾಡಳಿತ ಸನ್ನದ್ದವಾಗಿದೆ.

ಪರ್ಯಾಯ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಝಡ್ ಪ್ಲಸ್ ಪ್ಲಸ್ ಗಣ್ಯರು ಆಗಮಿಸುವ ವೇಳೆ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಹಾಗೂ ಗಣ್ಯರಿಗೆ ಒದಗಿಸುವ ಭದ್ರತೆ ವಿಷಯದಲ್ಲಿ ರಾಜಿ ಇಲ್ಲ. ಮೂಲಸೌಕರ್ಯ ಹಾಗೂ ಸುರಕ್ಷೆಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ಸ್ಪಷ್ಟಪಡಿಸಿದರು.[ಜ 14ರಿಂದ ಮಾರಣಕಟ್ಟೆ ಜಾತ್ರೆ: ವಾಯ್ ಎಲ್ಲಾ ಬರ್ಕ್ ಮಾರ್ರೇ]

udupi

ಗಣ್ಯಾಧಿಗಣ್ಯರಿಗೆ ವಸತಿ, ಸಂಚಾರ ಹಾಗೂ ಪಾಸ್ ವ್ಯವಸ್ಥೆ ಬಗ್ಗೆ ಮತ್ತು ಪೊಲೀಸ್ ಇಲಾಖೆಗೆ ಪೂರಕ ವಾಹನ ಒದಗಿಸಲು ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲಾಡಳಿತದ ನೆರವು ಪಡೆದು ಸಂಚಾರಿ, ಸುರಕ್ಷೆ ಹಾಗೂ ವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೂಲ ಸೌಕರ್ಯ ಅಭಿವೃದ್ಧಿ ಸಂಬಂಧ ಎಲ್ಲ ಕಾಮಗಾರಿಗಳನ್ನು ಸಂಪೂರ್ಣಗೊಳಿಸಲಾಗಿದೆ. ನಿರ್ಮಿತಿಯ ಶೌಚಾಲಯವನ್ನು ಶನಿವಾರದಂದು ಸಾರ್ವಜನಿಕ ಉಪಯೋಗಕ್ಕೆ ನೀಡಲಾಗುವುದು. ಸ್ವಚ್ಛತೆಗೆ ಹೆಚ್ಚಿನ ಮಾನವ ಶಕ್ತಿ ಬಳಸಿಕೊಳ್ಳಲು ಹಾಗೂ ಸೆಸ್ಪೂಲ್ ಮಿಷಿನ್ ಬಳಸಿಕೊಳ್ಳಲು, ಕಾರ್ ಸ್ಟ್ರೀಟ್ ಸ್ವಚ್ಛತೆ ಮತ್ತು ಮಾರ್ಗಗಳ ಬದಿಯಲ್ಲಿರುವ ಜಂಗಲ್ ಕಟ್ಟಿಂಗ್ ಸೂಚನೆ ನೀಡಲಾಗಿದೆ ಎಂದು ಸಿಎಂಸಿ ಕಮಿಷನರ್ ಸಭೆಗೆ ಮಾಹಿತಿ ನೀಡಿದರು.[ಸಕಾಲ ಯೋಜನೆಯಲ್ಲಿ ಉಡುಪಿ ರಾಜ್ಯಕ್ಕೆ ಪ್ರಥಮ]

ಜನರ ನೆರವಿಗಾಗಿ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಈಗಾಗಲೇ ಮಾಹಿತಿ ಫಲಕಗಳನ್ನು ನಗರದಾದ್ಯಂತ ಅಳವಡಿಸಲಾಗಿದ್ದು, ಜನರು ಯಾವುದೇ ಸಮಸ್ಯೆಗೆ ಕಂಟ್ರೋಲ್ ರೂಮ್ ನಂಬರ್ 0820-2526444 ಮತ್ತು 100 ಗೆ ಕಾಲ್ ಮಾಡಬಹುದು. ಮಾಸ್ಟರ್ ಕಂಟ್ರೋಲ್ ರೂಮ್ ಕೂಡ ವ್ಯವಸ್ಥೆ
ಮಾಡಲಾಗಿದೆ. ಇದು 17 ಮತ್ತು 18ರಂದು ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಸಿಇಒ ಪ್ರಿಯಾಂಕ ಮೇರಿಫ್ರಾನ್ಸಿಸ್, ರತ್ನಕುಮಾರ್ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Udupi district admin prepares for pejawar paryayotsava to be held on January 17th and 18th. Udupi Deputy Commissioner Dr. Vishal R discuss security arrangements with officials.
Please Wait while comments are loading...