ವಿಶ್ವನಾಥ್ ಆಯ್ಕೆ ಮೂಲಕ ದೇವೇಗೌಡರ ಮತ್ತೊಂದು ರಾಜಕೀಯ ಚತುರ ನಡೆ

Recommended Video

      ಎಚ್ ವಿಶ್ವನಾಥ್ ಅವರನ್ನ ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಹಿಂದಿದ್ಯಾ ಗೌಡ್ರ ಮಾಸ್ಟರ್ ಪ್ಲಾನ್

      ಎಚ್.ವಿಶ್ವನಾಥ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಿ, ದೇವೇಗೌಡರು ರಾಜಕೀಯ ಚದುರಂಗದ ಮತ್ತೊಂದು ಚತುರ ನಡೆ ಇರಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹಾಗೆ ನೋಡಿದರೆ, ವಿಶ್ವನಾಥ್ ಅವರಿಗೆ ಜೆಡಿಎಸ್ ಪಕ್ಷವೇ ಹೊಸತು. ಇನ್ನು ಅಲ್ಲಿರುವ ಹಿರಿಯ ನಾಯಕರನ್ನು ಒಟ್ಟುಗೂಡಿಸಿಕೊಂಡು, ತಮ್ಮ ಮಾತಿನಂತೆ ನಡೆದುಕೊಳ್ಳುವಲ್ಲಿ ಸಫಲರಾಗುತ್ತಾರಾ?

      ಆ ಉದ್ದೇಶಕ್ಕೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರೆ ಆ ಮಾತು ಬರುತ್ತಿತ್ತು. ಆದರೆ ದೇವೇಗೌಡರಿಗೆ ಕುರುಬ ಸಮುದಾಯದ ನಾಯಕ- ಮೈತ್ರಿ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಹಣಿಯಬೇಕಿದೆ. ಆ ಕೆಲಸವನ್ನು ಮಾಡಬೇಕಿದ್ದರೆ ಅದೇ ಸಮುದಾಯದ ಮುಖಂಡರಿಂದಲೇ ಮಾಡಿಸಿದರೆ ಆಗ ತಮಗೆ ಅಪವಾದ ಬರೋದಿಲ್ಲ.

      ಇಲ್ಲದಿದ್ದರೆ ಒಕ್ಕಲಿಗರು ವರ್ಸಸ್ ಕುರುಬರು ಅಥವಾ ಲಿಂಗಾಯತರು ವರ್ಸಸ್ ಕುರುಬರು...ಹೀಗೆ ಬೇರೆ ಯಾವುದೋ ರೂಪ ಪಡೆಯುವ ಸಾಧ್ಯತೆ ಇರುತ್ತದೆ. ಅದೇ ವಿಶ್ವನಾಥ್ ವರ್ಸಸ್ ಸಿದ್ದರಾಮಯ್ಯ ಎಂದಾಗಿಬಿಟ್ಟರೆ ಇದರಿಂದ ಜೆಡಿಎಸ್ ಗೆ ಹಾನಿ ಆಗುವುದಿಲ್ಲ ಎಂಬ ಲೆಕ್ಕಾಚಾರ ಕಾಣಿಸುತ್ತದೆ.

      One more master stroke by JDS supremo Deve Gowda

      ಇನ್ನು ದೇವೇಗೌಡರು ಕುರುಬರ ವಿರೋಧಿ ಎಂದು ಇದ್ದ ಆರೋಪವನ್ನು ದೂರ ಮಾಡಿಕೊಳ್ಳುವುದಕ್ಕೆ ಇದು ಒಳ್ಳೆ ಅವಕಾಶ. ಕುರುಬ ಸಮುದಾಯದ ವಿರೋಧಿ ಆಗಿದ್ದರೆ ನಾನು ವಿಶ್ವನಾಥ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡ್ತಿದ್ದೆನಾ ಎಂದು ತಿರುಗೇಟು ನೀಡುವ ತಂತ್ರಗಾರಿಕೆ ಇಣುಕುತ್ತಿದೆ.

      ವಿಶ್ವನಾಥ್ ಅವರು ಮೈಸೂರು ಭಾಗದವರು. ಜೆಡಿಎಸ್ ಗೆ ಭದ್ರವಾದ ನೆಲೆ ಇರುವ ಪ್ರದೇಶಕ್ಕೆ ಸೇರಿದವರೊಬ್ಬರನ್ನು ಆಯ್ಕೆ ಮಾಡಿದ್ದು, ಗೌಡರ ಕುಟುಂಬದ ಹೊರಗಿನಿಂದ ಒಬ್ಬರನ್ನು ಮುಂಚೂಣಿಯಲ್ಲಿ ನಿಲ್ಲಿಸಿದ್ದು...ಇಂಥ ಹಲವು ಲೆಕ್ಕಾಚಾರಗಳು ಮೇಲ್ನೋಟಕ್ಕೆ ಕಂಡುಬರುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+