ಕರ್ನಾಟಕದ 09 ವಿಶ್ವವಿದ್ಯಾಲಯಗಳ ಮುಚ್ಚುವ ನಿರ್ಧಾರ: ಸಿಎಂ ಸಿದ್ದರಾಮಯ್ಯ ಮಹತ್ವದ ಅಪ್ಡೇಟ್
ಬೆಂಗಳೂರು, ಮಾರ್ಚ್ 14: ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಾವಧಿಯಲ್ಲಿ ಪ್ರಮುಖ ವಿಶ್ವವಿದ್ಯಾಲಯಗಳನ್ನು ವಿಭಜಿಸಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗಿತ್ತು. ಇದೀಗ ಆ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ ಎಂಬ ಬಿಸಿ ಬಿಸಿ ಚರ್ಚೆಗಳು ಶುರುವಾ ಬೆನ್ನಲ್ಲೆ ವಿಪಕ್ಷಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ವಿವಿ ಪರಿಶೀಲನೆ ವರದಿಯೇ ಬಂದಿಲ್ಲ. ಈ ಬಗ್ಗೆ ಬಿಜೆಪಿಗೆ ಆತಂಕ ಏಕೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕ ಬಜೆಟ್ ಮೇಲಿನ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ಇನ್ನೂ ಯಾವ ತೀರ್ಮಾನವನ್ನು ರಾಜ್ಯ ಸರ್ಕಾರ ಮಾಡಿಲ್ಲ. ಕ್ಯಾಬಿನೆಟ್ ಉಪ ಸಮಿತಿ ವರದಿ ಸಹ ಬಂದಿಲ್ಲ. ಉಪ ಸಮಿತಿ ವರದಿ ಬರುವ ಮೊದಲೇ ವಿಶ್ವವಿದ್ಯಾಲಯ ಮುಚ್ಚುತ್ತಾರೆ ಎಂದು ರಾಜ್ಯ ಬಿಜೆಪಿ ನಾಯಕರಲ್ಲಿ ಆತಂಕ ಮನೆ ಮಾಡಿರುವುದು ಏಕೆ? ಎಂದು ಅವರು ಪ್ರಶ್ನಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಈ ಸಂಗತಿಯ ಕೂಲಂಕಷ ಪರಿಶೀಲನೆಗೆ ಉಪ ಸಮಿತಿ ರಚಿಸಲಾಗಿದೆ. ಉಪ ಸಮಿತಿ ವರದಿ ಬಿಜೆಪಿ ಅವಧಿಯಲ್ಲಿ ತಲೆ ಎತ್ತಿರುವ ಹೊಸ ವಿಶ್ವವಿದ್ಯಾಲಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗಿದ್ದಾರೆ. ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಇದೆಲ್ಲವು ಬಾಕಿ ಇರುವಾಗಲೇ ವಿವಿಗಳ ಮುಚ್ಚುವ ಹೇಳಿಕೆ ಸರಿಯಲ್ಲ ಎಂದಿದ್ದಾರೆ. ಅಲ್ಲದೇ ಉಪಸಮಿತಿ ಸದಸ್ಯರು ವರದಿ ಸಲ್ಲಿಸುತ್ತಿದ್ದಂತೆ ಅದನ್ನು ಕ್ಯಾಬಿನೆಟ್ ಮುಂದೆ ಇಟ್ಟು ತೀರ್ಮಾನ ತೆಗೆದುಕೊಳ್ಳಲಾಗುವುದು.
ವರದಿ ಬರುವ ಮೊದಲೇ ರಾಜ್ಯದಲ್ಲಿ ವಿಶ್ವವಿದ್ಯಾಲಯಗಳನ್ನು ಸರ್ಕಾರ ಮುಚ್ಚಲು ಹೊರಟಿದೆ ಎನ್ನುವುದು ಸರಿಯಲ್ಲ. ಇಂಥಾ ಯಾವುದೇ ತೀರ್ಮಾನ ನಾವು ಈ ವರೆಗೆ ಕೈಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಕಲಿಕೆಗೆ ಪೂರಕ ಆಗುವಂತೆ ವಿಶ್ವವಿದ್ಯಾಲಯಗಳನ್ನು ಬಿಜೆಪಿಯು ಸ್ಥಾಪಿಸಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಆ ಎಲ್ಲ ಒಂಬತ್ತು ಹೊಸ ವಿಶ್ವವಿದ್ಯಾಲಯಗಳ ಭವಿಷ್ಯ ಹೊಯ್ದಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ಆತಂಕ ಶುರುವಾಗಿದೆ. ವಿಶ್ವವಿದ್ಯಾಲಯಗಳನ್ನು ಸರ್ಕಾರ ಮುಚ್ಚಲು ಚಿಂತನೆ ನಡೆಸಿದೆ ಎಂದು ಗೊತ್ತಾಗುತ್ತಿದ್ದಂತೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ಸದನದಲ್ಲಿ ಸಹ ಪ್ರಸ್ತಾಪಿಸಿ, ಆತಂಕ ವ್ಯಕ್ತಪಡಿಸಿತು. ಸರ್ಕಾರವನ್ನುವಿಪಕ್ಷ ನಾಯಕರು ಪ್ರಶ್ನಿಸಿದರು. ಅದಕ್ಕೆ ಮುಖ್ಯಮಂತ್ರಿಗಳು ಉತ್ತರಿಸಿ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಉಪ ಸಮಿತಿ ವರದಿ ಮೇಲೆ ಎಲ್ಲ ಗಮನ ನೆಟ್ಟಿದೆ.
ಯಾವೆಲ್ಲ ಹೊಸ ವಿಶ್ವವಿದ್ಯಾಲಯಗಳು ಸ್ಥಾಪನೆ ಆದವು?
* ಬೆಂಗಳೂರು ವಿವಿ ವಿಭಜಿಸಿ ಬೆಂಗಳೂರು ಮಹಾರಾಣಿ ಕ್ಲಸ್ಟರ್, ಬೆಂಗಳೂರು ನೃಪತುಂಗ ವಿಶ್ವವಿದ್ಯಾನಿಲಯ ಮಾಡಲಾಗಿದೆ. ಕಲಬುರಗಿ ವಿವಿ ವಿಭಜಿಸಿ ರಾಯಚೂರು ವಿವಿ ಸ್ಥಾಪಿಸಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯ ವಿಭಜಿಸಿ ಹಾಸನ ವಿವಿ ಎಂದು ಸ್ಥಾಪಿಸಲಾಗಿದೆ. ಅದೇ ರೀತಿ ಚಾಮರಾಜನಗರ ಹಾಗೂ ಮಂಡ್ಯ, ಬೆಳಗಾವಿ ವಿವಿ ವಿಭಜಿಸಿ ಬಾಗಲಕೋಟೆ, ಕರ್ನಾಟಕ ವಿವಿ ವಿಭಜಿಸಿ ಹಾವೇರಿ ವಿವಿ, ಬೀದರ್, ಬಳ್ಳಾರಿ ವಿವಿ ವಿಭಜಿಸಿ ಕೊಪ್ಪಳ. ಮಂಗಳೂರು ವಿವಿ ವಿಭಜಿಸಿ ಕೊಡಗು ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಲಾಗಿತ್ತು. ಇವುಗಳನ್ನು ಬಂದ್ ಮಾಡಿಸಲು ಸರ್ಕಾರ ಮುಂದಾಗಿದ್ದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಮುಂದಿನ ದಿನಗಳಲ್ಲಿ ವರದಿ ಸಲ್ಲಿಕೆಯಾದ ಬಳಿಕ ಬಿಜೆಪಿ ಇದೇ ನಿಲುವು ತಾಳುವ ಸಾಧ್ಯತೆ ಇದೆ.
ವಿವಿ ಮುಚ್ಚುವ ನಿರ್ಧಾರ: ಬಿಜೆಪಿ ವಿರೋಧ ಏಕೆ?
ಕರ್ನಾಟಕ ರಾಜ್ಯಾದ್ಯಂತ ಉನ್ನತ ಶಿಕ್ಷಣ ಸಿಗುವಂತೆ ಮಾಡಲು ರಾಜ್ಯದಲ್ಲಿ ಒಂಬತ್ತು ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಈಗಿನ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರವು ಮಹತ್ವದ ನಿರ್ಧಾರಕ ಕೈಗೊಂಡಿತ್ತು. ಶಿಕ್ಷಣದಲ್ಲಿ ಇಲಾಖೆ ವ್ಯಾಪ್ತಿಯಲ್ಲಿ ಇದೊಂದು ಮಹತ್ವ ನಿರ್ಧಾರವಾಗಿದ್ದು, ಇದನ್ನು ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಗಳಿಗೆ ಹಣ ಹೊಂದಿಸುವ ಕಾರಣದಿಂದ ವಿವಿ ಮುಚ್ಚಲು ಹೊರಟಿಸಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಈ ಹಿಂದೆ ಬಿಜೆಪಿ ತಂದಿದ್ದ ವಿದ್ಯಾರ್ಥಿಗಳ ವೇತನ ನೀಡುವ ಯೋಜನೆಯನ್ನು ಮೊಟಕುಗೊಳಿಸಿತ್ತು. ಯುವ ನಿಧಿ ಹೆಸರಿನಲ್ಲಿ ಮಕ್ಕಳ ಶಿಕ್ಷಣ, ವಿದ್ಯಾಭ್ಯಾಸ ಜೊತೆಗೆ ಸರ್ಕಾರ ಆಟವಾಡುತ್ತಿದೆ. ಈ ಹೊಸ ವಿಶ್ವವಿದ್ಯಾಲಯ ನಡೆಸಲು ಸಾಕಷ್ಟು ಕೋಟಿ ಹಣದ ಅಗತ್ಯತೆ ಇರುತ್ತದೆ. ಭೂಮಿಯ ಕೊರತೆಯು ಉಂಟಾಗುತ್ತದೆ ಎಂದು ಸರ್ಕಾರ ಕುಂಟು ನೆಪ ತೆಗೆದಿದೆ. ಈ ಕಾರಣದಿಂದ ಹೊಸ ವಿಶ್ವವಿದ್ಯಾಯಗಳ ನಿರ್ವಹಣೆಗೆ ನಿರಾಸಕ್ತಿ ವಹಿಸಿದೆ ಎಂದು ಬಿಜೆಪಿ ದೂರಿದೆ.
ಕರ್ನಾಟಕದಲ್ಲಿ ವಿಶ್ವವಿದ್ಯಾಯಗಳನ್ನು ಮುಚ್ಚುವ ಮಾತು ಕೇಳಿ ಬರುತ್ತಿದ್ದಂತೆ ಚಾಮರಾಜನಗರ ಮತ್ತು ಕೊಡಗು ಸೇರಿದಂತೆ ಮುಂತಾದ ಕಡೆಗಳಲ್ಲಿ ವಿವಿ ಮುಚ್ಚದಂತೆ ಹೋರಾಟ ನಡೆದವು. ರಾಜ್ಯ ಸರ್ಕಾರ ಶಿಕ್ಷಣ, ವಿದ್ಯಾರ್ಥಿಗ ಪರವಾಗಿಲ್ಲ ಎಂದು ಹೋರಾಟಗಾರರು ದೂರಿದರು.
ಮೂಲಗಳ ಪ್ರಕಾರ, ಬಿಜೆಪಿ ಸ್ಥಾಪಿಸಿರುವ ಈ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಮತ್ತು ಮುನ್ನಡೆಸಲು ಒಟ್ಟು ಸುಮಾರು 430 ಕೋಟಿಗೂ ಅಧಿಕ ಹಣ ಬೇಕಾಗುತ್ತದೆ. ಅಲ್ಲದೆ ಸ್ಥಾಪನೆಗೆ ಸುಮಾರು 200 ಎಕರೆ ಜಾಗದ ಅಗತ್ಯತೆ ಇದೆ ಎಂದು ಸರ್ಕಾರ ತಿಳಿಸಿತ್ತು. ಇದನ್ನು ಬಿಜೆಪಿ ವ್ಯಾಪಕವಾಗಿ ಖಂಡಿಸಿದೆ.
ಕೆಪಿಎಸ್‌ಸಿ ನಿಲುವಳಿ ಮಂಡನೆ: ಸಿಎಂ ಉತ್ತರ
ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿಯಲ್ಲಿ ಸುಧಾರಣಾ ಕ್ರಮಗಳನ್ನು ಜಾರಿ ಮಾಡಿ, ಪಾರದರ್ಶಕ ಮತ್ತು ನ್ಯಾಯಸಮ್ಮತ ನೇಮಕಾತಿಗೆ ಆದ್ಯತೆ ನೀಡಲಾಗುವುದು. ನ್ಯಾಯಾಲಯವು ಸೂಚನೆ ಕೊಟ್ಟರೆ ಮರು ಪರೀಕ್ಷೆ ಮಾಡುವಂತೆ ಸಲಹೆ ನೀಡಲಾಗುವುದು.
ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ರಾಜ್ಯ ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ ಹಲವು ಸುಧಾರಣೆಗಳನ್ನು ತರಲು ಮುಂದಾಗಿದೆ ಎಂದು ತಿಳಿಸಿದರು.
ಮೊದಲು ಕನ್ನಡದಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ, ಬಳಿಕ ಅದನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರಿಸಲು ಕ್ರಮ ವಹಿಸಲಾಗುವುದು. ಕೆಪಿಎಸ್‌ಸಿ ಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಉತ್ತರಿಸಿದರು. ಕೆಪಿಎಸ್‌ಸಿ ಪರೀಕ್ಷೆಯ ಭಾಷಾಂತರದಲ್ಲಿ ಆದ ಲೋಪದ ಕಾರಣಕ್ಕೆ ಅಭ್ಯರ್ಥಿಗಳಿಗೆ ಆಗಿರುವ ಸಮಸ್ಯೆ ಕುರಿತು ವಿರೋಧ ಪಕ್ಷದ ನಿಲುವಳಿ ಸೂಚನೆ ನಂತರ ಮುಖ್ಯಮಂತ್ರಿಗಳು ಈ ವಿವರಿಸಿದರು.












Click it and Unblock the Notifications