ಚನ್ನಪಟ್ಟಣ ಫೈಟ್: ದೆಹಲಿಯಲ್ಲಿ ಸಿ.ಪಿ ಯೋಗೇಶ್ವರ್ ಪರ ಬಿಜೆಪಿ ನಾಯಕರ ಬ್ಯಾಟಿಂಗ್ : ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 30: ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಕುರಿತು ಬುಧವಾರ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪರವಾಗಿ ಅಂತಿಮ ಹಂತದ ಕಸರತ್ತು ನಡೆಯಲಿದೆ. ಈ ಸಂಬಂಧ ಯೋಗೇಶ್ವರ್ ಪರವಾಗಿ ಬುಧವಾರ ಆರ್.ಅಶೋಕ್, ಅರವಿಂದ್ ಬೆಲ್ಲದ, ಬಸವರಾಜ ಬೊಮ್ಮಾಯಿ, ಡಾ.ಸಿ. ಎನ್.ಅಶ್ವತ್ಥನಾರಾಯಣ, ಸಿ.ಟಿ.ರವಿ ಮತ್ತಿತರ ನಾಯಕರು ದೆಹಲಿಗೆ ತೆರಳಲಿದ್ದಾರೆ. ಅಲ್ಲದೇ ಟಿಕೆಟ್ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಬುಧವಾರ ಸಂಜೆ ಬಳಿಕ ವಿವಿಧ ಕೇಂದ್ರ ಸಚಿವರು ಸೇರಿದಂತೆ ಪಕ್ಷದ ವರಿಷ್ಠರನ್ನು ಕಂಡು ಚನ್ನಪಟ್ಟಣ ಕ್ಷೇತ್ರದ ರಾಜಕೀಯ ಲೆಕ್ಕಾಚಾರ ಏನಿದೆ, ಅಲ್ಲಿನ ವಾಸ್ತವಾಂಶ ಏನು, ಉಪಚುನಾವಣೆಯ ಟಿಕೆಟ್ ಅನ್ನು ಯೋಗೇಶ್ವರ್ ಅವರಿಗೆ ಯಾಕೆ ನೀಡಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಯೋಗೇಶ್ವರ್ ಅವರು ನಡೆಸುವ ಕೊನೆಯ ಪ್ರಯತ್ನ ಆಗಲಿದೆ. ಈ ಪ್ರಯತ್ನದ ಬಳಿಕವೂ ತಮಗೆ ಟಿಕೆಟ್ ಸಿಗುವ ಬಗ್ಗೆ ಸ್ಪಷ್ಟ ಭರವಸೆ ಸಿಗದೇ ಇದ್ದಲ್ಲಿ ಯೋಗೇಶ್ವರ್ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಅಥವಾ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಇನ್ನು ದೆಹಲಿಯಲ್ಲಿ ಸಿ.ಪಿ ಯೋಗೇಶ್ವರ್ ಪರ ಬಿಜೆಪಿ ನಾಯಕರ ಬ್ಯಾಟಿಂಗ್ ವಿಚಾರಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ಬಿಜೆಪಿಯ ಕೆಲ ರಾಜ್ಯನಾಯಕರು ಅವರವರ ಅಭಿಪ್ರಾಯ ತಿಳಿಸಿದ್ದಾರೆ.ಅದನ್ನ ನಾವು ವಿರೋಧ ಮಾಡಲ್ಲ, ಸ್ವಾಗತ ಮಾಡ್ತೇವೆ.ಆದರೆ ಅಂತಿಮವಾಗಿ ಬಿಜೆಪಿ ವರಿಷ್ಠರು ಹಾಗೂ ನಮ್ಮ ನಾಯಕರಾದ ಕುಮಾರಸ್ವಾಮಿ ತೀರ್ಮಾನ ಮಾಡಿ.ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತೆ.ಯಾರೇ ಅಭ್ಯರ್ಥಿ ಆದರೂ ಎರಡೂ ಪಕ್ಷಗಳು ಬೆಂಬಲ ಕೊಡಬೇಕು.ಬಿಜೆಪಿ-ಜೆಡಿಎಸ್ ಒಗ್ಗಟ್ಟಿನ ಮಂತ್ರ ಜಪಿಸಬೇಕು.ಯಾರೇ ಅಭ್ಯರ್ಥಿ ಆದ್ರೂ ನಮ್ಮ ಪಕ್ಷದ ಕಾರ್ಯಕರ್ತರು ಕೆಲಸ ಮಾಡ್ತಾರೆ ಎಂದು ತಿಳಿಸಿದರು.
ರಾಜ್ಯದ ಮೂರು ಉಪ ಚುನಾವಣೆಗಳಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರನು ಒಂದು ಇಲ್ಲಿಯವರೆಗೂ ಕೂಡ ಚುನಾವಣೆಯ ದಿನಾಂಕ ನಿಗದಿ ಆಗಿಲ್ಲ.ಸದ್ಯ ಉಪ ಚುನಾವಣೆ ಎದುರಾಗಿರೋ ಹಿನ್ನಲೆ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಚನ್ನಪಟ್ಟಣ ಕ್ಷೇತ್ರದಲ್ಲಿ NDA ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಜೆಡಿಎಸ್ ಪಕ್ಷವು ಕೂಡಾ NDA ಕೂಟದ ಒಂದು ಭಾಗವಾಗಿದೆ. ಹಾಗಾಗಿ ಕ್ಷೇತ್ರದಲ್ಲಿ ಎನ್.ಡಿ.ಎ ಅಭ್ಯರ್ಥಿ ಗೆಲ್ಲಬೇಕು. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣ ಕ್ಷೇತ್ರ ಕಬ್ಜಗೆ ಡಿಕೆ ಶಿವಕುಮಾರ್ ಫ್ಲಾನ್ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಬೆಂಗಳೂರು ಗ್ರಾಮಾಂತರದಲ್ಲಿ ಅವರ ಸಹೋದರ ಮೂರು ಬಾರಿ ಸಂಸದರಾಗಿದ್ರು.ಈಗ ಆ ಕ್ಷೇತ್ರವನ್ನೇ ಕಳೆದುಕೊಂಡಿದ್ದಾರೆ. ಐದು ಕ್ಷೇತ್ರಗಳಲ್ಲಿ ಮಿತ್ರ ಪಕ್ಷಕ್ಕೆ ಹೆಚ್ಚು ಲೀಡ್ ಸಿಕ್ಕಿದೆ.NDA ಪಕ್ಷಕ್ಕೆ ಜನರ ಬೆಂಬಲ, ಆಶೀರ್ವಾದ ಇರೋದು ಸ್ಪಷ್ಟವಾಗಿದೆ.ಕನಕಪುರ ಚನ್ನಪಟ್ಟಣದಲ್ಲೂ ದೊಡ್ಡ ಮಟ್ಟದ ಲೀಡ್ ಸಿಕ್ಕಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಗೆಲುವು ಖಚಿತ ಎಂದರು.
ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಉದ್ಯೋಗ ಮೇಳ ಮತ್ತು ಧ್ವಜಾರೋಹಣ ಮಾಡಿ ಕ್ಷೇತ್ರದ ಜನರ ಓಲೈಕೆ ವಿಚಾರಕ್ಕೆ ಮಾತನಾಡಿದ ಅವರು ಸಾಮಾನ್ಯವಾಗಿ ಪ್ರೋಟೊಕಾಲ್ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡಬೇಕು.ಆದರೆ ರಾಜ್ಯದ ಡಿಸಿಎಂ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಅದೇನೋ 20 ಜನ ಪಿಡಿಓ ಬದಲಾವಣೆ ಮಾಡ್ತೀವಿ, ಸೈಟ್ ಕೊಡ್ತೀವಿ ಅಂತ ಆಶ್ವಾಸನೆ ಕೊಡ್ತಿದ್ದಾರೆ.ಆದರೆ ರಾಜ್ಯದ ಜನತೆಗೆ ಕೊಟ್ಟಿರುವ ಆಶ್ವಾಸನೆಗಳನ್ನೇ ಅವರು ಈಡೇರಿಸಿಲ್ಲ.ಚನ್ನಪಟ್ಟಣಕ್ಕೂ ಅದೇ ಸ್ಥಿತಿ ಬರುತ್ತೆ.ಇದಕ್ಕೆ ದೊಡ್ಡಮಟ್ಟದ ಪ್ರಚಾರ ಕೊಡೊ ಅಗತ್ಯ ಇಲ್ಲ ಎಂದರು..
ಸರ್ಕಾರದ ಸಾಕಷ್ಟು ಮಂತ್ರಿಗಳು ಪಂಚಾಯ್ತಿ ಮಟ್ಟಕ್ಕೆ ಬರ್ತಿದ್ದಾರೆ. ರಾಜ್ಯದಲ್ಲಿ ಚನ್ನಪಟ್ಟಣ ಉಪಚುನಾವಣೆ ಗಮನಸೆಳೆಯಲಿದೆ.ಏನೇ ಇದ್ರೂ ಅಂತಿಮವಾಗಿ ತೀರ್ಮಾನ ಮಾಡೋದು ಕ್ಷೇತ್ರದ ಜನ. ಅವರೇ ಇದಕ್ಕೆ ತಕ್ಕ ಉತ್ತರ ಕೊಡ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.












Click it and Unblock the Notifications