Train Extension: ಇಂದಿನಿಂದಲೇ ಈ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ, ವೇಳಾಪಟ್ಟಿ ಗಮನಿಸಿ
ಬೆಂಗಳೂರು, ಜುಲೈ 19: ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಮತ್ತೊಂದು ರೈಲು ವಿಸ್ತರಣೆಯಾಗಿದೆ. ಅರಮನೆ ನಗರಿ ಮೈಸೂರು-ಮೈಲಾಡುತುರೈ ಎಕ್ಸ್ ಪ್ರೆಸ್ ರೈಲು ಕಡಲೂರು ಪೋರ್ಟ್ ವರೆಗೆ ವಿಸ್ತರಣೆ ಮಾಡಲಾಗಿದೆ. ಈ ರೈಲು ವಿಸ್ತರಿಸಿದ ಮಾರ್ಗದಲ್ಲಿ ಇಂದಿನಿಂದಲೇ ಸಂಚಾರ ನಡೆಸಲಿದೆ.
ಈ ವಿಸ್ತೃತ ಮೈಸೂರು-ಮೈಲಾಡುತುರೈ ಎಕ್ಸ್ ಪ್ರೆಸ್ ರೈಲು ಸೇವೆಯು ಪ್ರಯಾಣಿಕರಿಗೆ ಎರಡೂ ಕಡೆಯಿಂದ ಜುಲೈ 19ರಿಂದಲೇ ಲಭ್ಯವಾಗಿದೆ. ಹಾಗಾದರೆ ಯಾವ ನಿಲ್ದಾಣಕ್ಕೆ ಯಾವ ಸಮಯದಲ್ಲಿ ಆಗಮಿಸಲಿದೆ, ನಿರ್ಗಮಿಸಲಿದೆ ಎಂಬ ಮಾಹಿತಿಯನ್ನು ನೈಋತ್ಯ ರೈಲ್ವೆ ವಲಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜಿನಾತ್ ಕನಮಡಿ ತಿಳಿಸಿದ್ದಾರೆ.

ಈ ರೈಲಿನ ನಿಲುಗಡೆ- ಸಮಯ ವಿವರ ಪಟ್ಟಿ
1. ಮೈಸೂರು-ಕಡಲೂರು ಪೋರ್ಟ್ ಡೈಲಿ ಎಕ್ಸ್ ಪ್ರೆಸ್ ರೈಲು
* ಈ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 16232) ಮಯಿಲಾಡುತುರೈಗೆ ಬೆಳಗ್ಗೆ 06:45 ಗಂಟೆಗೆ ಆಗಮಿಸಿ, 07:00 ಗಂಟೆಗೆ ನಿರ್ಗಮಿಸಲಿದೆ.
* ಸಿರ್ಕಾಝಿಗೆ 07:23 ಗಂಟೆಗೆ ಆಗಮಿಸಿ, 07:24 ಗಂಟೆಗೆ ತರೆಳುತ್ತದೆ.
* ಚಿದಂಬರಂಗೆ 07:41 ಗಂಟೆಗೆ ಆಗಮಿಸಿ, 07:42 ಗಂಟೆಗೆ ನಿರ್ಗಮಿಸಲಿದೆ.
* ಕಡಲೂರು ಪೋರ್ಟ್ ಗೆ 08:35 ಗಂಟೆಗೆ ಆಗಮಿಸಲಿದೆ.
2. ಕಡಲೂರು ಪೋರ್ಟ್-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು
* ಈ ಕ್ಸ್ ಪ್ರೆಸ್ ರೈಲು (ಸಂಖ್ಯೆ 16231) ಮರಳಿ ಕಡಲೂರು ನಿಲ್ದಾಣ ಪೋರ್ಟ್‌ನಿಂದ ಮಧ್ಯಾಹ್ನ 15:40 ಗಂಟೆಗೆ ನಿರ್ಗಮಿಸಲಿದೆ.
* ಚಿದಂಬರಂಗೆ 16:07 ಗಂಟೆಗೆ ಆಗಮಿಸಿ, 16:08 ಗಂಟೆಗೆ ತರೆಳುತ್ತದೆ..
* ಸಿರ್ಕಾಯಿಗೆ 16:23 ಗಂಟೆಗೆ ಆಗಮಿಸುತ್ತದೆ.16:24 ಗಂಟೆಗೆ ನಿರ್ಗಮಿಸಲಿದೆ.
* ಮಯಿಲಾಡುತುರೈಗೆ 17:30 ಗಂಟೆಗೆ ಆಗಮಿಸಿ, 17:55 ಗಂಟೆಗೆ ಹೊರಡುತ್ತದೆ.
* ಮೈಸೂರು-ಮೈಲಾಡುತುರೈ ನಿಲ್ದಾಣಗಳ ನಡುವಿನ ನಿಲುಗಡೆ ಮತ್ತು ಆಯ್ಕೆಯಲ್ಲಿ ಬದಲಾಣೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆ ಇಲಾಕೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.












Click it and Unblock the Notifications