Mysore Sandal Soap: ಹೊಸ ದಾಖಲೆ ಬರೆದ ಕನ್ನಡಿಗರ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್

ಕನ್ನಡಿಗರ ಹೆಮ್ಮೆ ಮೈಸೂರು ಸ್ಯಾಂಡಲ್ ಸೋಪ್ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಸಿಹಿ ಸುದ್ದಿ ನೀಡಿದ್ದಾರೆ. ಸರ್ಕಾರಿ ಉದ್ಯಮಗಳು ಹಳ್ಳ ಹಿಡಿಯುತ್ತಿವೆ ಎನ್ನುವ ಹೊತ್ತಿನಲ್ಲೇ ಈ ಸುದ್ದಿ ಬಂದಿರುವುದು ಸಮಾಧಾನ ತಂದಿದೆ.

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ಕಂಪನಿ ಉತ್ಪಾದನೆಯಲ್ಲಿ ಹೊಸ ದಾಖಲೆ ಬರೆದಿದೆ. ಕಂಪನಿಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ, ನವೆಂಬರ್ 2023 ರಲ್ಲಿ ಮಾಸಿಕ ಉತ್ಪಾದನೆ 4144 ಮೆಟ್ರಿಕ್ ಟನ್ ದಾಟಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

Mysore Sandal Soap Achieves Record Production and Sales in November 2023

ಇನ್ನು ನವೆಂಬರ್ ತಿಂಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ ರೂ. 133 ಕೋಟಿಗೂ ಅಧಿಕ ವಹಿವಾಟು ನಡೆದಿದೆ ಎಂದು ಹೇಳಿರುವ ಅವರು, ಇದಕ್ಕಾಗಿ ಹೆಚ್ಚುವರಿ ಹೂಡಿಕೆ ಮಾಡಿಲ್ಲ ಎಂದು ಹೇಳಿದ್ದಾರೆ. ಹೂಡಿಕೆ ಮಾಡದೆ, ವ್ಯವಸ್ಥೆಯನ್ನು ಸುಧಾರಣೆ ಮಾಡುವ ಮೂಲಕ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

200 ಕೋಟಿ ಆದಾಯದ ಗುರಿ

ಇನ್ನು ಕೆಎಸ್‌ಡಿಎಲ್ ಆದಾಯದ ಬಗ್ಗೆ ಗುರಿ ಹೊಂದಿರುವುದಾಗಿ ಎಂಬಿ ಪಾಟೀಲ್ ಹೇಳಿದ್ದಾರೆ. ಕಂಪನಿ ಆದಾಯ ವಾರ್ಷಿಕ 2000 ಕೋಟಿ ರೂಪಾಯಿ ದಾಟುವ ಗುರಿ ಹೊಂದಲಾಗಿದೆ.

ಮುಂದಿನ 5 ವರ್ಷಗಳಲ್ಲಿ ಕೆಎಸ್‌ಡಿಎಲ್ ವಾರ್ಷಿಕ ಆದಾಯ $ 1 ಬಿಲಿಯನ್ ಗೆ ತಲುಪುವ ಗುರಿ ಹೊಂದಲಾಗಿದೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.

ಮೈಸೂರು ಸ್ಯಾಂಡಲ್ ರಾಜ್ಯದ ಹೆಮ್ಮೆ

ಮೈಸೂರು ಅರಸರ ಕಾಲದಲ್ಲಿ ಕರ್ನಾಟಕ ಶ್ರೀಗಂಧದ ಉತ್ಪಾದನೆಗೆ ವಿಶ್ವದಲ್ಲೇ ಪ್ರಸಿದ್ಧಿ ಹೊಂದಿತ್ತು. 1916ನೇ ಇಸವಿಯಲ್ಲಿ ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಬೆಂಗಳೂರಿನಲ್ಲಿ ಸರ್ಕಾರಿ ಸೋಪ್ ಫ್ಯಾಕ್ಟರಿಯನ್ನು ಸ್ಥಾಪನೆ ಮಾಡಿದರು.

980ರಲ್ಲಿ ಸರ್ಕಾರಿ ಸೋಪ್ ಕಾರ್ಖಾನೆ ಮತ್ತು ಶಿವಮೊಗ್ಗದ ಗಂಧದೆಣ್ಣೆ ಕಾರ್ಖಾನೆಗಳನ್ನು ವಿಲೀನಗೊಳಿಸಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿ (KSDL) ಮಾಡಲಾಯಿತು. ಶ್ರೀಗಂಧದ ಎಣ್ಣೆಯನ್ನು ಬಳಸಿ ತಯಾರಾಗುವ ಜಗತ್ತಿನ ಏಕೈಕ ಸೋಪ್ ಎನ್ನುವ ಹೆಗ್ಗಳಿಕೆ ನಮ್ಮ ಮೈಸೂರು ಸ್ಯಾಂಡಲ್ ಸೋಪ್‌ನದ್ದಾಗಿದೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಉತ್ತ, ಮಾರುಕಟ್ಟೆ ಹೊಂದಿದೆ. ಮೈಸೂರು ಸ್ಯಾಂಡಲ್ ಬೇಬಿ ಸೋಪ್ ಕೂಡ ತಯಾರಿಸಲಾಗುತ್ತಿದೆ. ರಾಜ್ಯದಲ್ಲಿ ಗಂಧದ ಮರಗಳ ಉತ್ಪಾದನೆ ಕಡಿಮೆಯಾದ ಕಾರಣ, ಉತ್ಪಾದನೆ ಮೊದಲಿಗಿಂತ ಕಡಿಮೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+