Mylara Karnika: ಕಾರ್ಣಿಕ ಭವಿಷ್ಯ ವಾಣಿಯ ಇತಿಹಾಸ, ಮಹತ್ವದ ವಿವರ ಇಲ್ಲಿದೆ!
Mylara Karnika: ಕಾರ್ಣಿಕೋತ್ಸವಕ್ಕೆ ರಾಜ್ಯದಲ್ಲಿ ವಿಶೇಷ ನಂಬಿಕೆ ಹಾಗೂ ಗೌರವವಿದೆ. ಪ್ರತಿ ವರ್ಷವೂ ಕರ್ನಾಟಕದ ಜನತೆ ಈ ಭವಿಷ್ಯವಾಣಿಗಾಗಿ ಕಾದು ಕುಳಿತಿರುತ್ತಾರೆ. ಆಯಾ ವರ್ಷದಂದು ಗೊರವಯ್ಯ ಕಾರ್ಣಿಕ ಭವಿಷ್ಯ ನುಡಿಯುವುದು ಹಾಗೂ ಅದು ರಾಜ್ಯ ಮತ್ತು ದೇಶದಲ್ಲಿ ನಡೆಯುವ ಕಾರಣಕ್ಕೆ ಇದರ ಖ್ಯಾತಿ ಹೆಚ್ಚಾಗಿದೆ. ಪ್ರತಿ ವರ್ಷವೂ ಪ್ರಮುಖ ಭವಿಷ್ಯವಾಣಿಗಳು ಘಟಿಸುತ್ತಲ್ಲೇ ಇವೆ. ಹಾಗಾದರೆ ಈ ಬಾರಿಯ ಭವಿಷ್ಯವಾಣಿ ಏನಾಗಿತ್ತು ಹಾಗೂ ಇದರ ಹಿನ್ನೆಲೆ ಏನು. ಕಾರ್ಣಿಕೋತ್ಸವದ ಇತಿಹಾಸವೇನು ಎನ್ನುವ ವಿವರ ಇಲ್ಲಿದೆ.
ಕರ್ನಾಟಕದ ಪ್ರಮುಖ ಜಾತ್ರಾ ಮಹೋತ್ಸವಗಳಲ್ಲಿ ಕಾರ್ಣಿಕೋತ್ಸವವೂ ಒಂದಾಗಿದೆ. ಆದರೆ, ಕಾರ್ಣಿಕೋತ್ಸವವು ಉಳಿದ ಜಾತ್ರಾ ಮಹೋತ್ಸವ ಗಳಿಗಿಂತಲೂ ತೀರ ಭಿನ್ನವಾಗಿದೆ. ಇಲ್ಲಿಗೆ ಮಹೋತ್ಸವ ನಡೆಯುವ ಸಂದರ್ಭದಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಜನ ಸೇರುತ್ತಾರೆ. ಅಲ್ಲದೆ ರಾಜ್ಯದಾದ್ಯಂತ ಜನ ಕಾರ್ಣಿಕೋತ್ಸವ ಕೇಳುವುದಕ್ಕಾಗಿ ಕಾಯುವುದು ಇದೆ. ವಿಜಯನಗರದ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯು ಕುರುಬ ಸಮುದಾಯದ ಆರಾಧ್ಯದೈವ. ಈ ಕಾರ್ಣಿಕೋತ್ಸಕ್ಕೆ ಸಂಬಂಧಿಸಿದಂತೆ "ಈ ಟಿವಿ ಭಾರತ ಕರ್ನಾಟಕ" ವರದಿ ಮಾಡಿದೆ.

ರಾಜ್ಯದಲ್ಲಿ ಹಲವು ಪ್ರಮುಖ ಆಚರಣೆಗಳು ಹಾಗೂ ಪ್ರಮುಖ ಜಾತ್ರಾ ಮಹೋತ್ಸವಗಳು ನಡೆಯುತ್ತವೆ. ಅದರಲ್ಲಿ ಕಾರ್ಣಿಕೋತ್ಸವವೂ ಒಂದಾಗಿದ್ದು. ಇಲ್ಲಿ ಹೇಳುವ ಭವಿಷ್ಯವಾಣಿಯಿಂದ ರಾಜ್ಯದಲ್ಲಿ ಮಳೆ, ಬೆಳೆ ಹಾಗೂ ರಾಜಕೀಯ ಭವಿಷ್ಯಗಳ ಬಗ್ಗೆ ತಿಳಿಯುವುದು ಸಹ ಇದೆ. ಇನ್ನು ಈ ಜಾತ್ರಾ ಮಹೋತ್ಸವವರು ಉತ್ತರ ಕರ್ನಾಟಕದ ಜಾತ್ರಾ ಮಹೋತ್ಸವಗಳಲ್ಲೇ ಭಿನ್ನ ಹಾಗೂ ವಿಶೇಷವಾಗಿದೆ. ಇನ್ನು ಇಲ್ಲಿನ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಉಳಿದ ಜಾತ್ರೆಗಳ ಮಾದರಿಯಲ್ಲಿ ರಥೋತ್ಸವ ನಡೆಸುವುದಿಲ್ಲ. ಗೊರವಯ್ಯ ಅವರು ಸುಮಾರು 18 ಅಡಿಯಷ್ಟು ಉದ್ದನೆಯ ಬಿಲ್ಲನೇರಿ ಆಯಾ ವರ್ಷದ ಕಾರ್ಣಿಕ (ಭವಿಷ್ಯವಾಣಿಯನ್ನು) ಹೇಳುತ್ತಾರೆ. ಎಲ್ಲರಿಗೂ ಭವಿಷ್ಯ ವಾಣಿ ಕೇಳಿಸಬೇಕು ಎನ್ನುವ ಉದ್ದೇಶದಿಂದ ಮೈಕ್‌ಗಳನ್ನು ಸಹ ಅಳವಡಿಸಲಾಗುತ್ತದೆ.
ಇನ್ನು ಕಾರ್ಣಿಕ ನುಡಿಗಳು ಇಂದು ನೆನ್ನೆಯದಲ್ಲ ಇದಕ್ಕೆ ಶತಮಾನಗಳ ಇತಿಹಾಸವಿದೆ. 19ನೇ ಶತಮಾನದಿಂದಲೂ ಕಾರ್ಣಿಕ ಭವಿಷ್ಯವಾಣಿಯನ್ನು ಹೇಳಿರುವುದು ದಾಖಲಾಗುತ್ತಿದೆ. 1900 ರಿಂದ 2025 ರವರೆಗೆ ಹೇಳಿರುವ ಭವಿಷ್ಯಗಳು ಸತ್ಯವಾಗಿವೆ!

ಈ ವರ್ಷದ ಭವಿಷ್ಯವಾಣಿ ಏನು ?
ಇನ್ನು ಈ ವರ್ಷವೂ ಪ್ರತಿ ವರ್ಷದಂರೆ ಕಾರ್ಣಿಕೋತ್ಸವ ನಡೆದಿದ್ದು. ಈ ಬಾರಿಯ ಕಾರ್ಣಿಕೋತ್ಸವದಲ್ಲಿ ಕರ್ನಾಟಕಕ್ಕೆ ಸಿಹಿಸುದ್ದಿಯನ್ನೇ ಕೊಡಲಾಗಿದೆ. ಈ ಬಾರಿ ಬೇಸಿಗೆಯಲ್ಲಿ ಬಿಸಿಲು ಜಾಸ್ತಿಯಾಗಿ ಎಲ್ಲಿ ಜನ ಹಾಗೂ ಜಾನುವಾರುಗಳು ಕಳೆದ ಬಾರಿಯಂತೆಯೇ ಕಷ್ಟಪಡಬೇಕೋ ಎನ್ನುವ ಆತಂಕ ಎದುರಾಗಿತ್ತು. ಇದರ ನಡುವೆ ಈ ಬಾರಿ ರಾಜ್ಯಕ್ಕೆ ಗುಡ್‌ನ್ಯೂಸ್ ಕೊಡಲಾಗಿದೆ.
ಇಲ್ಲಿನ ಮೈಲಾರದ ಡೆಂಕನಮರಡಿ ಎನ್ನುವ ಪ್ರದೇಶದಲ್ಲಿ ಕಾರ್ಣಿಕೋತ್ಸವ ನಡೆಯುತ್ತದೆ. ಇನ್ನು ಇದು ಜಾತ್ರೆಯ ಪ್ರಮುಖ ಘಟ್ಟವಾಗಿದೆ. ಈ ಕಾರ್ಣಿಕೋತ್ಸವವನ್ನು ಕೇಳುವುದಕ್ಕೆಂದೇ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಇನ್ನು ಈ ವರ್ಷ ತುಂಬಿದ ಕೊಡ ತುಳುಕಿತಲೇ... ಪರಾಕ್.. ಎಂದು ಈ ವರ್ಷದ ಕಾರ್ಣಿಕವವನ್ನು ಗೊರವಯ್ಯ ಅವರು ನುಡಿದಿದ್ದಾರೆ.
ಸಿಪಾಯಿ ದಂಗೆಯಿಂದ ಮಳೆ - ಬೆಳೆಯ ವರೆಗೆ: ಗೊರವಯ್ಯ ಭವಿಷ್ಯವಾಣಿ ಅಥವಾ ಕಾರ್ಣಿಕೋತ್ಸವಕ್ಕೆ ಸುದೀರ್ಘ ಇತಿಹಾಸವಿದೆ. 1857ರಲ್ಲಿ ಹೇಳಿದ ಭವಿಷ್ಯವಾಣಿಗಳು ಸತ್ಯವಾಗಿದೆ. ಆ ಸಂದರ್ಭದಲ್ಲಿ ಬ್ರಟಿಷರನ್ನು ಉದ್ದೇಶಿಸಿ ಕೆಂಪು ನೊಣಗಳಿಗೆ ಕಷ್ಟ ಪ್ರಾಪ್ತಿಯಾಯಿತಲೇ.. ಪರಾಕ್ ಎಂದಿದ್ದರು ಎನ್ನುವ ಇತಿಹಾಸವಿದೆ. ಇದೇ ವರ್ಷ ಸಿಪಾಯಿ ದಂಗೆ ನಡೆದಿತ್ತು. ಆ ವೇಳೆ ಬ್ರಿಟಿಷರು ಇನ್ನಿಲ್ಲದ ಸಂಕಷ್ಟಕ್ಕೆ ತುತ್ತಾಗಿದ್ದರು. ಇನ್ನು ರಾಜ್ಯದಲ್ಲಿ ಮಳೆ - ಬೆಳೆಯ ಬಗ್ಗೆ ನುಡಿದಿರುವ ಭವಿಷ್ಯ ವಾಣಿಗಳು ಸತ್ಯವಾಗಿವೆ.
-
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
ಕರ್ನಾಟಕದ ಕರಾವಳಿಯಲ್ಲಿ ಕಾಣದ ಅಗ್ನಿಕುಂಡದ ಮೇಲೆ ಘನತ್ಯಾಜ್ಯ ವಿಲೇವಾರಿಗೆ ವೀರಾವೇಶದ ಜಿದ್ದಾಜಿದ್ದಿ: ರಾಜಾರಾಂ ತಲ್ಲೂರು ಬರಹ -
Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಮಧು ವೈ.ಎನ್ ಬರಹ -
Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ -
Rashmika Mandanna: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕನಸಿನ ಹನಿಮೂನ್: ವಿಶೇಷ ವಿಡಿಯೋ ಹಂಚಿಕೊಂಡ ಜೋಡಿ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications