Kodi Mutt Swamiji: ನಿಜವಾಯ್ತು ಕೋಡಿಮಠದ ಸ್ವಾಮೀಜಿ ಭಯಾನಕ ಭವಿಷ್ಯ
ಬೆಂಗಳೂರು, ಮಾರ್ಚ್ 29: ಕೋಡಿಮಠ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ರಾಜಕೀಯ ಹಾಗೂ ಪ್ರಪಂಚದ ಆಗು ಹೋಗುಗಳ ಬಗ್ಗೆ ಹಲವು ಭವಿಷ್ಯ ನುಡಿದಿದ್ದಾರೆ. ಇದೀಗ ಕೋಡಿಮಠದ ಸ್ವಾಮೀಜಿಗಳು ನುಡಿದ ಭವಿಷ್ಯ ಮತ್ತೊಮ್ಮೆ ನಿಜವಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ಕಳೆದ ಜೂನ್ ತಿಂಗಳಲ್ಲಿ ಕೋಡಿಮಠ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಇಬ್ಬರು ಪ್ರಧಾನಿಗಳ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದರು. ಅದರಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದೊಂದಿಗೆ ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯ ನಿಜವಾಗಿತ್ತು.
ಕೆಲ ದಿನಗಳ ಹಿಂದೆ ಕೋಡಿಮಠ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಪ್ರಪಂಚದಲ್ಲಿ ಭೂಕಂಪನ ಉಂಟಾಗಲಿದೆ. ಇದರಿಂದ ಹೆಚ್ಚು ಸಾವು ನೋವುಗಳು ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಆ ಭವಿಷ್ಯ ನಿಜವಾಗಿದೆ. ಮ್ಯಾನ್ಮಾರಲ್ಲಿ ಹಾಗೂ ಬ್ಯಾಂಕಾಕ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು 1000 ಕ್ಕೆ ಏರಿಕೆಯಾಗಿದ್ದು, ಈ ವರೆಗೂ 1,700 ಜನರು ಗಾಯಗೊಂಡಿದ್ದಾರೆ.

ಪ್ರಪಂಚದಲ್ಲಿ ಭೂಕಂಪನ ಉಂಟಾಗಲಿದೆ ಎಂದು ಈ ಹಿಂದೆಯೇ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ಇದೀಗ ಮ್ಯಾನ್ಮಾರಲ್ಲಿ ಹಾಗೂ ಬ್ಯಾಂಕಾಕ್ನಲ್ಲಿ ಭೂಕಂಪದಿಂದ ಉಂಟಾಗಿ 1000 ಕ್ಕೂ ಹೆಚ್ಚು ಜನರು ಸಾವನ್ನಾಪಿದ್ದು, ಸಾವು ನೋವಿನ ಬಗ್ಗೆ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ, ಜನರ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಅವಶೇಷಗಳ ಆಡಿ ಇನ್ನೂ ನೂರಾರು ಮಂದಿ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಕೆಲ ದಿನಗಳ ಹಿಂದೆ ಕೋಠಿಮಠದ ಶ್ರೀಗಳು ಪ್ರಪಂಚದಲ್ಲಿ ಭೂಕಂಪನ ಉಂಟಾಗಲಿ ಮಾರ್ಚ್.2, 2025ರಂದು ಎಂಬ ಭವಿಷ್ಯ ಇಂದು ನಿಜವಾಗಿದ್ದರು. ಮ್ಯಾನ್ಮಾರ್ ಹಾಗೂ ಬ್ಯಾಂಕಾಕ್ ನಲ್ಲಿ 7.7 ತೀವ್ರತೆಯಲ್ಲಿ ಪ್ರಬಲ ಭೂಕಂಪನ ಉಂಟಾಗಿದೆ. ಇನ್ನೂ ರಾಜ್ಯ ರಾಜಕೀಯದ ಕುರಿತು ಕೋಠಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಮುಂದಿನ ಮುಖ್ಯಮಂತ್ರಿಯಾರಾಗ್ತಾರೆ, ಡಿಕೆ ಶಿವಕುಮಾರ್ ಜೊತೆ ಅಧಿಕಾರ ಹಂಚಿಕೆ ಯಾವಾಗ ಎಂಬ ಚರ್ಚೆಯ ನಡುವೆ, ಈ ಭವಿಷ್ಯವಾಣಿ ಹೊರಬಿದ್ದಿದೆ. ಸಿಎಂ ಸಿದ್ಧರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನ ಭದ್ರ ಎಂಬುದಾಗಿಯೇ ಅಲ್ಲದೇ ಕೋಡಿಮಠ ಶ್ರೀ ಭವಿಷ್ಯದಲ್ಲಿ ತಿಳಿಸಿದ್ದರು.
ಹಾಲು ಮತ ಸಮಾಜವು ಪ್ರಾಚೀನ ಕಾಲದಿಂದ ದೈವಾರಾಧನೆ ಮಾಡುವ ಸಮಾಜವಾಗಿದೆ. ಹಾಲು ಕೆಟ್ಟರೂ ಹಾಲು ಸಮಾಜ ಕೆಡದು. ಹಕ್ಕ ಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು. ಹಾಲು ಮತ ಸಮಾಜದವರಲ್ಲಿ ರಾಜ್ಯದ ಅಧಿಕಾರವಿದೆ. ಸಿಎಂ ಕುರ್ಚಿಯಿಂದ ಬಿಡಿಸುವುದು ಕಷ್ಟ. ಅದು ಸುಲಭವೂ ಅಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅವರಾಗೇ ಸಿಎಂ ಸ್ಥಾನ ಬಿಡಬೇಕೇ ಹೊರತು, ನೀವು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ಕೋಠಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಇನ್ನೂ ಪ್ರಪಂಚದಲ್ಲಿ ಭೂಕಂಪನ, ಜನರ ಸಾವು ನೋವು ಆಗುವುದು. ಕಟ್ಟಡ ಬೀಳುವುದು ಮುಂದುವರೆಯಲಿದೆ. ಭೂ ಸುನಾಮಿ, ಜಲ ಸುನಾಮಿ, ವಾಯು ಸುನಾಮಿ ಕಾಣಿಸಿಕೊಳ್ಳುತ್ತದೆ. ಇಲ್ಲಿಯವರೆಗೆ ಜಲ ಸುನಾಮಿ ಆಗಿತ್ತು. ಈ ಭಾರಿ ಭೂ ಸುನಾಮಿ ಇದೆ. ಜಲ ಸುನಾಮಿ ಹಾಗೂ ವಾಯು ಸುನಾಮಿ ಹೆಚ್ಚಾಗಲಿದೆ. ಬಾಹ್ಯ ಸುನಾಮೆ ಅಂದ್ರೆ ಬಾಹ್ಯಾಕಾಶದಲ್ಲಿ ತೊಂದರೆ ಆಗಲಿದೆ. ರಾಜ್ಯದಲ್ಲಿ ತೊಂದರೆ ತಾಪತ್ರೆಯವಿಲ್ಲ. ಮಳೆ ಬೆಳೆ ಚೆನ್ನಾಗಿ ಆಗುತ್ತದೆ. ಸುಭೀಕ್ಷೆಯಿಂದ ಕೂಡಿರಲಿದೆ. ನಾಡಿನಲ್ಲಿ ಯಾವುದೇ ಕೊರತೆ ಕಾಣೋದಿಲ್ಲ ಎಂದು ಕೋಠಿಮಠ ಶ್ರೀ ಭವಿಷ್ಯ ನುಡಿದಿದ್ದರು.












Click it and Unblock the Notifications