Siddaramaiah: ಸಿಎಂ ಕುರ್ಚಿ ಖಾಲಿ ಇದ್ದರಲ್ಲವೇ ಬದಲಾವಣೆ! ಸಚಿವರು ಗರಂ
ಹುಬ್ಬಳ್ಳಿ, ನವೆಂಬರ್ 29: ರಾಜ್ಯದಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಬಳಿಕವು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಕೂಗಿ ಕೇಳಿ ಬರುತ್ತಿದೆ. ಈ ಕುರಿತು ಸಿಎಂ ಆಪ್ತರಲ್ಲಿ ಒಬ್ಬರಾದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿ ಕುರ್ಚಿ ಖಾಲಿ ಇದ್ದರೇ ಅಲ್ವಾ..? ಸಿಎಂ ಬದಲಾವಣೆ ವಿಚಾರ ಎಂದು ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಹೆಸ್ಕಾಂ ಕಚೇರಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಹಾಸನದಲ್ಲಿ ನಡೆಯುತ್ತಿರುವ ಅಹಿಂದ ಸಮಾವೇಶದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ನಾನು ತಿಳಿದುಕೊಳ್ಳುತ್ತೇನೆ. ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಕುರ್ಚಿ ಖಾಲಿ ಇದ್ದರೇ ಅಲ್ವಾ ತಾನೆ, ಸಿಎಂ ಬದಲಾವಣೆ ವಿಚಾರ ಬರೋದು. ಇದೆಲ್ಲಾ ಮಾಧ್ಯಮದ ಸೃಷ್ಟಿ. ನಮ್ಮಲ್ಲಿ ಸಿಎಂ ಬದಲಾವಣೆ ವಿಚಾರವೇ ಇಲ್ಲ ಎಂದು ಅವರು ಉತ್ತರಿಸಿದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಿಡಬ್ಲುಸಿ ಸದಸ್ಯರಿದ್ದಾರೆ. ಈ ನಿಟ್ಟಿನಲ್ಲಿ ಸಭೆಗೆ ಹಾಜರಾಗಲು ದೆಹಲಿಗೆ ಹೋಗಿದ್ದಾರೆ. ಸಿಎಂ ಖುರ್ಚಿ ಖಾಲಿ ಇಲ್ಲವೇ ಇಲ. ಸಿಎಂ ಬದಲಾವಣೆ ವಿಚಾರ, ಬೆಳವಣಿಗೆ ರಾಜ್ಯದಲ್ಲಿ ಇಲ್ಲ. ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಇದೆ. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕೆಂದರೂ ಅದು ಹೈ ಕಮಾಂಡ್ ತೆಗೆದುಕೊಳ್ಳುತ್ತದೇ ಎಂದು ಅವರು ಹೇಳಿದರು.
ಸಿಎಂ ಚೇಂಜ್ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಜಮೀರ್ ಅಹ್ಮದ್ ಅವರ ಬಳಿಕ ಮಾತನಾಡಿದ ನಮ್ಮ ಚಿವ ಸತೀಶ್ ಜಾರಕಿಹೊಳಿ ಅವರು, ಆಡಳಿತ ಪಕ್ಷದ ಕುರಿತು ಟೀಕಿಸುತ್ತಿದ್ದ ಬಿಜೆಪಿಯ ಮನೆ ಈಗ ಒಡೆದು ಹೋಗಿದೆ. ಕಾಂಗ್ರೆಸ್ ಯಾವುದೇ ಸಮಾವೇಶ, ಏನೇ ಕಾರ್ಯ ಮಾಡಿದರೂ ಜನಹಿತಕ್ಕಾಗಿ ಮಾಡುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿ, ಸಚಿವ ಸಂಪುಟದ ಬಗ್ಗೆ ಮಾತನಾಡುವ ಅಧಿಕಾರ ನಮಗೆ ಇಲ್ಲ. ಅದನ್ನೆಲ್ಲ ತೀರ್ಮಾನಿಸಲು ಕೇಂದ್ರ ಕಾಂಗ್ರೆಸ್ ಹೈ ಕಮಾಂಡ್ ಇದೆ, ವರಿಷ್ಠರು ಇದ್ದಾರೆ ಎಂದರು.
ಕೇಲವ ಹಾಸನದಲ್ಲಿ ಅಷ್ಟೇ ಅಲ್ಲ ಕರ್ನಾಟಕದ ಮೂಲೆ ಮೂಲೆಗಳಲ್ಲಿಯೂ ಅಹಿಂದ್ ಸಮಾವೇಶ ಮಾಡಲಾಗುತ್ತದೆ. ಇದು ಯಾವುದೇ ಒಬ್ಬ ವ್ಯಕ್ತಿಗತವಾದಂತ ಸಮಾವೇಶ ಅಲ್ಲ. ಕಾಂಗ್ರೆಸ್ ಬ್ಯಾನರ್ ಅಡಿಯಲ್ಲಿ ಕಾಂಗ್ರೆಸ್ ಪಕ್ಷವೇ ಮಾಡುವ ಸಮಾವೇಶ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ಈ ಐದು ವರ್ಷವೋ..? ಮುಂದಿನ ಐದು ವರ್ಷವೂ ಗೊತ್ತಿಲ್ಲ.ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಅವರು, ಜೆಡಿಎಸ್, ಬಿಜೆಪಿ ಪಕ್ಷದಲ್ಲಿಯೂ ಸಿಎಂ ಬದಲಾವಣೆ ಆಗಿವೆ. ಆದರೆ ನಮ್ಮ ಪಕ್ಷದ ನಿರ್ಧಾರದ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಸಿಎಂ ಬದಲಾವಣೆ ಕುರಿತು ಮಾತನಾಡಿದ್ದವರಿಗೆ ಅವರು ತಿರುಗೇಟು ಕೊಟ್ಟರು.












Click it and Unblock the Notifications